ಸಮರ್ಪಕ ವಿದ್ಯುತ್ ಒದಗಿಸಲು ಶ್ರಮವಹಿಸುವೆ: ಮಾಣಿಕರಾವ್

KannadaprabhaNewsNetwork | Published : Oct 23, 2024 12:33 AM

ಸಾರಾಂಶ

Efforts will be made to provide adequate electricity: Manikarao

- ತುಮಕೂರು, ಇಟಗಾ ಎಸ್. ಗ್ರಾಮಗಳಿಗೆ ನೂತನ ವಿದ್ಯುತ್ ಮಾರ್ಗಕ್ಕೆ ಚಾಲನೆ

-----

ಕನ್ನಡಪ್ರಭ ವಾರ್ತೆ ವಡಗೇರಾ

ಗ್ರಾಮೀಣ ಭಾಗದ ಜನರಿಗೆ ಸಮರ್ಪಕ ವಿದ್ಯುತ್ ಒದಗಿಸುವಲ್ಲಿ ಶ್ರಮವಹಿಸಲಾಗುತ್ತಿದೆ ಎಂದು ಜೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮಾಣಿಕರಾವ್ ಕುಲಕರ್ಣಿ ಹೇಳಿದರು.

ಮಂಗಳವಾರ ವಡಗೇರಾದಲ್ಲಿರುವ 110 ಕೆಇಬಿಯಿಂದ ತುಮಕೂರು ಹಾಗೂ ಇಟಗಾ ಎಸ್. ಗ್ರಾಮಗಳಿಗೆ ನೂತನ ವಿದ್ಯುತ್ ಮಾರ್ಗಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಮೊದಲು 110 ಕೆಇಬಿಯಿಂದ ಹಲವು ಗ್ರಾಮಗಳಿಗೆ ಒಂದೇ ವಿದ್ಯುತ್ ಮಾರ್ಗವಿತ್ತು. ಬೇರೆ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಯಾದಾಗ ಪ್ರತಿ ಬಾರಿ ತುಮಕೂರು ಗ್ರಾಮದ ವಿದ್ಯುತ್ ಕಡಿತಗೊಳಿಸಿ ಕಾರ್ಯ ನಿರ್ವಹಿಸಬೇಕಿತ್ತು. ಇದರಿಂದ ಆ ಗ್ರಾಮದ ಜನರಿಗೆ ತೊಂದರೆಯಾಗುತ್ತಿತ್ತು. ಈ ಸಮಸ್ಯೆಯನ್ನು ಸರಿಪಡಿಸುವಂತೆ ಹಲವು ದಿನಗಳಿಂದ ಸಾರ್ವಜನಿಕರ ಬೇಡಿಕೆ ಇತ್ತು. ಅದನ್ನು ಪರಿಗಣಿಸಿ ತುಮಕೂರು ಗ್ರಾಮದ ಸಾರ್ವಜನಿಕರ ಬಹುದಿನದ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎಂದರು.

ವಿದ್ಯುತ್ ಗೆ ಸಂಬಂಧಿಸಿದ ಸಮಸ್ಯೆಗಳಿಗಾಗಿ ಜೆಸ್ಕಾಂ ಇಲಾಖೆ ಸದಾ ಸ್ಪಂದಿಸುತ್ತದೆ. ಆದರೆ, ಸಾರ್ವಜನಿಕರ ಸಹಕಾರ ಅತ್ಯವಶ್ಯಕ ಎಂದರು.

ಈ ವೇಳೆ ಎಇಇ ಮಾಣಿಕರಾವ್ ಕುಲಕರ್ಣಿ ಅವರನ್ನು ತುಮಕೂರು ಗ್ರಾಮಸ್ಥರು ಸನ್ಮಾನಿಸಿದರು. ಶಾಖಾಧಿಕಾರಿಗಳಾದ ಇಕ್ಬಾಲ್ ಸಾಬ್, ಆನಂದ್, ಶಿವಗೇನಿ, ಮಂಜುನಾಥ್. ದೇವೇಂದ್ರಪ್ಪ, ಫಿರೋಜ್, ಅಬ್ದುಲ್ ಮಸರಕಲ್, ಮಾಜಿ ಗ್ರಾ.ಪಂ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ರೆಹಮಾನ್ ಖುರೇಶಿ, ಬಸವರಾಜ್ ಪಿಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ವಡಗೇರಾ ತಾಲೂಕು ಪ್ರಧಾನ ಕಾರ್ಯದರ್ಶಿ ಸಿದ್ದು ಪೂಜಾರಿ, ಅಬ್ದುಲ್ ಸಾಬ್ ಜಂಗ್ಲಿ ಇದ್ದರು.

-----

22ವೈಡಿಆರ್11: ಮಂಗಳವಾರ ವಡಗೇರಾ ಪಟ್ಟಣದಲ್ಲಿರುವ 110 ಕೆಇಬಿಯಿಂದ ತುಮಕೂರು ಹಾಗೂ ಇಟಗಾ ಎಸ್. ಗ್ರಾಮಗಳಿಗೆ ನೂತನ ವಿದ್ಯುತ್ ಮಾರ್ಗಕ್ಕೆ ಚಾಲನೆ ನೀಡಲಾಯಿತು.

Share this article