ಸೋಮವಾರಪೇಟೆ: ಗಣೇಶನ ಮೂರ್ತಿ ವಿಸರ್ಜನಾ ಮೆರವಣಿಗೆ

KannadaprabhaNewsNetwork |  
Published : Sep 28, 2026, 02:15 AM IST
ಕಕ್ಕೆ ಹೊಳೆ ಗಣಪತಿ ವಿಸರ್ಜನಾ ಮೆರವಣಿಗೆ | Kannada Prabha

ಸಾರಾಂಶ

ಸೋಮವಾರಪೇಟೆ: ಗಣೇಶನ ಮೂರ್ತಿ ವಿಸರ್ಜನಾ ಮೆರವಣಿಗೆ

ಸೋಮವಾರಪೇಟೆ : ಪಟ್ಟಣದ ವಿವಿಧೆಡೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಮೂರ್ತಿಯನ್ನು ಗುರುವಾರ ವಿಜೃಂಭಣೆಯ ಶೋಭಾಯಾತ್ರೆಯೊಂದಿಗೆ ಆನೆಕೆರೆಯಲ್ಲಿ ವಿಸರ್ಜಿಸಲಾಯಿತು. ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ೧೪ ಅಡಿ ಎತ್ತರದ ಸಾರ್ವಜನಿಕ ಸಮಿತಿಯ ಗಣಪತಿ, ಕಕ್ಕೆಹೊಳೆಯ ಮಹಾಗಣಪತಿ ಸೇವಾ ಸಮಿತಿ, ಹಾನಗಲ್ ಗ್ರಾಮದ ಭಗತ್ ಯುವಕ ಸಂಘದ ಗಣಪತಿ, ಆಲೆಕಟ್ಟೆಯ ಭಾರತೀಯ ಯುವಕ ಸಂಘ, ಬಸವೇಶ್ವರ ದೇವಾಲಯ ಸಮಿತಿ, ಕರ್ಕಳ್ಳಿಯ ಕಟ್ಟೆ ಬಸವೇಶ್ವರ ದೇವಾಲಯ ಸಮಿತಿ, ಮಾನಸ ಹಾಲ್‌ನ ಜೈಭಾರತ್ ಯುವಕ ಸಂಘ, ಮಹಾದೇಶ್ವರ ಬ್ಲಾಕ್‌ನ ಸಿದ್ಧಿ ವಿನಾಯಕ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ಭವ್ಯ ಮಂಟಪದಲ್ಲಿ, ಶೋಭಾಯಾತ್ರೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಧ್ಯರಾತ್ರಿವರೆಗೂ ತೆರಳಿದ ಮೆರವಣಿಗೆ ನಂತರ ಆನೆಕೆರೆಯಲ್ಲಿ ಪೂಜಾ ವಿಧಿವಿಧಾನಗಳೊಂದಿಗೆ ವಿಸರ್ಜಿಲಾಯಿತು. ಮಧ್ಯಾಹ್ನದ ವೇಳೆಯಲ್ಲಿ ಅನ್ನದಾನವನ್ನು ಏರ್ಪಡಿಲಾಗಿತ್ತು.

ಸಾರ್ವಜನಿಕ ಸೇವಾ ಸಮಿತಿಯ ವತಿಯಿಂದ ಕಲ್ಲಡ್ಕ ಗೊಂಬೆಗಳ ನೃತ್ಯ, ಡಿಜೆ ಸೌಂಡ್ಸ್ ಸೇರಿದಂತೆ ವಿವಿಧ ಬ್ಯಾಂಡ್ ಸೆಟ್ ಗಳ ಪ್ರದರ್ಶನ ಗಮನ ಸೆಳೆಯಿತು. ಒಂಭತ್ತಕ್ಕೂ ಅಧಿಕ ಗಣಪತಿಗಳನ್ನು ವಿಶೇಷವಾಗಿ ಸಿಂಗರಿಸಿಲಾಗಿದ್ದ ವಿದ್ಯುತ್ ಅಲಂಕೃತ ಮಂಟಪಗಳು ಭಕ್ತಾದಿಗಳು ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ನಿರೀಕ್ಷಕ ಮುದ್ದುಮಹಾದೇವ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ ಶಾಸಕರಿಗೇ ಸರ್ಕಾರದ ಮೇಲೆ ವಿಶ್ವಾಸವಿಲ್ಲ: ಮಟ್ಟಾರು
ಕುಟುಂಬದ ಭದ್ರತೆಗೆ ಮನೆಯ ಹಿರಿಯರು ಬೇರು ಇದ್ದಂತೆ : ನ್ಯಾ. ರಾಮಲಿಂಗಪ್ಪ