ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಭಾರತ ದೇಶವು ಈ ಹಿಂದಿನ ಆದಿಕಾಲದಿಂದಲೂ ತನ್ನದೇ ಆದ ಧರ್ಮನಿಷ್ಟೆ ನ್ಯಾಯ ನಿಷ್ಟುರತೆಯಿಂದ ಕಾಪಾಡಿಕೊಂಡು ಬಂದಿದ್ದಲ್ಲದೇ ಧಾರ್ಮಿಕ ವಿಚಾರದಲ್ಲಿಯೂ ಸಹ ತನ್ನದೇ ಆದ ಛಾಪು ಮೂಡಿಸಿ ಮುನ್ನಡೆದಂತಹ ಭಾರತ ದೇಶ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದು ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಭಾರತ ದೇಶವು ಈ ಹಿಂದಿನ ಆದಿಕಾಲದಿಂದಲೂ ತನ್ನದೇ ಆದ ಧರ್ಮನಿಷ್ಟೆ ನ್ಯಾಯ ನಿಷ್ಟುರತೆಯಿಂದ ಕಾಪಾಡಿಕೊಂಡು ಬಂದಿದ್ದಲ್ಲದೇ ಧಾರ್ಮಿಕ ವಿಚಾರದಲ್ಲಿಯೂ ಸಹ ತನ್ನದೇ ಆದ ಛಾಪು ಮೂಡಿಸಿ ಮುನ್ನಡೆದಂತಹ ಭಾರತ ದೇಶ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದು ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಸಮೀಪದ ಯರಝರಿ ಗ್ರಾಮದಲ್ಲಿ ಯಲ್ಲಾಲಿಂಗೇಶ್ವರ ಮಠದಲ್ಲಿ ನವರಾತ್ರೋತ್ಸವ ಅಂಗವಾಗಿ ಏರ್ಪಡಿಸಲಾದ ಧರ್ಮಸಭೆ ಗುರುವಂದನೆ ಹಾಗೂ ಸಾಮೂಹಿಕ ವಿವಾಹ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದ ಶಾಂತಿ ಏಕತೆ ಅಲ್ಲದೇ ಪ್ರಜಾಪ್ರಭುತ್ವದ ನೀತಿ ನಡಾವಳಿಯಂತೆ ಮುನ್ನಡೆಯುವುದು ಪ್ರತಿಯೊಬ್ಬ ಭಾರತೀಯ ನಾಗರೀಕನ ಕರ್ತವ್ಯವಾಗಿದೆ. ಯಾವುದೇ ತರದ ಜಾತಿ ಬೇಧವಿಲ್ಲದೇ ಕೋಮು ಸೌಹಾರ್ದತೆಯ ಭಾವನೆಯೊಂದಿಗೆ ಮುನ್ನಡೆಯುತ್ತ ಭಾರತ ದೇಶವನ್ನು ವಿಶ್ವಗುರು ಸ್ಥಾನಮಾನಕ್ಕೆ ಏರಿಸೋಣ ಎಂದರು.ಯಲ್ಲಾಲಿಂಗ ಮಠದ ಪೀಠಾಧಿಪತಿ ಮಲ್ಲಾಲಿಂಗಪ್ರಭು ಮಹಾರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಳೆಗಾಗಿ ಪ್ರಾರ್ಥಿಸಿ ಎಲ್ಲರಿಗೂ ಶುಭವಾಗಲೆಂದು ಆಶೀರ್ವಚನ ನೀಡಿದರು.ಮಾಜಿ ಶಾಸಕ ಹಾಗೂ ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ(ನಡಹಳ್ಳಿ) ಮಾತನಾಡಿದರು.ಇದೇ ಸಮಯದಲ್ಲಿ ಎಂ.ಡಿ.ನಧಾಪ್ ಅಮರಗೋಳ ಹಾಗೂ ರಶ್ಮಿ ಬಸವರಾಜ ಪಾಟೀಲ ಅವರ ಕುಟುಂಬದವರ ವತಿಯಿಂದ ಶ್ರೀಗಳಿಗೆ ದವಸ ಧಾನ್ಯಗಳಿಂದ ತುಲಾಭಾರ ಕಾರ್ಯ ನೆರವೇರಿಸಲಾಯಿತು.ಹೆಚ್ಚಿನ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಇದು ಅಲ್ಲದೇ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಶ್ರೀಮಠದ ವತಿಯಿಂದ ಸಂಗೀತ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಜೋಡಿ ಒಂದರ ಉಚಿತ ವಿವಾಹವನ್ನು ನೆರವೇರಿಸಿ ನವದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಲು ಶ್ರೀಗಳು ಆಶೀರ್ವದಿಸಿದರು. ಬಿಜೆಪಿ ಮುಖಂಡ ಹಾಗೂ ಜಾತ್ರಾ ಸಮಿತಿಯ ಅಧ್ಯಕ್ಷ ಮಲಕೇಂದ್ರಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.ಕಾರ್ಯಕ್ರಮದಲ್ಲಿ ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಜಿ.ಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ, ತಾ.ಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಎಪಿಎಂಸಿ ಮಾಜಿ ಸದಸ್ಯ ಮುತ್ತಣ್ಣ ಮುತ್ತಣ್ಣವರ, ತಾಲೂಕು ಪಿಂಜಾರ ಸಮಾಜದ ಅಧ್ಯಕ್ಷ ಎಂ.ಡಿ.ನಧಾಫ್, ಉತ್ಸವ ಸಮಿತಿಯ ಕಾರ್ಯದರ್ಶಿ ಮಹಾಂತೇಶ ಪಟ್ಟಣದ, ಬಿ.ಕೆ.ಬಿರಾದಾರ, ಆರ್.ಬಿ.ಗೌಡರ, ಬಸವರಾಜ ಹೊನವಾಡ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸೋಮನಗೌಡ ಬಿರಾದಾರ, ಶ್ರೀಕಾಂತ ಹಿರೇಮಠ, ಮಲ್ಲಯ್ಯ ಚೊಂಡಿ, ಬಿ.ಎಸ್.ಚಿಮ್ಮನಕಟ್ಟಿ, ಬಿ.ಕೆ.ಮಸೂತಿ, ಪರಶುರಾಮ ಕಾನ್ಯಾಳ, ಎಸ್.ಎಚ್.ಮುದ್ನಾಳ, ಸಿದ್ದು ಧನಗೊಂಡ, ಶಂಕರ ಪೂಜಾರಿ, ಕಾಶೀನಾಥ ಹುಗ್ಗಿ, ವೈ.ವೈ.ತಿಮ್ಮಾಪೂರ ಸೇರಿದಂತೆ ವಿವಿಧ ತಾಲೂಕಿನ ಭಕ್ತಾದಿಗಳು ಭಾಗವಹಿಸಿದ್ದರು. ಮಹಾಂತೇಶ ಪಟ್ಟಣದ ಕಾರ್ಯಕ್ರಮ ನಿರ್ವಹಿಸಿದರು.