ಪ್ರಾಥಮಿಕ ಗ್ರಾಮೀಣ ಕೃಷಿ ಸಂಘದ ಅಭಿವೃದ್ಧಿಗೆ ಶ್ರಮ: ಶ್ರೀಧರ್‌

KannadaprabhaNewsNetwork |  
Published : Jan 01, 2026, 02:30 AM IST
31ಕೆಎಂಎನ್‌ಡಿ-9ಡಿ. ಹಲಸಹಳ್ಳಿ  ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ನೂತನ ವರ್ಷದ  ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ಸಂಘವು ಐವತ್ತು ವರ್ಷಗಳನ್ನು ಪೂರೈಸಿದ್ದು, ಪ್ರಥಮ ಬಾರಿಗೆ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದೇವೆ. ರೈತರಿಗೆ ಸಕಾಲಕ್ಕೆ ಸಾಲ ನೀಡಿ ಅವರ ಆರ್ಥಿಕ ಸ್ಥಿತಿ ಉತ್ತಮಗೊಂಡು ಸಕಾಲದಲ್ಲಿ ಸಾಲ ಮರು ಪಾವತಿಸುವ ಮೂಲಕ ಸಂಘದ ಅಭಿವೃದ್ಧಿಗೆ ನೆರವಾಗಿ.

ಕನ್ನಡಪ್ರಭ ವಾರ್ತೆ ಹಲಗೂರು

ಸಮೀಪದ ಡಿ.ಹಲಸಹಳ್ಳಿ ಗ್ರಾಮದಲ್ಲಿರುವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸೂಚನೆ, ಸಲಹೆ ಪಡೆದು ಸಂಘವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಶ್ರಮಿಸುತ್ತೇನೆ ಎಂದು ಸಂಘದ ಅಧ್ಯಕ್ಷ ಶ್ರೀಧರ್ ತಿಳಿಸಿದರು.

ಬುಧವಾರ ಬೆಳಗ್ಗೆ ಸಂಘದ ಆವರಣದಲ್ಲಿ ನೂತನ ವರ್ಷದ ಕ್ಯಾಲೆಂಡರ್‌ ಬಿಡುಗಡೆ ಮಾಡಿ ಮಾತನಾಡಿ, ಸಂಘವು ಐವತ್ತು ವರ್ಷಗಳನ್ನು ಪೂರೈಸಿದ್ದು, ಪ್ರಥಮ ಬಾರಿಗೆ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದೇವೆ. ರೈತರಿಗೆ ಸಕಾಲಕ್ಕೆ ಸಾಲ ನೀಡಿ ಅವರ ಆರ್ಥಿಕ ಸ್ಥಿತಿ ಉತ್ತಮಗೊಂಡು ಸಕಾಲದಲ್ಲಿ ಸಾಲ ಮರುಪಾವತಿಸುವ ಮೂಲಕ ಸಂಘದ ಅಭಿವೃದ್ಧಿಗೆ ನೆರವಾಗುವಂತೆ ಕೋರಿದರು.

ನಿರ್ದೇಶಕ ಸಿದ್ದಾಚಾರಿ ಮಾತನಾಡಿ, ಹಿಂದೆ ನಾಲ್ಕೈದು ಹೆಸರುಗಳಿದ್ದು ಈಗ ಡಿ.ಹಲಸಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘ ಎಂಬ ಹೆಸರಿನಿಂದ ರೂಪಾಂತರಗೊಂಡಿದೆ. ಈ ಸಂಘವು ತೊರೆಕಾಡನಹಳ್ಳಿ, ಧನಗೂರು, ನೆಟ್ಕಲ್, ತಾಳೆ ಹಳ್ಳ, ಕದಂಪುರ, ಪುರುದೊಡ್ಡಿ, ಡಿ. ಹಲಸಹಳ್ಳಿ, ದಬ್ಬಳ್ಳಿ, ಶಿಂಷಾಪುರ ಸೇರಿದಂತೆ ವಿಶಾಲ ಪ್ರದೇಶವನ್ನು ಹೊಂದಿರುವ ಈ ಭಾಗದ ರೈತರ ಜೀವನಾಡಿಯಾಗಿ ಕೆಲಸ ಮಾಡಿದೆ ಎಂದರು.

ಈ ವೇಳೆ ಉಪಾಧ್ಯಕ್ಷೆ ಕೆ .ಗೀತಾ , ಕೆ.ಎಂ.ಮೈತ್ರಿ, ಬಿ.ಜಯರಾಮೇಗೌಡ, ಎಸ್.ಸಿದ್ದಲಿಂಗೇಗೌಡ, ಸಿ.ದೊಡ್ಡಸ್ವಾಮಿ, ಫಾರೂಕ್ ಪಾಷಾ, ಮಾದಪ್ಪ, ಪುಟ್ಟಸ್ವಾಮಿ, ಎಚ್.ಎಂ.ನಾಗರಾಜು, ಬಿ .ಎಂ.ರಾಮಚಂದ್ರ ,ಎಚ್.ಪುಟ್ಟರಾಜು ಮತ್ತು ಮುಖ್ಯ ಕಾರ್ಯನಿರ್ವಾಹಕ ಡಿ.ವಿ.ರವಿಚಂದ್ರ ಮತ್ತು ಸಿಬ್ಬಂದಿ ಪಿ.ಮಧು, ರಾಚಯ್ಯ, ಬಿ .ರವಿ, ಎಚ್.ಎನ್.ಉಮೇಶಗೌಡ, ಎಚ್.ಆರ್.ವೀರಪ್ಪ, ಬಿ.ಎಚ್.ರವಿ, ರವಿಕುಮಾರ್, ಶ್ರೀನಿವಾಸ ಇತರರಿದ್ದರು.

ಕಿಡ್ನಿ ವೈಫಲ್ಯ: ಶಸ್ತ್ರಚಿಕಿತ್ಸೆಗೆ ನೆರವಾಗಲು ಮನವಿ

ಕನ್ನಡಪ್ರಭ ವಾರ್ತೆ ಮಂಡ್ಯ

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪತಿಯ ಶಸ್ತ್ರಚಿಕಿತ್ಸೆಗೆ ಆರ್ಥಿಕವಾಗಿ ನೆರವಾಗುವಂತೆ ಪತ್ನಿ ಕಾವೇರಿ ಅವರು ದಾನಿಗಳಲ್ಲಿ ಮನವಿ ಮಾಡಿದರು.

ಮಂಡ್ಯ ತಾಲೂಕು ಕೊತ್ತತ್ತಿ ಗ್ರಾಮದವರಾಗಿದ್ದು ಪತಿ ಮುರಳಿ ದೇಹದಲ್ಲಿರುವ ಎರಡೂ ಕಿಡ್ನಿಗಳು ವಿಫಲವಾಗಿವೆ. ಕಿಡ್ನಿ ಕಸಿ ಮಾಡಲು ೩೦ ಲಕ್ಷ ರು. ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಾವು ಬಡವರಾಗಿದ್ದು, ಅಷ್ಟೊಂದು ಹಣವನ್ನು ಭರಿಸುವ ಸ್ಥಿತಿಯಲ್ಲಿಲ್ಲ. ಎರಡು ಗಂಡು ಮಕ್ಕಳಿದ್ದಾರೆ. ನಮ್ಮ ಕುಟುಂಬದಲ್ಲಿರುವವರು ರಕ್ತದೊತ್ತಡ, ಮಧುಮೇಹ ರೋಗದಿಂದ ಬಳಲುತ್ತಿರುವುದರಿಂದ ಕಿಡ್ನಿ ದಾನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಮ್ಮ ಕುಟುಂಬಕ್ಕೆ ನನ್ನ ಪತಿಯೇ ಆಧಾರವಾಗಿದ್ದಾರೆ. ಅವರ ಶಸ್ತ್ರಚಿಕಿತ್ಸೆಗೆ ನೆರವಾಗುವ ದಾನಿಗಳು ಕೆ.ಕೆ.ಮುರಳಿ, ಉಳಿತಾಯ ಖಾತೆ ಸಂಖ್ಯೆ: ೪೧೬೩೬೩೮೬೯೮೪, ಎಸ್‌ಬಿಐ , ಕೊತ್ತತ್ತಿ ಶಾಖೆ, ಮಂಡ್ಯ. ಐಎಫ್‌ಎಸ್‌ಸಿ: ಎಸ್‌ಬಿಈಎನ್‌೦೦೪೦೧೭೨ ಗೆ ಹಣ ಜಮೆ ಮಾಡುವಂತೆ ಕೋರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ