ಕನ್ನಡಪ್ರಭ ವಾರ್ತೆ ಬೀದರ್
ಕಳೆದ ಒಂದೆರಡು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಸವ ತತ್ತ್ವ, ಲಿಂಗಾಯತ ಧರ್ಮ, ಬಸವಾದಿ ಶರಣರು, ಮಠಾಧೀಶರು ಹಾಗೂ ಬಸವಪರ ಹೋರಾಟಗಾರರ ವಿರುದ್ಧ ರವಿ ಹುಂಜ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈಗ ‘ಬಸವ ಮಂಟಪ’ ಕೃತಿಯನ್ನು ಹೊರ ತಂದಿದ್ದಾರೆ ಎಂದು ಆರೋಪಿಸಿದರು.
ರವಿ ಹುಂಜ ಅವರ ‘ಬಸವ ಮಂಟಪ’ ಕೃತಿಯಲ್ಲಿ ಬಸವ ತತ್ತ್ವದ ಪ್ರಚಾರಕರು, ಮಠಾಧೀಶರು ಹಾಗೂ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಟ ನಡೆಸಿದ ಅನೇಕ ಮುಖಂಡರ ವಿರುದ್ಧ ಅವಹೇಳನಕಾರಿ ಬರಹಗಳಿವೆ. ಕೃತಿಯಲ್ಲಿರುವ ಆಕ್ಷೇಪಾರ್ಹ ಅಂಶಗಳನ್ನು ಪರಿಶೀಲಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು.ಪ್ರತಿಕೃತಿ ದಹಿಸಿ ನಂತರ ನಗರದ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ರವಿ ಹುಂಜ ವಿರುದ್ಧ ಪ್ರಕರಣ ದಾಖಲಿಸಿದರು. ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಡ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ್, ಪೂಜ್ಯ ಚನ್ನಬಸವಾನಂದ ಸ್ವಾಮಿ, ಪೂಜ್ಯ ಬಸವಪ್ರಭು ಸ್ವಾಮಿಜಿ, ಮಾತೆ ಸತ್ಯಾದೇವಿ, ಸಮಾಜ ದ ಪ್ರಮುಖರಾದ ಸೋಮಶೇಖರ ಪಾಟೀಲ್ ಸಿದ್ದಯ್ಯ ಕವಡಿಮಠ, ಕುಶಾಲರಾವ ಪಾಟೀಲ್ ಖಾಜಾಪೂರ, ರವಿ ದೇಶಮುಖ, ರಾಜೇಂದ್ರ ಜೋನ್ನಿಕೇರಿ, ಹಾವ ಶೆಟ್ಟಿ ಪಾಟೀಲ್, ಚಂದ್ರಕಾಂತ ಮಿರ್ಚೆ, ಯೋಗೇಂದ್ರ ಯದಲಾಪೂರೆ, ಅಲ್ಲಮಪ್ರಭು ನಾವದಗೇರೆ, ಸುಲೋಚನಾ, ಸುಮನ ರಾಜಕುಮಾರ, ಪೂರ್ಣಿಮಾ ಪಾಟೀಲ್, ವಿಜಯಕುಮಾರ ಪಾಟೀಲ್ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.