ಎಕ್ಕಾರು: ಇಂದು ಕಟೀಲು ದೇವಸ್ಥಾನ ಸ್ವಾಗತ ದ್ವಾರ ಉದ್ಘಾಟನೆ

KannadaprabhaNewsNetwork | Published : Apr 16, 2025 12:44 AM

ಸಾರಾಂಶ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದ ಎಕ್ಕಾರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಸ್ವಾಗತ ದ್ವಾರ, ನೂತನವಾಗಿ ನಿರ್ಮಾಣಗೊಳ್ಳಲಿರುವ ಬ್ರಹ್ಮ ರಥಕ್ಕೆ ಮುಹೂರ್ತ ಹಾಗೂ ರಕ್ತೇಶ್ವರಿ ಸನ್ನಿಧಿಯ ಜೀರ್ಣೋದ್ಧಾರಕ್ಕೆ ಬುಧವಾರ ಉಡುಪಿ ಪಲಿಮಾರು ಶ್ರೀಗಳು ಚಾಲನೆ ನೀಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದ ಎಕ್ಕಾರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಸ್ವಾಗತ ದ್ವಾರ, ನೂತನವಾಗಿ ನಿರ್ಮಾಣಗೊಳ್ಳಲಿರುವ ಬ್ರಹ್ಮ ರಥಕ್ಕೆ ಮುಹೂರ್ತ ಹಾಗೂ ರಕ್ತೇಶ್ವರಿ ಸನ್ನಿಧಿಯ ಜೀರ್ಣೋದ್ಧಾರಕ್ಕೆ ಬುಧವಾರ ಉಡುಪಿ ಪಲಿಮಾರು ಶ್ರೀಗಳು ಚಾಲನೆ ನೀಡಲಿದ್ದಾರೆ.

ಬೆಳಗ್ಗೆ ಗಂಟೆ 9.30ಕ್ಕೆ ಎಕ್ಕಾರಿನಲ್ಲಿ ನಡೆಯುವ ಸ್ವಾಗತ ದ್ವಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಫಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥರು, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಎಕ್ಕಾರು ಶ್ರೀ ಗೋಪಾಲಕೃಷ್ಣ ಮಠದ ಹರಿದಾಸ ಉಡುಪ, ನಿತಿನ್ ಹೆಗ್ಡೆ, ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್‌ ಹೆಗ್ಡೆ ಕಾವರ ಮನೆ (ತಿಮ್ಮ ಕಾವ), ಉದ್ಯಮಿ ಸುಧಾಕರ ಶೆಟ್ಟಿ, ಅನಿಲ್ ಕುಮಾರ್ ಶೆಟ್ಟಿ ಭಾಗವಹಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಕಟೀಲು ದೇವಸ್ಥಾನದಲ್ಲಿ ನೂತನ ಬ್ರಹ್ಮರಥಕ್ಕೆ ಮುಹೂರ್ತ, ರಕೇಶ್ವರಿ ಸಾನ್ನಿಧ್ಯ ಜೀರ್ಣೋದ್ಧಾರಕ್ಕೆ ಫಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.

ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ವೇದವ್ಯಾಸ ತಂತ್ರಿ ಶಿಬರೂರು, ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಸನತ್‌ ಕುಮಾರ್‌ ಶೆಟ್ಟಿ ಕೊಡೆತ್ತೂರು ಗುತ್ತು, ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಕೋಟ್ಯಾನ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಅಭಯಚಂದ್ರ ಜೈನ್, ಮಿಥುನ್ ರೈ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ಎಕ್ಕಾರಿಗೆ ಯಾತ್ರೆ ಸವಾರಿ ಹೋಗುವ ಮುನ್ನ ಕಟ್ಟೆ ಪೂಜೆ ನಡೆಯುವ ಪಾನಕ ಕಟ್ಟೆಯ ಉದ್ಘಾಟನೆ ಸಂಜೆ 5 ಗಂಟೆಗೆ ನಡೆಯಲಿದೆ. ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Share this article