ಶಿಕ್ಷಣದೊಂದಿಗೆ ಆಧುನಿಕ ತಂತ್ರಜ್ಞಾನದ ಪರಿಣಾಮಕಾರಿ ಅಧ್ಯಯನ ಅಗತ್ಯ: ಅಮಿತಾಬ್‌ ಕಾಂತ್

KannadaprabhaNewsNetwork |  
Published : Oct 20, 2024, 01:55 AM IST
11 | Kannada Prabha

ಸಾರಾಂಶ

ಘಟಿಕೋತ್ಸವದಲ್ಲಿ 2632 ಅಭ್ಯರ್ಥಿಗಳಿಗೆ ವೈದ್ಯ, ವೈದ್ಯಕೀಯ, ನರ್ಸಿಂಗ್, ಅಲ್ಲಾಯಿಡ್ ಹೆಲ್ತ್ ಹಾಗೂ ಬೇಸಿಕ್ ಸೈನ್ಸ್, ವಾಣಿಜ್ಯ ಮತ್ತು ನಿರ್ವಹಣೆ, ವಿಜ್ಞಾನ, ಜೌಷಧಶಾಸ್ತ್ರ, ಕಲೆ ಮತ್ತು ವಿಜ್ಞಾನ ವಿಭಾಗಗಳ ಮೀಲಜ ಪೋಸ್ಟ್ ಡೊಕ್ಟೋರಲ್ ಫೆಲೋಷಿಪ್ , ಸ್ನಾತಕೋತ್ತರ ಪದವಿಗಳು, ಸ್ನಾತಕೋತ್ತರ ಡಿಪ್ಲೋಮಾ ಗಳು ಮತ್ತು ಸ್ನಾತಕ ಪದವಿಗಳನ್ನು ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಇತ್ತೀಚಿನ ಕಾಲಘಟ್ಟದಲ್ಲಿ ಆಧುನಿಕತೆ, ತಾಂತ್ರಿಕ ಬೆಳವಣಿಗೆಗಳ ಪರಿಣಾಮ ಜಗತ್ತು ವೇಗವಾಗಿ ಬದಲಾಗುತ್ತಿದೆ ಜೊತೆಗೆ ಜಾಗತಿಕ ಸವಾಲುಗಳು ಕೂಡಾ ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಪದವೀಧರರ ಜವಬ್ದಾರಿಯೂ ಹೆಚ್ಚಿದ್ದು, ಶಿಕ್ಷಣದೊಂದಿಗೆ ಆಧುನಿಕತೆಗೆ ಪೂರಕವಾಗಿ ಹೊಸ ಜ್ಞಾನಶಿಸ್ತುಗಳ ಪರಿಣಾಮಕಾರಿ ಅಧ್ಯಯನ ಅಗತ್ಯ ಎಂದು ಭಾರತದ ಜಿ.20 ಶೆರ್ಪಾ ಮತ್ತು ನೀತಿ ಆಯೋಗದ ಮಾಜಿ ಸಿಇಒ ಮತ್ತು ಅಮಿತಾಬ್ ಕಾಂತ್‌ ಹೇಳಿದರು.

ಅವರು ಶನಿವಾರ ಯೆನಪೋಯ ಪರಿಗಣಿತ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು. ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಸೇರಿದಂತೆ ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಿದೆ. ಮತ್ತು ವಿಫುಲ ಅವಕಾಶಗಳೊಂದಿಗೆ ಬದಲಾವಣೆಗಳಿಗೂ ಕಾರಣವಾಗುತ್ತಿವೆ. ವಿದ್ಯಾರ್ಥಿಗಳು, ಯುವ ಸಮುದಾಯ ಈ ಬದಲಾವಣೆಯ ದೀಪಸ್ತಂಭ ಇದ್ದಂತೆ ಎಂದು ಹೇಳಿದರು.

ಯೆನೆಪೋಯ ಪರಿಗಣಿತ ವಿವಿಯ ಕುಲಾಧಿಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯೆನೆಪೋಯ ಪರಿಗಣಿತ ವಿವಿ ಕುಲಪತಿ ಡಾ.ಎಂ. ವಿಜಯ್ ಕುಮಾರ್ ವಾರ್ಷಿಕ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಉಪಕುಲಪತಿ ಡಾ.ಬಿ.ಎಚ್. ಶ್ರೀಪತಿ ರಾವ್, ಕುಲಸಚಿವ ಡಾ. ಗಂಗಾಧರ ಸೋಮಯಾಜಿ, ಪರಿಕ್ಷಾಂಗ ಕುಲಸಚಿವ ಡಾ.ಬಿ.ಟಿ. ನಂದೀಶ್, ಯೆನೆಪೋಯ ವಿವಿಯ ಸಹಕುಲಾಧಿಪತಿ ಫರ್ಹಾದ್ ಯೆನೆಪೋಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಯೆನೆಪೋಯ ಅಬ್ದುಲ್ಲಾ ಜಾವೆದ್, ಯೆನೆಪೋಯ ಡೆಂಟಲ್ ಕಾಲೇಜ್ ಪ್ರಾಂಶುಪಾಲ ಡಾ. ಲಕ್ಷ್ಮೀಕಾಂತ್‌, ಯೆನೆಪೋಯ ಮೆಡಿಕಲ್ ಕಾಲೇಜು ಡಾ.ಎಂ.ಎಸ್. ಮೂಸಬ್ಬ ಮೊದಲಾದವರು ಇದ್ದರು.

ಪದವಿ ಪ್ರದಾನ: ಘಟಿಕೋತ್ಸವದಲ್ಲಿ 2632 ಅಭ್ಯರ್ಥಿಗಳಿಗೆ ವೈದ್ಯ, ವೈದ್ಯಕೀಯ, ನರ್ಸಿಂಗ್, ಅಲ್ಲಾಯಿಡ್ ಹೆಲ್ತ್ ಹಾಗೂ ಬೇಸಿಕ್ ಸೈನ್ಸ್, ವಾಣಿಜ್ಯ ಮತ್ತು ನಿರ್ವಹಣೆ, ವಿಜ್ಞಾನ, ಜೌಷಧಶಾಸ್ತ್ರ, ಕಲೆ ಮತ್ತು ವಿಜ್ಞಾನ ವಿಭಾಗಗಳ ಮೀಲಜ ಪೋಸ್ಟ್ ಡೊಕ್ಟೋರಲ್ ಫೆಲೋಷಿಪ್ , ಸ್ನಾತಕೋತ್ತರ ಪದವಿಗಳು, ಸ್ನಾತಕೋತ್ತರ ಡಿಪ್ಲೋಮಾ ಗಳು ಮತ್ತು ಸ್ನಾತಕ ಪದವಿಗಳನ್ನು ಪ್ರದಾನ ಮಾಡಲಾಯಿತು. ಜೊತೆಗೆ 25 ಅಭ್ಯರ್ಥಿಗಳಿಗೆ ಪಿಎಚ್ .ಡಿ ಪದವಿಗಳನ್ನು ಪ್ರದಾನ ಹಾಗೂ ವಿವಿಧ ಸ್ನಾತಕ ಕೋರ್ಸ್‌ಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ 10 ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!