ದೊಡ್ಡಬಳ್ಳಾಪುರ: ತಾಲೂಕಿನ ಕಸಬಾ ಹೋಬಳಿಯ ಅರೆಹಳ್ಳಿ-ಗುಡ್ಡದಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದೆ.
ಕಳೆದ ಜ.14ರಂದು ಅರೆಹಳ್ಳಿಗುಡ್ಡದಹಳ್ಳಿ ಎಂಪಿಸಿಎಸ್ ನ 12 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ 10 ಮಂದಿ ಬಿಜೆಪಿ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾದರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಓರ್ವ, ಅವಿರೋಧವಾಗಿ ಓರ್ವ ಸದಸ್ಯ ಆಯ್ಕೆಯಾಗಿದ್ದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಮುಖಂಡರಾದ ಎನ್.ರಾಮಾಂಜಿನಪ್ಪ, ಜಯರಾಮರೆಡ್ಡಿ, ನಾರಾಯಣಮ್ಮ, ಗುಂಡಪ್ಪ, ಹನುಮಂತಗೌಡ, ಎ.ಮುನಿಯಪ್ಪ, ನಂಜೇಗೌಡ, ವೆಂಕಟೇಶ್, ರಾಜಣ್ಣ ಅಶ್ವತ್ಥನಾರಾಯಣ, ಪಟೇಲ್, ಶ್ರೀನಿವಾಸರೆಡ್ಡಿ ಅಭಿನಂದಿಸಿದರು.19ಕೆಡಿಬಿಪಿ4-ದೊಡ್ಡಬಳ್ಳಾಪುರದ ಅರೆಹಳ್ಳಿಗುಡ್ಡದಹಳ್ಳಿ ಎಂಪಿಸಿಎಸ್ ನೂತನ ಅಧ್ಯಕ್ಷ - ಉಪಾಧ್ಯಕ್ಷರನ್ನು ಮುಖಂಡರು ಅಭಿನಂದಿಸಿದರು.