ಹಿಂದು ಮಹಾಗಣಪತಿ ಸಮಿತಿಯಿಂದ ಎಂಟೂವರೆ ಅಡಿ ಎತ್ತರ ಗಣೇಶ ಪ್ರತಿಷ್ಠಾಪನೆ

KannadaprabhaNewsNetwork | Published : Sep 7, 2024 1:30 AM

ಸಾರಾಂಶ

ಮಲೇಬೆನ್ನೂರು ಪಟ್ಟಣದ ನೀರಾವರಿ ಇಲಾಖೆ ಆವರಣದಲ್ಲಿ ಹಿಂದು ಮಹಾಗಣಪತಿ ಸಮಿತಿಯಿಂದ ಹಾಕಿರುವ ಬೃಹತ್ ಪೆಂಡಾಲ್‌ನಲ್ಲಿ ೩ನೇ ವರ್ಷದ ಗಣೇಶ ಪ್ರತಿಷ್ಠಾಪನೆ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ೧೦ ಗಂಟೆಗೆ ಕಲ್ಲೇಶ್ವರ ದೇವಾಲಯದ ಸ್ಥಳದಿಂದ ದುರ್ಗಾಂಬಿಕಾ ಕಲಾ ತಂಡದೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ, ಪ್ರತಿಷ್ಠಾಪನೆ, ಪೂಜೆ ನೆರವೇರಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ವೈ. ಅಶೋಕ್ ಮಲೇಬೆನ್ನೂರಲ್ಲಿ ಹೇಳಿದ್ದಾರೆ.

- ಪುರಸಭಾ ಸದಸ್ಯ ಮಂಜು ಕೊಡುಗೆ: ಸಮಿತಿ ಅಧ್ಯಕ್ಷ ವೈ.ಅಶೋಕ್

- - - - ಸೆ.೨೧ರಂದು ಗಣಪತಿ ಮೂರ್ತಿ ವಿಸರ್ಜನೆಯ ಭವ್ಯ ಮೆರವಣಿಗೆ

- ವಿವಿಧ ಸಮಾಜಗಳ ಮುಖಂಡರು, ೪೬ ಗ್ರಾಮಗಳ ಗ್ರಾಮಸ್ಥರು ಭಾಗಿ

- - - ಮಲೇಬೆನ್ನೂರು: ಪಟ್ಟಣದ ನೀರಾವರಿ ಇಲಾಖೆ ಆವರಣದಲ್ಲಿ ಹಿಂದು ಮಹಾಗಣಪತಿ ಸಮಿತಿಯಿಂದ ಹಾಕಿರುವ ಬೃಹತ್ ಪೆಂಡಾಲ್‌ನಲ್ಲಿ ೩ನೇ ವರ್ಷದ ಗಣೇಶ ಪ್ರತಿಷ್ಠಾಪನೆ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ೧೦ ಗಂಟೆಗೆ ಕಲ್ಲೇಶ್ವರ ದೇವಾಲಯದ ಸ್ಥಳದಿಂದ ದುರ್ಗಾಂಬಿಕಾ ಕಲಾ ತಂಡದೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ, ಪ್ರತಿಷ್ಠಾಪನೆ, ಪೂಜೆ ನೆರವೇರಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ವೈ. ಅಶೋಕ್ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭಾ ಸದಸ್ಯ ಮಂಜು ಎಂಟೂವರೆ ಅಡಿ ಎತ್ತರದ ಗಣೇಶ ಮೂರ್ತಿ ಕೊಡುಗೆ ನೀಡಿದ್ದಾರೆ. ಸನಾತನ ವೇದಿಕೆ, ವೀರ ಸಾವರ್ಕರ್ ಮಹಾದ್ವಾರ, ಬಾಲಗಂಗಾಧರ್ ತಿಲಕ್ ಮಹಾಮಂಟಪ ಎಂದು ಹೆಸರಿಸಲಾಗಿದೆ. ಪ್ರತಿನಿತ್ಯವೂ ವೀಶೇಷ ಪೂಜೆ, ಪ್ರಸಾದ, ಚೌಡೇಶ್ವರಿ ಭಜನಾ ಮಂಡಳಿಯಿಂದ ಭಜನೆ ಜರುಗಲಿದೆ ಎಂದರು.

ಮುಖಂಡ ರಾಜು ಮಾತನಾಡಿ, ಸೆ.೧೪ರಂದು ಪಿಡಬ್ಲ್ಯೂಡಿ ಕ್ರಿಕೆಟರ್ಸ್‌ ರಂಗೋಲಿ ಸ್ಪರ್ಧೆ, ಸಂಜೆ ರವಿಕುಮಾರ್‌ ಅವರಿಂದ ಜಾದೂ ಪ್ರದರ್ಶನ ಇದೆ. ಸೆ.೨೧ರಂದು ಮೂರ್ತಿ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿವಿಧ ಡೊಳ್ಳು, ಕಹಳೆ, ಗೊಂಬೆ ಕುಣಿತ, ತಮಟೆ, ನಾಸಿಕ್ ಡೋಲು ಕಲಾ ತಂಡಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಲಿವೆ. ರಾಜಬೀದಿ ಉತ್ಸವದಲ್ಲಿ ಎಲ್ಲ ಸಮಾಜಗಳ ಮುಖಂಡರು, ರಾಜಕಾರಣಿಗಳು, ಸುತ್ತಲ ೪೬ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಲಿದ್ದಾರೆ ಎಂದ ಅವರು, ಹೆಚ್ಚಿನ ಮಾಹಿತಿಗಾಗಿ ಮೊ.೮೦೮೮೩ ೭೩೪೪೪ ಇಲ್ಲಿಗೆ ಸಂಪರ್ಕಿಸಲು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಭೋವಿ ಶಿವು, ಕೆ.ಜಿ. ಲೋಕೇಶ್, ಚಿಟ್ಟಕ್ಕಿ ನಾಗರಾಜ್, ರವಿ, ಹನುಮೇಶಿ, ಕಿರಣ್, ದೇವರಾಜ್, ಸುನೀಲ್, ಹನುಮಗೌಡ, ಧೀರಜ್, ಕರಿಯಪ್ಪ, ನಾಗರಾಜ್, ಶಿ ನಿವಾಸ್ ಮತ್ತಿತರರು ಇದ್ದರು.

- - -

Share this article