ಕನ್ನಡಪ್ರಭ ವಾರ್ತೆ ಹನೂರು
ಸೋಮವಾರ ಬೆಳಗ್ಗೆ ತಮ್ಮ ವಾಸದ ಮನೆಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಸೀದಿ ಬಳಿ ಜಮಾಯಿಸಿದ ಮುಸ್ಲಿಂ ಮುಖಂಡರು ಯುವಕರು ಪರಸ್ಪರ ಆತ್ಮೀಯ ಅಪ್ಪುಗೆಯ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಗ್ರಾಮದ ಮಸೀದಿಯಲ್ಲಿ ಮುಸ್ಲಿಮರು ವಾಹನ ಮೇಲೆ ಮೆಕ್ಕಾ ಮದೀನಾ ಭಾವಚಿತ್ರವಿರಿಸಿ ಮೆರವಣಿಗೆ ನಡೆಸಿದರು. ಈ ನಡುವೆ ರಾಷ್ಟ್ರಧ್ವಜ, ಕನ್ನಡ ಬಾವುಟ ಕೂಡ ರಾರಾಜಿಸಿದವು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಸ್ಥಳದಲ್ಲಿದ್ದು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಶಾರುಖ್ ಖಾನ್, ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ತೌಸಿಪ್ ಅಹಮದ್, ಅಪ್ಸರ್ ಬೇಗ್, ಅಲ್ಲಾಬಕಶ್, ಶಾದಬ್ ಖಾನ್, ಸಲ್ಮಾನ್ ಖಾನ್, ಅಯೂಬ್ ಖಾನ್, ಜೀಯಾಉಲ್ಲಾ, ಸೇರಿದಂತೆ ಮತ್ತಿತರರು ಇದ್ದರು ಕೌದಳ್ಳಿ ಗ್ರಾಮದಲ್ಲಿ ಈದ್ ಮಿಲಾದ್ ಮೆರವಣಿಗೆ. ಮುಸ್ಲಿಂ ಬಾಂಧವರು ಕೌದಲ್ಲಿ ಗ್ರಾಮದ ಮುಖ್ಯರಸ್ತೆ ಹಾಗೂ ಸರ್ಕಲ್ ಸೇರಿದಂತೆ ಮುಸ್ಲಿಂ ಬಡಾವಣೆಯಲ್ಲಿ ಮೆರವಣಿಗೆ ನಡೆಸಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಇದೇ ವೇಳೆಯಲ್ಲಿ ರಾಮಪುರ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.