ಮತದಾನದಿಂದ ರಾಷ್ಟ್ರ ಭವಿಷ್ಯ ರೂಪಿಸುವ ಶಕ್ತಿಯೇ ಚುನಾವಣೆ: ಕೃಷ್ಣ ನಾಯ್ಕ

KannadaprabhaNewsNetwork |  
Published : Apr 30, 2024, 02:01 AM IST
ಕ್ಯಾಪ್ಷನಃ29ಕೆಡಿವಿಜಿ42ಃದಾವಣಗೆರೆ ನಿಟ್ಟುವಳ್ಳಿಯ ಆರ್.ಎಂ.ಎಸ್.ಎ ಶಾಲೆಯಲ್ಲಿ ನಡೆದ ಸಂಗೀತ ಸುಧೆ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಮತ ಚಲಾಯಿಸುವ ಮೂಲಕ ರಾಷ್ಟ್ರದ ಭವಿಷ್ಯದ ಹಾದಿಯನ್ನು ರೂಪಿಸುವ ಶಕ್ತಿಯೇ ಮತದಾನವಾಗಿದ್ದು, ಇದು ಪ್ರಜಾಪ್ರಭುತ್ವದ ನೀತಿಗೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣನಾಯ್ಕ ದಾವಣಗೆರೆಯಲ್ಲಿ ಹೇಳಿದ್ದಾರೆ.

ದಾವಣಗೆರೆ: ಮತ ಚಲಾಯಿಸುವ ಮೂಲಕ ರಾಷ್ಟ್ರದ ಭವಿಷ್ಯದ ಹಾದಿಯನ್ನು ರೂಪಿಸುವ ಶಕ್ತಿಯೇ ಮತದಾನವಾಗಿದ್ದು, ಇದು ಪ್ರಜಾಪ್ರಭುತ್ವದ ನೀತಿಗೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣನಾಯ್ಕ ಹೇಳಿದರು.

ನಗರದ ನಿಟ್ಟುವಳ್ಳಿಯಲ್ಲಿನ ಆರ್.ಎಂ.ಎಸ್.ಎ ಶಾಲೆಯಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ದಾವಣಗೆರೆ ಉತ್ತರ ಕ್ಷೇತ್ರ ಆಶ್ರಯದಲ್ಲಿ ನಡೆದ ಸಂಗೀತ ಸುಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯುವಕರನ್ನು ಮತದಾರರಾಗಿ ನೋಂದಾಯಿಸಲು ಮತ್ತು ನಂತರ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೇರೇಪಿಸಲು ಮತ್ತು ಉತ್ತೇಜಿಸಲು ಜಾಗೃತಿ ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದರು.

ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ ಕಾರ್ಯಕ್ರಮ ಉದ್ಘಾಟಿಸಿದರು. ಆಯಿಲ್ ಪೇಸ್ಟ್ ಡ್ರಾಯಿಂಗ್‌ನ್ನು ಸ್ಪಂಜ್ ಕಲರ್ ಪೌಡರ್‌ನಿಂದ ತಯಾರಿಸಿದ ಬೋರ್ಡ್‌ನಲ್ಲಿ ಮೇ 7ರಂದು ಮತದಾನೋತ್ಸವ, ಮತದಾನ ಎಲ್ಲರ ಹಕ್ಕು ತಪ್ಪದೇ ಮತ ಚಲಾಯಿಸಿ ಎಂಬ ಪ್ರದರ್ಶನ ಇದರಲ್ಲಿ ಮೂಡಿಬಂದಿತು.

ಶಾಲಾ ಗೋಡೆ, ಪಟಗಳಲ್ಲಿ ಮತದಾನ ಜಾಗೃತಿ:

ಪ್ರಜಾಪ್ರಭುತ್ವವು ವಿದ್ಯಾವಂತ ಮತದಿಂದ ಅಭಿವೃದ್ದಿ ಹೊಂದುತ್ತದೆ. ಉತ್ತಮ ನಾಳೆಗಾಗಿ ಮತ ಚಲಾಯಿಸಿ, ನಿಮ್ಮ ಮತ ನಿಮ್ಮ ಹಕ್ಕು, ಸಮಾನತೆ ನ್ಯಾಯ ಮತ್ತು ಪ್ರಗತಿಗಾಗಿ ಮತ ಚಲಾಯಿಸಿ, ಮತದಾನ ನಿಮ್ಮ ಹಕ್ಕು ಮತ್ತು ಕರ್ತವ್ಯ, ಯುವ ಮನಸ್ಸುಗಳು ಶಕ್ತಿಯುತ ಮತಗಳು, ಚುನಾವಣೆ ನಿಮ್ಮ ದಿನ, ನಿಮ್ಮ ಧ್ವನಿ ಮತಗಟ್ಟೆಯಲ್ಲಿ ಪ್ರತಿಧ್ವನಿಸಲಿ, ಯುವ ಮತದಾರರೇ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ, ಮತದಾನ ಪ್ರಜಾಪ್ರಭುತ್ವದ ಹೃದಯ ಬಡಿತ, ಮತದಾನ ಒಂದು ಜವಾಬ್ದಾರಿ ಅದನ್ನು ಗೌರವಿಸಿ, ಬದಲಾವಣೆಗೆ ಯುವ ಮತದಾರರು ಒಗ್ಗೂಡಲಿ, ನಿಮ್ಮ ಮತವು ನಮ್ಮ ನಾಯಕನನ್ನು ರೂಪಿಸಲಿ ಎಂಬ ವಾಕ್ಯಗಳನ್ನು ಶಾಲೆ ಗೋಡೆ, ಪಟಗಳಲ್ಲಿ ಬರೆಯಲಾಗಿತ್ತು.

ಕಾರ್ಯಕ್ರಮದಲ್ಲಿ ಬಿಇಒ ಡಾ.ಪುಷ್ಪಲತಾ , ಜಿಪಂ ಉಪನಿರ್ದೇಶಕಿ ಶಾರದಾ ದೊಡ್ಡಗೌಡ, ದಕ್ಷಿಣ ಕ್ಷೇತ್ರ ಸಂಪನ್ಮೂಲ ಬಿಆರ್‌ಪಿ ಮತ್ತು ಸಿಆರ್‌ಪಿ ಬಿಐಆರ್‌ಟಿ ಶಿಕ್ಷಕರು ಹಾಗೂ ಸಿಬ್ಬಂದಿ ಇನ್ನಿತರರು ಭಾಗವಹಿಸಿದ್ದರು.

- - - -29ಕೆಡಿವಿಜಿ42ಃ:

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ