ಎಲ್ಲ ಕಾಲಕ್ಕೂ ಪರಿಣಾಮಕಾರಿ ಮಾಧ್ಯಮ ರೇಡಿಯೋ: ಲತೀಶ್

KannadaprabhaNewsNetwork |  
Published : Jan 15, 2025, 12:48 AM IST
11 | Kannada Prabha

ಸಾರಾಂಶ

ಪ್ರಸ್ತುತ ಭಾರತದಲ್ಲಿ ೪೦೦ ಕ್ಕೂ ಹೆಚ್ಚು ಆಕಾಶವಾಣಿ ರೇಡಿಯೋ ಸ್ಟೇಷನ್ ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಸಾಮಾಜಿಕ ನೆಲೆಯಲ್ಲಿ ವಿಭಿನ್ನ ಮತ್ತು ವಿನೂತನ ಕಾರ್ಯಕ್ರಮಗಳಿಂದ ಆಕಾಶವಾಣಿ ಜನರಿಗೆ ಮಾಹಿತಿ ತಲುಪಿಸುವ ಪ್ರಬಲ ಮಾಧ್ಯಮವಾಗಿ ಮುಂದುವರಿಯುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಜಗತ್ತಿನಲ್ಲಿ ಅತಿಹೆಚ್ಚು ಬಳಕೆಯಾದ ಸಮೂಹ ಸಂವಹನ ಮಾಧ್ಯಮಗಳಲ್ಲಿ ರೇಡಿಯೋ ಸಹ ಒಂದು. ೨೦ನೇ ಶತಮಾನದಲ್ಲಿ ಪ್ರಮುಖ ಮಾಧ್ಯಮವಾಗಿ ಉದಯಿಸಿ, ಇಂದಿಗೂ ತನ್ನ ಪ್ರಸ್ತುತತೆಯನ್ನು ಕಾಪಾಡಿಕೊಂಡು ಬಂದಿದೆ ಎಂದು ಮಂಗಳೂರು ಆಕಾಶವಾಣಿಯ ಪ್ರಸರಣ ಕಾರ್ಯನಿರ್ವಾಹಕ ಲತೀಶ್ ಪಾಲ್ದಾನೆ ನುಡಿದರು.

ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವತಿಯಿಂದ ಜೆಎಂಸಿ ಹಾಲ್‌ನಲ್ಲಿ ನಡೆದ ‘ಡಿಜಿಟಲ್ ಯುಗದಲ್ಲಿ ರೇಡಿಯೋ ಅವಕಾಶಗಳು ಹಾಗೂ ಸವಾಲುಗಳು’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಪ್ರಸ್ತುತ ಭಾರತದಲ್ಲಿ ೪೦೦ ಕ್ಕೂ ಹೆಚ್ಚು ಆಕಾಶವಾಣಿ ರೇಡಿಯೋ ಸ್ಟೇಷನ್ ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಸಾಮಾಜಿಕ ನೆಲೆಯಲ್ಲಿ ವಿಭಿನ್ನ ಮತ್ತು ವಿನೂತನ ಕಾರ್ಯಕ್ರಮಗಳಿಂದ ಆಕಾಶವಾಣಿ ಜನರಿಗೆ ಮಾಹಿತಿ ತಲುಪಿಸುವ ಪ್ರಬಲ ಮಾಧ್ಯಮವಾಗಿ ಮುಂದುವರಿಯುತ್ತಿದೆ ಎಂದರು. ವಿದ್ಯಾರ್ಥಿಗಳಿಗೆ ರೇಡಿಯೋ ಸಂದರ್ಶನಕ್ಕೆ ಪ್ರಶ್ನಾವಳಿ ರಚಿಸುವ ಚಟುವಟಿಕೆ ನೀಡಿ, ಪರಿಣಾಮಕಾರಿ ಪ್ರಶ್ನಾವಳಿ ತಯಾರಿಸುವ ಕುರಿತು ತಿಳಿಸಿದರು. ರೇಡಿಯೋದಲ್ಲಿ ಪ್ರಸಾರವಾಗುವ ಡ್ರಾಮಾ , ಡಾಕ್ಯೂಮೆಂಟರಿಯ ತುಣುಕನ್ನು ವಿದ್ಯಾರ್ಥಿಗಳಿಗೆ ಆಲಿಸಿದರು. ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕಿ ಸುಶ್ಮಿತಾ ಜೆ. ಇದ್ದರು. ವಿದ್ಯಾರ್ಥಿ ಸಂಯೋಜಕಿ ವೀಕ್ಷಿತಾ ವಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ