ಬೆಳ್ತಂಗಡಿ: ಸುಂದರವಾದ ಮರದಲ್ಲಿ ಹೂವು, ಕಾಯಿ, ಹಣ್ಣುಗಳು ಇರಬೇಕಾದರೆ ಅದರ ಬೇರು ಗಟ್ಟಿಯಾಗಿರಬೇಕು. ಅಂತೆಯೇ ಸುಂದರ ಕುಟುಂಬದ ಭದ್ರತೆಗೆ ಆ ಮನೆಯಲ್ಲಿರುವ ಹಿರಿಯರು ಬೇರು ಇದ್ದಂತೆ ಎಂದು ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶ ರಾಮಲಿಂಗಪ್ಪ ಹೇಳಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಅಧ್ಯಕ್ಷತೆ ವಹಿಸಿ ಮಾತುನಾಡಿ, ಹಿರಿಯ ನಾಗರಿಕರನ್ನು ಅವಕಾಶ ವಂಚಿತರನ್ನಾಗಿ ಮಾಡಿಸುವುದೂ ಕೂಡ ಅಪರಾಧವೇ ಆಗಿದೆ. ಕಾನೂನು ಮೀರುವವರಿಗೆ ಶಿಕ್ಷೆ ವಿಧಿಸಿದಾಗ ಅದರ ಪಾಲನೆ ಮಾಡುವ ಮಾನಸಿಕತೆ ಕೂಡ ಬೆಳೆಯಬೇಕಾಗುತ್ತದೆ. ಆ ಸಂಸ್ಕೃತಿಯನ್ನು ಈ ಸಮಾಜದಲ್ಲಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದರು.
ಕಂದಾಯ ನಿರೀಕ್ಷಕ ಕುಮಾರ ಸ್ವಾಮಿ, ತಾಲೂಕು ವಕೀಲರ ಸಂಘದ ಕೋಶಾಧಿಕಾರಿ ಮುಮ್ತಾಝ್ ಬೇಗಂ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ ಬಿ. ಜಿ.ಪಂ.ಮಾಜಿ ಸದಸ್ಯೆ ಹಾಗೂ ಸೌಭಾಗ್ಯ ವಿಕಲ ಚೇತನರ ಪತ್ತಿನ ಸಹಕಾರಿ ಸಂಘದ ಸಲಹಾ ಸಮಿತಿ ಸದಸ್ಯೆ ಸಿ.ಕೆ.ಚಂದ್ರಕಲಾ ಉಪಸ್ಥಿತರಿದ್ದರು.ಹಿರಿಯ ವಕೀಲೆ ಸುಭಾಶಿನಿ ಆರ್, ಹಿರಿಯ ನಾಗರಿಕರಿಗೆ ಕಾನೂನು ಮಾಹಿತಿ. ತಾಲೂಕು ವಿಕಲಚೇತನರ ಮೇಲ್ವಿಚಾರಕ ಜೋನ್ ಬ್ಯಾಪ್ಟಿಸ್ ಡಿಸೋಜ ಸರಕಾರದ ಯೋಜನೆಗಳ ಮಾಹಿತಿ ನೀಡಿದರು.
ಇಂದಬೆಟ್ಟು ಗ್ರಾ.ಪಂ.ವಿ.ಆರ್.ಡಬ್ಲ್ಯು. ಎಂ.ಜೆ. ಜೋಸೆಫ್ ಸ್ವಾಗತಿಸಿದರು. ನಿಡ್ಲೆ ವಿಆರ್ ಡಬ್ಲ್ಯು ಹೇಮಲತಾ ಪ್ರಾರ್ಥಿಸಿದರು. ಹಿರಿಯ ಪತ್ರಕರ್ತ ಅಶ್ರಫ್ ಆಲಿ ಕುಂಞ ನಿರೂಪಿಸಿದರು. ಬೆಳಾಲು ಗ್ರಾ.ಪಂ. ವಿ.ಆರ್.ಡಬ್ಲ್ಯು. ಈರಣ್ಣ ವಂದಿಸಿದರು.ಮಕ್ಕಳಿಗೆ ಸರಕಾರಿ ನೌಕರಿ ದೊರೆತರೆ ಅವರ ಹೆತ್ತವರಿಗೆ ದೊರೆಯುತ್ತಿದ್ದ ಹಿರಿಯ ನಾಗರಿಕರ ಪಿಂಚಣಿ ಸ್ಥಗಿತಗೊಳಿಸುವ ನೀತಿ ಬದಲಾಗಬೇಕಿದೆ. ಯಾಕೆಂದರೆ ಸರಕಾರದಿಂದ ಸಿಗುವ ಪಿಂಚಣಿಯಿಂದ ಅವರ ಉದ್ದೇಶ ಎಲ್ಲವೂ ಈಡೇರುತ್ತದೆ ಎಂಬುದಲ್ಲ ಆದರೆ ಅವರಿಗೆ ಒಂದು ಭರವಸೆ ಲಭಿಸುತ್ತದೆ ಎಂಬುದನ್ನು ಮನಗಾಣಬೇಕು.-ರಾಮಲಿಂಗಪ್ಪ, ಪ್ರಧಾನ ಸಿವಿಲ್ ನ್ಯಾಯಾಧೀಶ