ಜಿಲ್ಲೆ ಅಂತಿಮ ಪಟ್ಟೀಲಿ ೮,೦೦,೮೫೮ ಮತದಾರರು: ಜಿಲ್ಲಾಧಿಕಾರಿ ಶ್ರೀರೂಪ

KannadaprabhaNewsNetwork |  
Published : Oct 28, 2026, 01:45 AM IST
ಶ್ರೀರೂಪ | Kannada Prabha

ಸಾರಾಂಶ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪ್ರಕಾರ ಜಿಲ್ಲೆಯಲ್ಲಿ ಒಟ್ಟು ೮,೦೦,೮೫೮ ಮಂದಿ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪ್ರಕಾರ ಜಿಲ್ಲೆಯಲ್ಲಿ ಒಟ್ಟು ೮,೦೦,೮೫೮ ಮಂದಿ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಸಂಬಂಧ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು.

ಆ.೨೪ರಂದು ಪ್ರಕಟಿಸಲಾಗಿದ್ದ ಕರಡು ಮತದಾರರ ಪಟ್ಟಿಯಲ್ಲಿ ೩,೮೮,೪೦೯ ಪುರುಷರು, ೪,೦೩,೫೦೪ ಮಹಿಳೆಯರು, ಇತರರು ೩೬ ಸೇರಿದಂತೆ ೭,೯೧,೯೪೯ ಮತದಾರರು ಇದ್ದರು. ಅ.೨೭ ರಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಲ್ಲಿ ೩,೯೨,೪೮೧ ಪುರುಷರು, ೪,೦೮,೩೪೧ ಮಹಿಳೆಯರು, ಇತರರು ೩೬ ಸೇರಿದಂತೆ ೮,೦೦,೮೫೮ ಮತದಾರರು ಇದ್ದಾರೆ. ಕರಡು ಮತದಾರರ ಪಟ್ಟಿಯ ಬಳಿಕ ೮,೯೦೯ ಮತದಾರರು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದಾರೆ ಎಂದು ವಿವರಿಸಿದರು.

ಕರಡು ಮತದಾರರ ಪಟ್ಟಿಯಲ್ಲಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ೧,೦೧,೪೨೫ ಪುರುಷರು, ೧,೦೧,೨೪೧ ಮಹಿಳೆಯರು, ಇತರೆ ನಾಲ್ವರು ಸೇರಿದಂತೆ ೨,೦೨,೬೭೦ ಮತದಾರರು ಇದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ೧,೦೨,೬೨೩ ಪುರುಷರು, ೧,೦೨,೫೮೮ ಮಹಿಳೆಯರು, ಇತರೆ ೫ ಸೇರಿದಂತೆ ೨,೦೫,೨೧೬ ಮತದಾರರು ಇದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ೯೫,೭೫೨ ಪುರುಷರು, ೧,೦೦,೩೨೩ ಮಹಿಳೆಯರು, ಇತರೆ ೧೨ ಸೇರಿದಂತೆ ೧,೯೬,೦೮೭ ಮತದಾರರು ಇದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ೯೬,೬೮೨ ಪುರುಷರು, ೧,೦೧,೫೦೪ ಮಹಿಳೆಯರು, ಇತರೆ ೧೨ ಸೇರಿದಂತೆ ೧,೯೮,೧೯೮ ಮತದಾರರು ಇದ್ದಾರೆ ಎಂದು ತಿಳಿಸಿದರು.

ಕರಡು ಮತದಾರರ ಪಟ್ಟಿಯಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ೯೪,೫೦೭ ಪುರುಷರು, ೧,೦೦,೨೧೨ ಮಹಿಳೆಯರು, ಇತರೆ ೧೧ ಸೇರಿದಂತೆ ೧,೯೪,೭೩೦ ಮತದಾರರು ಇದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ೯೫,೫೮೮ ಪುರುಷರು, ೧,೦೧,೪೮೮ ಮಹಿಳೆಯರು, ಇತರೆ ೧೧ ಸೇರಿದಂತೆ ೧,೯೭,೦೮೭ ಮತದಾರರು ಇದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೯೬,೭೨೫ ಪುರುಷರು, ೧,೦೧,೭೨೮ ಮಹಿಳೆಯರು, ಇತರೆ ೯ ಸೇರಿದಂತೆ ೧,೯೮,೪೬೨ ಮತದಾರರು ಇದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೯೭,೫೮೮ ಪುರುಷರು, ೧,೦೨,೭೬೧ ಮಹಿಳೆಯರು, ಇತರೆ ೮ ಸೇರಿದಂತೆ ೨,೦೦,೩೫೭ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.

ಕರಡು ಮತಾದರರ ಪಟ್ಟಿಗೆ ಸಂಬಂಧಿಸಿದಂತೆ ೭,೪೮೦ ಮತದಾರರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಎಲ್ಲಾ ನೋಟಿಸ್ ಗಳ ವಿಚಾರಣೆ ನಡೆಸಲಾಗಿದ್ದು, ವಿಚಾರಣೆ ಬಳಿಕ ೭,೪೧೧ ಅರ್ಹ ಮತದಾರರು ಕಂಡು ಬಂದಿದ್ದು, ವಿಚಾರಣೆ ನಂತರ ಅಂತಿಮ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗದ (ಮರಣ, ಪುನರಾವರ್ತಿತ ಮತದಾರರು, ಸ್ಥಳಾಂತರ ಹಾಗೂ ಇತರೆ ಕಾರಣಗಳಿಂದಾಗಿ) ೬೯ ಅನರ್ಹ ಮತದಾರರು ಇದ್ದಾರೆ ಎಂದು ತಿಳಿಸಿದರು.

ಅಂತಿಮ ಮತದಾರರ ಪಟ್ಟಿಯಲ್ಲಿ ೧೨,೩೯೯ ಯುವ ಮತದಾರರು (೧೮-೧೯ ವಯೋಮಾನ), ೮೫ ಹಾಗೂ ಇದಕ್ಕೂ ಮೇಲ್ಪಟ್ಟ ೭,೯೪೨ ಹಿರಿಯ ನಾಗರಿಕ ಮತದಾರರಿದ್ದಾರೆ. ೧೦೦ ಹಾಗೂ ಇದಕ್ಕಿಂತ ಮೇಲ್ಪಟ್ಟ ೧೫೧ ಶತಾಯುಷಿ ಮತದಾರರು, ೧೧೨೮೦ ವಿಶೇಷ ಚೇತನ ಮತದಾರರು, ೧೮೧ ಸೇವಾ ಮತದಾರರು (ಸರ್ವೀಸ್ ಓಟರ್‍ಸ್) ಅಂತಿಮ ಮತದಾರರ ಪಟ್ಟಿಯಲ್ಲಿದ್ದಾರೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಪ್ರಿಯದರ್ಶಿನಿ ಇದ್ದರು.

ಭಾರತ ಚುನಾವಣಾ ಆಯೋಗದ ಸೂಚನೆ ಅನ್ವಯ ನೊಂದಾಯಿತ ಹಾಗೂ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅಂತಿಮ ಮತದಾರರ ಪಟ್ಟಿಯ ಒಂದು ಹಾರ್ಡ್ ಪ್ರತಿ (ಮತದಾರರ ಭಾವಚಿತ್ರ ಸಹಿತ) ಹಾಗೂ ಒಂದು ಸಾಫ್ಟ್ ಪ್ರತಿಯನ್ನು (ಮತದಾರರ ಭಾವಚಿತ್ರ ರಹಿತ) ಉಚಿತವಾಗಿ ಒದಗಿಸಲಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನರ ಮನೆ ಬಾಗಿಲಿಗೆ ಆಡಳಿತಾತ್ಮಕ ಸೇವೆ
ಭಾರತವನ್ನು ವಿಶ್ವಗುರು ಸ್ಥಾನಮಾನಕ್ಕೆ ಏರಿಸೋಣ