ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ಪೂರ್ಣ ಪ್ರಮಾಣದ ಒಳಮೀಸಲಾಡಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದು ಒತ್ತಾಯಿಸಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿರ್ವಾಣ ದಿನವಾದ ಡಿ. 6 ರಂದು ಸಾಮಾಜಿಕ ನ್ಯಾಯಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳ ಸ್ವಗ್ರಾಮ ಸಿದ್ದರಾಮನ ಹುಂಡಿಯಿಂದ ಕಾಲ್ನಡಿಗೆ ಜಾಥಾ ಆರಂಭಿಸಿ, ಡಿ.11ಕ್ಕೆ ಮೈಸೂರಿನ ಟೌನ್ ಹಾಲ್ ಮುಂಭಾಗನಲ್ಲಿ ಬೃಹತ್ ರಾಜ್ಯಮಟ್ಟದ ಪ್ರತಿಭಟನಾ ಸಮಾವೇಶವನ್ನು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ನಡೆಸಲಾಗುವುದು ಎಂದು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಹಾಗೂ ಮಾದಿಗ ಸಮುದಾಯಗಳ ಒಕ್ಕೂಟದ ರಾಜ್ಯ ಸಂಚಾಲಕ ಕೇಶವ ಮೂರ್ತಿ ತಿಳಿಸಿದರು.
ಆದೇಶ ಜಾರಿಗೆ ಮೀನಮೇಷನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2024ರ ಆಗಸ್ಟ್ 1 ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ಇಂದಿಗೆ 14 ತಿಂಗಳು ಗತಿಸಿದವು. ಪಂಜಾಬ್, ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ರಾಜ್ಯಗಳು ಒಳಮೀಸಲಾತಿಯನ್ನು ಜಾರಿಗೆ ಮಾಡಿ 3 ತಿಂಗಳಾಗಿದೆ. ಆದರೆ ರಾಜ್ಯ ಸರ್ಕಾರ ಒಳಮೀಸಲಾತಿ ವಿಷಯದಲ್ಲಿ ಇನ್ನೂ ಮೀನಮೇಷ ಮಾಡುತ್ತಿತ್ತು. ಸರ್ಕಾರದ ಈ ವಿಳಂಬ ದೋರಣೆಯನ್ನು ಖಂಡಿಸುತ್ತೇವೆ ಎಂದರು.
ಕಳೆದ ಆಗಸ್ಟ್ 11ರಿಂದ ಆರಂಭಗೊಂಡ ಸಾಮಾಜಿಕ ನ್ಯಾಯದ ಪ್ರತೀಕವಾದ ಮತ್ತು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್‌ದಾಸ್ ಆಯೋಗದ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಲು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 2ನೇ ಹಂತದ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಆಹೋರಾತ್ರಿ ಧರಣಿ ನಡೆಸಲಾಗಿತ್ತು. ಆಗ ಸರ್ಕಾರ 5 ಪ್ರವರ್ಗಗಳ ಬದಲಾಗಿ 3 ಪ್ರವರ್ಗಗಳನ್ನಾಗಿ ವಿಂಗಡಿಸಿ ಒಟ್ಟು ಶೇ.17 ಮೀಸಲಾತಿಯನ್ನು ಹಂಚಿಕೆ ಮಾಡಲು ತೀರ್ಮಾನಿಸಿತ್ತು ಎಂದರು.ಒಳ ಮೀಸಲು ಹೋರಾಟ ನಿಲ್ಲದು
ಪರಿಶಿಷ್ಟ ಜಾತಿ ಉಪಹಂಚಿಕೆಯ ಅನುದಾನ ಹಂಚಿಕೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಒಳಮೀಸಲಾತಿ ಅಸಾಧ್ಯವೆಂದು ಹೇಳಿದ ಮುಖ್ಯಮಂತ್ರಿಗಳ ಗಿಳಿಪಾಠವನ್ನು ನಮ್ಮ ಮಂತ್ರಿಗಳು ಹೋರಾಟಗಾರರಿಗೆ, ಸಮುದಾಯಕ್ಕೆಹೇಳುತ್ತಿದ್ದಾರೆ.ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ನವರು ಕಡತವನ್ನು ಮಂಡಿಸದೆ ಸಂಪುಟ ಸಭೆಗೆ ಗೈರಾಜರಾಗಿ ತಮ್ಮ ಉದ್ದಟತನವನ್ನು ತೋರಿಸಿದ್ದಾರೆ. ಆದರೆ ನಮ್ಮ ಹಕ್ಕುಗಳು ಸಿಗುವ ವರೆಗೂ ಒಳ ಮೀಸಲಾತಿ ಹೋರಾಟ ಮುಂದುವರಿಯಲಿದೆದೆ.ಸುದ್ದಿಗೋಷ್ಟಿಯಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ಟಿ.ಮುನಿಕೃಷ್ಣಪ್ಪ. ಬಿ.ಎನ್.ಗಂಗಾಧರಪ್ಪ, ಸುರೇಶ್.ವಿ, ಮುನಿಕೃಷ್ಣಪ್ಪ ಇದ್ದರು.