ಅಂತರ್ಗತ ಶಕ್ತಿಯ ಯುಕ್ತ ಬಳಕೆ ಯಶಸ್ಸಿಗೆ ಮೂಲ ಕಾರಣ : ಜಾನ್ಸನ್ ಡಿ ಸೋಜಾ

KannadaprabhaNewsNetwork |  
Published : Oct 31, 2026, 02:45 AM IST
ಫೋಟೋ: 29ಪಿಟಿಆರ್-ಕಾನೂನು ಮಾಹಿತಿಕೊಂಬೆಟ್ಟು ಪ್ರೌಢಶಾಲೆಯಲ್ಲಿ ಕಾನೂನು ಮಾಹಿತಿ ಕಾರ್ಯಾಗಾರ ನಡೆಯಿತು.  | Kannada Prabha

ಸಾರಾಂಶ

ಪ್ರತಿಯೊಬ್ಬ ವ್ಯಕ್ತಿಗೂ ಸಾಧನೆಯ ಹಾದಿಯಲ್ಲಿ ಯಶಸ್ವಿಯಾಗಿ ಮುನ್ನಡೆಯುವ ಸಾಮರ್ಥ್ಯವಿರುತ್ತದೆ. ಆತ ತನ್ನೊಳಗೆ ಅಂತರ್ಗತವಾಗಿರುವ ಸಾಮರ್ಥ್ಯವನ್ನು ಯುಕ್ತವಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮವಾದ ಅವಕಾಶಗಳ ಹಾದಿಯಲ್ಲಿರುತ್ತಾರೆ. ತಮಗೆ ದೊರೆಯುವ ಎಲ್ಲಾ ಉತ್ತಮ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಪ್ರಜೆಯಾಗಿ ಬೆಳೆಯುವ ದಾರಿಯಲ್ಲಿ ಸಾಗಬೇಕು ಎಂದು ಪುತ್ತೂರು ನಗರ ಆರಕ್ಷಕ ಠಾಣೆಯ ಇನ್ಸ್ಪೆಕ್ಟರ್ ಜಾನ್ಸನ್ ಡಿ ಸೋಜಾ ಹೇಳಿದರು.

ಪುತ್ತೂರು : ಪ್ರತಿಯೊಬ್ಬ ವ್ಯಕ್ತಿಗೂ ಸಾಧನೆಯ ಹಾದಿಯಲ್ಲಿ ಯಶಸ್ವಿಯಾಗಿ ಮುನ್ನಡೆಯುವ ಸಾಮರ್ಥ್ಯವಿರುತ್ತದೆ. ಆತ ತನ್ನೊಳಗೆ ಅಂತರ್ಗತವಾಗಿರುವ ಸಾಮರ್ಥ್ಯವನ್ನು ಯುಕ್ತವಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮವಾದ ಅವಕಾಶಗಳ ಹಾದಿಯಲ್ಲಿರುತ್ತಾರೆ. ತಮಗೆ ದೊರೆಯುವ ಎಲ್ಲಾ ಉತ್ತಮ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಪ್ರಜೆಯಾಗಿ ಬೆಳೆಯುವ ದಾರಿಯಲ್ಲಿ ಸಾಗಬೇಕು ಎಂದು ಪುತ್ತೂರು ನಗರ ಆರಕ್ಷಕ ಠಾಣೆಯ ಇನ್ಸ್ಪೆಕ್ಟರ್ ಜಾನ್ಸನ್ ಡಿ ಸೋಜಾ ಹೇಳಿದರು.

ಅವರು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಲ್ಲಿ ಸುರಕ್ಷಿತ್ ಬಚ್ಚನ್ ಅಭಿಯಾನ್ ಕಾರ್ಯಕ್ರಮದ ಅಡಿಯಲ್ಲಿ ಪೊಲೀಸ್ ಉಪಾಧಿಕ್ಷಕರ ಕಚೇರಿ ಪುತ್ತೂರು ಉಪವಿಭಾಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು ಹಾಗೂ ವಕೀಲರ ಸಂಘ (ರಿ.) ಪುತ್ತೂರು ಇವುಗಳ ಜಂಟಿ ಸಹಯೋಗದಲ್ಲಿ ಪುತ್ತೂರಿನ ಕೊಂಬೆಟ್ಟು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅ.28ರಂದು ನಡೆದ ಕಾನೂನು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ಶಾಲಾ ಉಪ ಪ್ರಾಂಶುಪಾಲ ನಾಗರಾಜ್ ಭಟ್ ವಹಿಸಿದ್ದರು. ವಕೀಲೆ ಹರಿಣಾಕ್ಷಿ ಜೆ.ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾನೂನು ಮಾಹಿತಿ ನೀಡಿದರು. ಪುತ್ತೂರು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಂತೋಷ್ ಸೈಬರ್ ಅಪರಾಧಗಳ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಬ್ ಇನ್ಸ್ಪೆಕ್ಟರ್ ಸೇಸಮ್ಮ ಉಪಸ್ಥಿತರಿದ್ದರು.ಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಯುಜಿನಾ ಪಿ. ಸ್ವಾಗತಿಸಿದರು. ಕುಸುಮಾವತಿ ವಂದಿಸಿದರು. ಪೊಲೀಸ್ ಠಾಣಾ ಸಿಬ್ಬಂದಿ, ಶಿಕ್ಷಕ ವೃಂದದವರು, ಲೀಗಲ್ ಏಯ್ಡ್ ಜ್ಯೋತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಕಸಿತ ಕರ್ನಾಟಕ 2047ಕ್ಕಾಗಿ ಸಿಎಂ ಡಿಕೆ ಸಪ್ತ ಯೋಜನೆ
ಮೊಸರು 14 ರು. ದುಬಾರಿ! - ಅರ್ಧಲೀಟರ್‌ ಮೊಸರು ದರ 6 ರು. ಏರಿಕೆ