- ಮುಸ್ಲಿಂ ಧರ್ಮೀಯರಿಗೆ ಶುಭ ಕೋರಿದ ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ, ಡಾ.ಪ್ರಭಾ
ಪ್ರವಾದಿ ಮಹಮ್ಮದ್ ಪೈಗಂಬರ್ (ಸ.ಅ) ಜನ್ಮದಿನ ಅಂಗವಾಗಿ ಮುಸ್ಲಿಂ ಧರ್ಮೀಯರು ನಗರ, ಜಿಲ್ಲಾದ್ಯಂತ ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಿದರು.
ನಗರದ ಬಾಷಾ ನಗರ, ಆಜಾದ್ ನಗರ, ಇಮಾಂ ನಗರ, ಬೀಡಿ ಲೇಔಟ್, ಆಶ್ರಯ ಕಾಲನಿ, ವಿನೋಬ ನಗರ, ಕೆಟಿಜೆ ನಗರ, ನಿಟುವಳ್ಳಿ, ಭಗತ್ ಸಿಂಗ್ ನಗರ, ಲೆನಿನ್ ನಗರ, ಶಿವ ನಗರ, ಲೇಬರ್ ಕಾಲನಿ, ರಜಾವುಲ್ ಮುಸ್ತಫಾ ನಗರ, ಎಸ್‌ಪಿಎಸ್ ನಗರ, ಜಾಲಿ ನಗರ, ದೇವರಾಜ ಅರಸು ಬಡಾವಣೆ ಸೇರಿದಂತೆ ವಿವಿಧೆಡೆಯಿಂದ ಮೆರವಣಿಗೆ ಹೊರಟು, ಹಳೆ ಪಿ.ಬಿ. ರಸ್ತೆಯ ಖಬರಸ್ಥಾನ ಬಳಿ ಮುಸ್ಲಿಂ ಧರ್ಮೀಯರು ಸೇರಿದರು.ಅನಂತರ ಎಲ್ಲರೂ ಪರಸ್ಪರರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಚಿಕ್ಕಪುಟ್ಟ ಮಕ್ಕಳಿಂದ ಹಿರಿಯ ನಾಗರೀಕರವರೆಗೆ ಮುಸ್ಲಿಂ ಧರ್ಮೀಯರು ಸಂಭ್ರಮದಿಂದ ಭಾಗವಹಿಸಿದ್ದರು. ರಜಾವುಲ್ ಮುಸ್ತಫಾ ನಗರದಿಂದ ಬಾಷಾ ನಗರ ಮುಖ್ಯರಸ್ತೆ ಮಾರ್ಗವಾಗಿ ಮಂಡಿಪೇಟೆ, ಬಾರ್ ಲೈನ್ ರಸ್ತೆ, ಕಿತ್ತೂರು ಚನ್ನಮ್ಮ ವೃತ್ತ, ಗಾಂಧಿ ವೃತ್ತ, ಕೆಆರ್ ರಸ್ತೆ, ಶಾಂತಿ ಟಾಕೀಸ್ ರಸ್ತೆ, ಅರಳೀ ಮರ ವೃತ್ತದ ಮುಖಾಂತರ ಸಾಗಿ ಮಿಲ್ಲತ್ ಶಾಲಾ ಮೈದಾನದಲ್ಲಿ ಮೆರವಣಿಗೆ ಮುಕ್ತಾಯವಾಯಿತು.
ಮೆರವಣಿಗೆ ಮಾರ್ಗದುದ್ದಕ್ಕೂ ಹಸಿರು ಬಾವುಟಗಳನ್ನು ಹಾರಿಸುತ್ತಾ, ಮಕ್ಕಳು, ಯುವಜನರು ಜಯಕಾರ ಹಾಕುತ್ತಾ ಸಾಗಿದರು. ನೂತನ ಖಾಸಗಿ ಬಸ್ ನಿಲ್ದಾಣದಲ್ಲಿ ಬೃಹತ್ ಕ್ರೇನ್‌ನಲ್ಲಿ ವಿಶಾಲ ಹಸಿರುಧ್ವಜ ಹಾರಿಸುವ ಮೂಲಕ ಸಂಭ್ರಮಿಸಿದರು. ಮೆರವಣಿಗೆ ವೀಕ್ಷಿಸಲು ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಯುದ್ದಕ್ಕೂ ಸೇರಿದ್ದರು. ವಿವಿಧ ವೃತ್ತಗಳಲ್ಲಿ ಮೆರವಣಿಗೆ ಸ್ವಲ್ಪ ಹೊತ್ತು ನಿಂತು ಸಾಗುತ್ತಿತ್ತು. ಸಣ್ಣ ಮಕ್ಕಳಿಂದ ವಯೋವೃದ್ಧವರೆಗೆ ಘೋಷಣೆ ಕೂಗುತ್ತಿದ್ಜರು.ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಸಂಘ- ಸಂಸ್ಥೆ, ಸಂಘಟನೆಗಳ ಮುಖಂಡರು ಮುಸ್ಲಿಂ ಧರ್ಮೀಯರಿಗೆ ಈದ್ ಮಿಲಾದ್ ಹಬ್ಬದ ಶುಭಾರೈಸಿದರು.
ಮುಸ್ಲಿಂ ಸಮಾಜದ ಮುಖಂಡರಾದ ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಸೈಯದ್ ಸೈಫುಲ್ಲಾ, ಜೆ.ಅಮಾನುಲ್ಲಾ ಖಾನ್, ಯಾಸೀರ್ ಪೀರ್ ರಜ್ವಿ, ಅನ್ವರ್ ಸಾಬ್, ನಜೀರ್ ಸಾಬ್, ಸಾದಿಕ್ ಪೈಲ್ವಾನ್, ಅಯೂಬ್ ಪೈಲ್ವಾನ್, ಎ.ಬಿ.ಹಬೀಬ್ ಸಾಬ್, ಮುನ್ನಾ ಹರ್ಷದ್, ಪಾಲಿಕೆ ಸದಸ್ಯರಾದ ಕೆ.ಚಮನ್ ಸಾಬ್, ಅಬ್ದುಲ್ ಲತೀಫ್, ಎ.ಬಿ.ರಹೀಂ, ಸೈಯದ್ ಚಾರ್ಲಿ, ಸಿರಾಜ್ ಅಹಮ್ಮದ್, ಪತ್ರಕರ್ತರಾದ ಎ.ಫಕೃದ್ದೀನ್, ಸಿಕಂದರ್, ಷಫೀಕ್ ಪಂಡಿತ್, ವಕೀಲ ರಿಜ್ವಿ ಖಾನ್, ಅಸ್ಲಂಖಾನ್, ಗೌಸ್, ಖಾದರ್ ಬಾಷಾ, ವಿಶ್ವ ಕರವೇ ಮುಖಂಡರಾದ ಅಮ್ಜದ್ ಅಲಿ, ಮೆಹಬೂಬ್, ಮಹಮ್ಮದ್ ರಿಜ್ವಿ ಸೇರಿದಂತೆ ಸಮಾಜ ಬಾಂಧವರು ಮೆರವಣಿಗೆಯಲ್ಲಿದ್ದರು.- - -
-16ಕೆಡಿವಿಜಿ9:ದಾವಣಗೆರೆಯಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಧರ್ಮೀಯರು ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಮುಸ್ಲಿಂ ಧರ್ಮೀಯರಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಶುಭ ಕೋರಿದರು. -16ಕೆಡಿವಿಜಿ10:
ದಾವಣಗೆರೆಯಲ್ಲಿ ಈದ್ ಮಿಲಾದ್ ಹಬ್ಬ ಅಂಗವಾಗಿ ಮುಸ್ಲಿಂ ಧರ್ಮೀಯರು ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಮುಸ್ಲಿಂ ಧರ್ಮೀಯರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಶುಭಾಷಯ ಕೋರಿದರು. -16ಕೆಡಿವಿಜಿ11:ದಾವಣಗೆರೆಯಲ್ಲಿ ಈದ್ ಮಿಲಾದ್ ಹಬ್ಬ ಅಂಗವಾಗಿ ಮುಸ್ಲಿಂ ಧರ್ಮೀಯರು ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಬಂದೋಬಸ್ತ್ ಉಸ್ತುವಾರಿ ವಹಿಸಿರುವುದು. -16ಕೆಡಿವಿಜಿ12:
ದಾವಣಗೆರೆಯಲ್ಲಿ ಈದ್ ಮಿಲಾದ್ ಹಬ್ಬ ಅಂಗವಾಗಿ ಹೊಸದಾಗಿ ನಿರ್ಮಿಸಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ಕ್ರೇನ್ ಸಹಾಯದಿಂದ ಬೃಹತ್ ಹಸಿರು ಧ್ವಜ ಹಾರಿಸಿ, ಸಂಭ್ರಮಿಸಲಾಯಿತು. -16ಕೆಡಿವಿಜಿ13, 14, 15, 16, 17:ದಾವಣಗೆರೆಯಲ್ಲಿ ಈದ್ ಮಿಲಾದ್ ಅಂಗವಾಗಿ ಮುಸ್ಲಿಂ ಧರ್ಮೀಯರು ಮೆರವಣಿಗೆ ನಡೆಸಿದರು.