ಗೌರಿಬಿದನೂರು: ಪವಿತ್ರ ರಂಜಾನ್ ತಿಂಗಳ ಉಪವಾಸ ಪೂರ್ಣಗೊಳಿಸಿದ ಮುಸ್ಲಿಮರು ಶನಿವಾರ ಶ್ರದ್ಧಾ, ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಶುಕ್ರವಾರ ಸಂಜೆ ಆಕಾಶದಲ್ಲಿ ಚಂದ್ರನ ದರ್ಶನವಾಗುತ್ತಿದ್ದಂತೆ ಮುಸ್ಲಿಂ ಧರ್ಮೀಯರಲ್ಲಿ ಸಂಭ್ರಮ ಮನೆ ಮಾಡಿತು. ಶನಿವಾರ ಬೆಳಗ್ಗೆ ಶ್ವೇತ ವರ್ಣದ ಉಡುಪು, ತಲೆ ಮೇಲೆ ''''''''''''''''ತಾಜ್'''''''''''''''' ಧರಿಸಿ ಮನೆಯಲ್ಲಿ ಪ್ರಾರ್ಥನೆ ಮಾಡಿದರು. ''''''''''''''''ಕುರಾನ್'''''''''''''''' ಪಠಣ ಮಾಡಿದರು. ಬಳಿಕ ಗಂಡು ಮಕ್ಕಳು ಬೈಕ್, ಕಾರು, ಟೆಂಪೊ, ಬಸ್ ಸೇರಿದಂತೆ ಇತರೆ ವಾಹನಗಳಲ್ಲಿ ಜಯಘೋಷ ಹಾಕುತ್ತ ನಗರದ ಉಡಮಲೋಡು ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಧಾರ್ಮಿಕ ಗುರುಗಳಾದ ಮೌಲಾನ ಅಶ್ರಫ್ ಅಲಿ ಉಪನ್ಯಾಸ ನೀಡಿ ರಂಜಾನ್ ಹಬ್ಬದ ಮಹತ್ವವನ್ನು ವಿವರಿಸಿದರು, ಮೌಲಾನ ಅಬ್ದುಲ್ ಸುಭಾನ್ ನದವಿ ರವರು ಪ್ರಾರ್ಥನೆ ನೆರವೇರಿಸಿಕೊಟ್ಟರು.
ಆರಕ್ಷಕ ವೃತ್ತ ನಿರೀಕ್ಷಕರಾದ ಅಂಜನ್ ಕುಮಾರ್, ಕೆ ಎಚ್ ಪಿ ಫೌಂಡೇಶನ್ ನ ವ್ಯವಸ್ಥಾಪಕರಾದ ಶ್ರೀನಿವಾಸ ಗೌಡ, ಜಿಲ್ಲಾ ವಕ್ಫ್‌ಸಲಹಾ ಸಮಿತಿ ಮಾಜಿ ಉಪಾಧ್ಯಕ್ಷ ಕಲೀಲ್ ಪಾಷಾ, ಮಾಜಿ ನಗರಸಭಾ ಸದಸ್ಯರು, ಅಲೆ ಸುನ್ನತುಲ್ ಜಮಾತಿನ ಮಾಜಿ ಸದಸ್ಯರು, ಮುಸ್ಲಿಂ ಮುಖಂಡರು ಹಾಜರಿದ್ದರು.ನಗರ ಠಾಣೆಯ ಅರಕ್ಷಕ ನಿರೀಕ್ಷಕರಾದ ಗೋಪಾಲ್ ಮತ್ತು ಸಿಬ್ಬಂದಿಯಿಂದ ಬಂದೋಬಸ್ ನೀಡಲಾಗಿತ್ತು.