ಶರಣರಿಂದ ಜೀವನದ ಮೌಲ್ಯವರ್ಧನೆಗೆ ಶ್ರಮ

KannadaprabhaNewsNetwork |  
Published : May 11, 2026, 01:30 AM IST
ತ್ತೂರು ಮಠದ ಶ್ರೀ ಶಿವರಾತ್ರಿದೇಶೀಕೆಂದ್ರ ಸ್ವಾಮೀಜಿ  | Kannada Prabha

ಸಾರಾಂಶ

ಸಂವಿಧಾನ ರಚನೆಗೆ ಮೊದಲೇ ಬಸವಣ್ಣರವರು ಹಾಗೂ ಇತರೇ ಶರಣರು ಮನುಷ್ಯನ ಜೀವನ ಮೌಲ್ಯವರ್ಧನೆಗೆ ಶ್ರಮಿಸಿದ್ದರು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿದೇಶೀಕೆಂದ್ರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಸಂವಿಧಾನ ರಚನೆಗೆ ಮೊದಲೇ ಬಸವಣ್ಣರವರು ಹಾಗೂ ಇತರೇ ಶರಣರು ಮನುಷ್ಯನ ಜೀವನ ಮೌಲ್ಯವರ್ಧನೆಗೆ ಶ್ರಮಿಸಿದ್ದರು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿದೇಶೀಕೆಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಗೋಡೆಕೆರೆ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯ ಸ್ವಾಮೀಜಿಯ ಗುರುವಂದನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಸಮಾಜದಲ್ಲಿ ಸಾಕ್ಷರತೆ ಅಭಿವೃದ್ಧಿಯಲ್ಲಿ ಮಠಮಾನ್ಯಗಳು ಪ್ರಮುಖ ಪಾತ್ರವಹಿಸಿದೆ. ಸ್ವಾತಂತ್ಯ್ಯ ನಂತರ ರಚನೆಯಾದ ಸಂವಿಧಾನಕ್ಕಿಂತ ಮೊದಲು ಬಸವಾದಿ ಶರಣರು ಅಸಮಾನತೆ ಮತ್ತು ಶೋಷಣೆ ಖಂಡಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಗೋಡೆಕೆರೆ ಕ್ಷೇತ್ರ ಸಿದ್ಧರಾಮರ ತಪಸ್ಸಿನ ಶಕ್ತಿಸ್ಥಳವಾಗಿದೆ ಈ ಕ್ಷೇತ್ರದಲ್ಲಿ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯಸ್ವಾಮಿಗಳು ಶರಣರ ತತ್ವ ಆದರ್ಶಗಳನ್ನ ರೂಢಿಸಿಕೊಂಡು ಕಾಯಕಯೋಗಿಯಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಬಸವಣ್ಣರವರನ್ನು ಅನುಸರಿಸಿ ಮಠ ಮಾನ್ಯಗಳು ದಾಸೋಹ ಮತ್ತು ಧರ್ಮ ಚಿಂತನೆಗಳನ್ನ ನಡೆಸಿ ಹುಟ್ಟಿದ ಮನುಷ್ಯ ಮಾನವೀಯ ಮೌಲ್ಯಗಳನ್ನ ಬೆಳಿಸಿಕೊಂಡು ಸಮಾಜದಲ್ಲಿ ಶಾಂತಿ ನೆಮ್ಮದಿ ಉಳಿಯುವಂತಾಗಬೇಕು ಎಂದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಶ್ರೀಮಠದ ಪರಿಚಯ ಪುಸ್ತಕ ಬಿಡುಗಡೆಮಾಡಿ ಮಾತನಾಡಿ, ಸಮಾಜದಲ್ಲಿ ಧಾರ್ಮಿಕ ಚಿಂತನೆಗಳ ಕಡಿಮೆ ಆಗಿರುವುದರಿಂದ ಮಾನವೀಯ ಮೌಲ್ಯಗಳು ನಶಿಸುತ್ತಿದೆ. ಜ್ಞಾನದ ಸಂಪತ್ತು ಶಾಶ್ವತ ಫಲಕೊಡುತ್ತದೆ ಅದನ್ನ ಗುರುವಿನಿಂದ ಸಂಸ್ಕಾರದ ರೂಪದಲ್ಲಿ ಪಡೆಯಬೇಕು. ದುಡಿಮೆಗೆ ನಿಜವಾಗಿ ಫಲವಿದೆ ಎಂಬುದನ್ನು 850 ವರ್ಷದ ಕಾಲದಲ್ಲಿ ಶರಣರು ಪ್ರತಿಪಾದಿಸಿದ್ದಾರೆ. ಗೋಡೇಕೆರೆ ಸಿದ್ಧರಾಮೇಶ್ವರಸ್ವಾಮಿ ದೇವಾಲಯ ಮುಜರಾಯಿಗೆ ಸೇರಿದೆ. ಈಗಾಗಲೇ ರಾಜಗೋಪುರ ನಿರ್ಮಾಣಕ್ಕೆ 4 ಕೋಟಿ ರು ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಶ್ರೀಗಳು ಇನ್ನೂ 5 ಕೋಟಿ ಅನುದಾನ ಹಾಗೂ ಕಮಿಟಿ ರಚಿಸುವ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ನಾನು ಸರ್ಕಾರಕ್ಕೆ ಶಿಫಾರಸ್ಸುಮಾಡಿ ಹಣವನ್ನು ಮಂಜೂರು ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.

ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ ಗುರುವಂದನೆ ಸ್ವೀಕರಿಸಿ ಮಾತನಾಡಿ ನಮಗೆ ಅನಾರೋಗ್ಯ ಉಂಟಾಗಿ ಜಿವಕ್ಕೆ ಕುತ್ತುಬಂದಿತ್ತು. ಮತ್ತೊಮ್ಮೆ ಕಿಡೆಗೇಡಿಯೋಬ್ಬ ನನ್ನನ್ನ ಕೊಲ್ಲಲು ಬಂದಿದ್ದ ಆದರೆ ಸಿದ್ಧರಾಮರ ಶಕ್ತಿಯಿಂದ ಎರಡು ಬಾರಿ ಸಾವಿನಿಂದ ಪಾರಾಗಿದ್ದೇನೆ. ಇನ್ನು ಒಂದು ಕಂಟಕ ಇದೆ ಎಂದು ತಿಳಿದು ಬಂದಿದೆ. ಅದನ್ನು ಗೆದ್ದರೆ 105ವರ್ಷ ಬದುಕುತ್ತೇನೆ. ಬೆಳಗೊಂಬದಲ್ಲಿ ಅನ್ನದಾಸೋಹ ಪ್ರಾರಂಭಿಸಲು ಉದ್ದೇಶದಿಂದ 9ಕೋಟಿ ಆಸ್ತಿಯನ್ನ ನನ್ನ ಹೆಸರಿಗೆ ಬರೆದಿದ್ದಾರೆ ಅಲ್ಲಿ ನಿತ್ಯ ದಾಸೋಹವನ್ನ ಪ್ರಾರಂಭಿಸುತ್ತೇವೆ. ಸಿದ್ಧರಾಮರ ಭಕ್ತರು ಶ್ರೀಮಂತರು ಇದ್ದಾರೆ.

ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ತಾಲೂಕಿನಲ್ಲಿ ಶ್ರೀಮಠ ದಾಸೋಹ ಮತ್ತು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿದೆ. ಶ್ರೀಗಳು ತಮ್ಮ ಶ್ರಮದಲ್ಲಿ ಕೆಲಸಮಾಡುವುದರ ಜೊತೆಗೆ ಭಕ್ತರ ಮನೆಗಳಿಗೆ ತೆರಳಿ ಇಷ್ಟಲಿಂಗ ಪೂಜೆ ನಡೆಸುತ್ತಿದ್ದಾರೆ. ಸಿದ್ಧರಾಮರ ತಪೋಕ್ಷೇತ್ರದಲ್ಲಿ ಸ್ಥಳದ ಮಹಿಮೆ ಇದೆ ಕ್ಷೇತ್ರದ ಎರಡು ಮಠಗಳ ಅಭಿವೃದ್ದಿಗೆ ನನ್ನ ಪಾಮಾಣಿಕ ಸೇವೆಯನ್ನ ಸಲ್ಲಿಸುತ್ತೇನೆ ಎಂದರು.

ಕರಡಿ ಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ ಪ್ರಾಸ್ಥಾವಿಕನುಡಿಗಳನ್ನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನ ಶಾಸಕ ಸಿ.ಬಿ.ಸುರೇಶ್ ಬಾಬು ವಹಿಸಿದ್ದರು. ಕೆರೆಗೋಡಿ ರಂಗಾಪುರದ ಗುರುಪದೇಶೀಕೇಂದ್ರಸ್ವಾಮೀಜಿ, ತುಮಕೂರು ಶಾಸಕ ಜ್ಯೋತಿಗಣೇಶ್ˌ ತುಮಕೂರು ಗ್ರಾಮಂತರ ಶಾಸಕ ಸುರೇಶ್ ಗೌಡˌ ಮಾಜಿ ಸಚಿವ ಸೊಗಡು ಶಿವಣ್ಣ, ತಮ್ಮಡಿಹಳ್ಳಿ ವಿರಕ್ತ ಮಠದ ಅಭಿನವ ಡಾ.ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿ ಗುಬ್ಬಿ ಕ್ಷೇತ್ರದ ಬಿಜೆಪಿ ಮುಖಂಡ ದಿಲೀಪ್ ಸೇರಿದಂತೆ ಅನೇಕ ಮಠಾಧೀಶರರು ಹಾಗೂ ಗಣ್ಯರು ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ: ಡಾ.ಪ್ರಭಾಕರ ರಾವ್
ಮೇ 23ರಂದು ಬಗರ್‌ ಹುಕುಂ ಸಂತ್ರಸ್ತರ ಸಮಾವೇಶ: ವೈ.ಎಸ್.ವಿ.ದತ್ತ