ಕನ್ನಡಪ್ರಭ ವಾರ್ತೆ ಮಂಡ್ಯ
ಕೃಷಿ ಇಲಾಖೆ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಆಹಾರ ಮತ್ತು ಪೌಷ್ಟಿಕ ಭದ್ರತೆ (ನ್ಯೂಟ್ರಿ ಸಿರಿಧಾನ್ಯ) ಯೋಜನೆಯಡಿ ‘ಸಿರಿಧಾನ್ಯ ರೋಡ್ ಶೋ’ ಮೂಲಕ ಮುಂದಿನ ಪೀಳಿಗೆಗೆ ಸಿರಿಧಾನ್ಯ ಬೆಳೆಗಳ ಬಗ್ಗೆ ಅರಿವು ಮೂಡಿಸುವ ಸಂಬಂಧ ಆಯೋಜಿಸಲಾಗಿದ್ದ ‘ಸಿರಿಧಾನ್ಯ ರೋಡ್ ಶೋ’ ಕಾರ್ಯಕ್ರಮಕ್ಕೆ ಹಸಿರು ಬಾವುಟ ಹಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಹೆಣ್ಣು ಮಕ್ಕಳು ಸಿರಿಧಾನ್ಯಗಳನ್ನು ಬಳಸಿ ಆರೋಗ್ಯಕರ, ಪೌಷ್ಟಿಕತೆ ಹೆಚ್ಚಿಸುವ ಶುಚಿಯಾದ ರುಚಿಕರವಾದ ಅಡುಗೆ ತಯಾರಿಸಬಹುದು ಎಂಬ ಪ್ರಯತ್ನ ನಡೆಯುತ್ತಿದೆ. ಹೊಸ ವರ್ಷಕ್ಕೆ ಸಿಹಿ ಹಂಚುವುದು ಪದ್ಧತಿ. ಆ ದೃಷ್ಟಿಯಿಂದ ಮಂಡ್ಯ ಜಿಲ್ಲಾ ಪಂಚಾಯ್ತಿ, ರಾಷ್ಟ್ರೀಯ ಜೀವನೋಪಾಯ ವಿಷನ್, ಕೃಷಿ ಇಲಾಖೆ ಒಟ್ಟುಗೂಡಿ ಸಾವಯವ ಕೃಷಿಯಿಂದ ಬೆಳೆದ ಸಿರಿಧಾನ್ಯಗಳ ತಿನಿಸುಗಳು 100 ರು. ಒಳಗೆ ಸಾರ್ವಜನಿಕರಿಗೆ ಸೇರಬೇಕು ಎಂಬ ಯೋಚನೆಯಿಂದ ವಿಭಿನ್ನ ಪ್ರಯತ್ನ ಮಾಡಲಾಗಿದೆ ಎಂದರು.ಸರ್ಕಾರಿ ಇಲಾಖೆಗಳೇ ಸಿರಿಧಾನ್ಯಗಳ ಮಹತ್ವವನ್ನು ತಿಳಿಸಲು ಹೊರಟಿದೆ. ಇದರಿಂದ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಸಹಾಯವಾಗಲಿದೆ. ನೈಸರ್ಗಿಕ ಕೃಷಿ ಮಾಡುತ್ತಿರುವ ರೈತರು ಒಗ್ಗೂಡಿದಾಗ, ಸಾಧಕ ಬಾಧಕಗಳನ್ನು ಹಂಚಿಕೆ ಮಾಡಿದಾಗ ಮಾತ್ರ ಸಾವಯವ ಕೃಷಿಗೆ ಪ್ರೇರಣೆ ದೊರೆಯುತ್ತದೆ. ಆತ್ಮಶ್ರೇಷ್ಠ ಕೃಷಿ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ನೈಸರ್ಗಿಕ ಕೃಷಿ, ಕೃಷಿಕರಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿತ್ತು ಎಂದರು.
ನೀರು, ಫಲವತ್ತಾದ ಮಣ್ಣು ಎಲ್ಲರಿಗೂ ಸಿಗುವಂತದಲ್ಲ. ಜಿಲ್ಲೆಗೆ ದೊರೆತಿರುವ ನೀರು, ಮಣ್ಣು ದೈವದತ್ತವಾಗಿ ಸಿಕ್ಕಿರುವ ವರ. ಇವುಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡಬೇಕು. ನಮ್ಮ ಅಗತ್ಯಕ್ಕನುಗುಣವಾಗಿ ಸುಸ್ಥಿರ ಬಳಕೆ ಮಾಡಿಕೊಂಡು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸುನಿತಾ, ಪ್ರತಿಭಾ, ಹರ್ಷ, ಗಿರೀಶ್ ಗೌಡ ಹಾಗೂ ಮುಖಂಡರಾದ ಸೋಮಶೇಖರ್ ಗೌಡ, ಕಾರಸವಾಡಿ ಮಹದೇವ, ಮಹೇಶ್ ಚಂದ್ರಗುರು ಇತರರಿದ್ದರು.