ಹಾನಗಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ತಾಲೂಕಿನ ಅಭಿವೃದ್ಧಿಗೆ ಅತ್ಯಂತ ಪ್ರೀತಿಯಿಂದ ಅನುದಾನ ನೀಡಿ ನಾವು ನುಡಿದಂತೆ ನಡೆಯಲು ಶಕ್ತಿ ತುಂಬಿ ಜನತೆಯ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಭಾನುವಾರ ತಾಲೂಕಿನ ಅಕ್ಕಿಆಲೂರಿನಲ್ಲಿ ₹650 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರಾವರಿ ಯೋಜನೆಗಳನ್ನು ಸಫಲಗೊಳಿಸಿ ತಾಲೂಕಿನ ರೈತರಿಗೆ ನೆಮ್ಮದಿ ನೀಡಿವ ಉದ್ದೇಶ ನಮ್ಮದಾಗಿದೆ.
ಬೈಪಾಸ್- ಬೇಡ್ತಿ ನದಿ: ಪಡುಬಿದರಿ- ಚಿಕ್ಕಾಲಗುಡ್ಡ ರಸ್ತೆಗೆ ಹಾನಗಲ್ಲ ಪ್ರದೇಶದಲ್ಲಿ ಶೀಘ್ರ ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ. ಅಕ್ಕಿಆಲೂರು ಪಟ್ಟಣ ಪಂಚಾಯಿತಿಯಾಗಲು ಸರ್ಕಾರದ ಸಮ್ಮತಿ ಬೇಕಾಗಿದೆ. ಎಲ್ಲದಕ್ಕೂ ಮುಖ್ಯವಾಗಿ ವರದಾ ಬೇಡ್ತಿ ನದಿ ಜೋಡಣೆ ರೈತರ ಹಿತಕ್ಕಾಗಿ ಅತ್ಯವಶ್ಯವಾದ ಬೇಡಿಕೆ ನಮ್ಮದಾಗಿದ್ದು, ನಮ್ಮ ಸರ್ಕಾರ ಈ ಯೋಜನೆಗಳಿಗೆ ಅನುದಾನ ನೀಡಿ ಸಹಕರಿಸುವ ಪೂರ್ಣ ಭರವಸೆ ಇದೆ ಎಂದರು.
ಉದಾಸಿ- ಮನೋಹರ ನೆನಪು: ಬಾಳಂಬೀಡ ಏತ ನೀರಾವರಿ ಯೋಜನೆ ಕಾಂಗ್ರೇಸ್ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ ನೀರಾವರಿ ಸಚಿವರಿದ್ದಾಗ 2019ರ ಜುಲೈ ತಿಂಗಳಿನಲ್ಲಿ ಅನುಮೋದನೆಯಾಗಿದೆ. ನಂತರ ನಮ್ಮ ಸರ್ಕಾರ ಪತನವಾಗಿದ್ದರಿಂದ ಮುಂದಿನ ಬಿಜೆಪಿ ಸರ್ಕಾರಕ್ಕೆ ಈ ಯೋಜನೆ ಸಾಕಾರಗೊಳಿಸಲು ಒತ್ತಾಯಿಸಿದ್ದೇವು. ಈ ಯೋಜನೆಯ ಸಾಕಾರದಲ್ಲಿ ಮಾಜಿ ಸಚಿವರಾದ ದಿ. ಸಿ.ಎಂ. ಉದಾಸಿ ಹಾಗೂ ದಿ. ಮನೋಹರ ತಹಶೀಲ್ದಾರ ಅವರ ಶ್ರಮವನ್ನು ಶಾಸಕ ಶ್ರೀನಿವಾಸ ಮಾನೆ ನೆನೆದರು.ನೀರಾವರಿ ಯೋಜನೆ ಮೂಲಕ ರೈತರಿಗೆ ನೆಮ್ಮದಿ ನೀಡಲು ಯತ್ನ: ಶಾಸಕ ಶ್ರೀನಿವಾಸ ಮಾನೆEfforts are being made to provide relief to farmers through irrigation projects: MLA Srinivas Maneಹಾವೇರಿ ಸುದ್ದಿ, ಶಾಸಕ ಶ್ರೀನಿವಾಸ ಮಾನೆ, ಅಕ್ಕಿಆಲೂರು, Haveri News, MLA Srinivasa Mane, Akkialurಈಗಾಗಲೆ ಬಾಳಂಬೀಡ, ಹಿರೇಕಾಂಶಿ, ಬಸಾಪೂರ ನೀರಾವರಿ ಯೋಜನೆಗಳು ಸಾಕಾರಗೊಂಡಿವೆ. ಕೆಲವೇ ದಿನಗಳಲ್ಲಿ ನರೇಗಲ್ಲ, ಬ್ಯಾಗವಾದಿ, ಕೂಸನೂರ ಏತ ನೀರಾವರಿಗಳನ್ನು ಮಂಜೂರುಗೊಳಿಸಲಾಗುತ್ತದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.