ಬಾಬಾನಗರ ಮಂದಿರದ ನೂತನ ಪದಾಧಿಕಾರಿಗಳ ಆಯ್ಕೆ

KannadaprabhaNewsNetwork |  
Published : Jul 23, 2025, 03:31 AM IST
ಅರುಣ ಯಲಗುದ್ರಿ  | Kannada Prabha

ಸಾರಾಂಶ

ವಿಜಯಪುರ ಜಿಲ್ಲೆಯ ಬಾಬಾನಗರದಲ್ಲಿ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ್ ಮಹಾಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ ಮಹಾರಾಜ ದರಬಾರ ದಿಗಂಬರ ಜೈನ ಮಂದಿರ ಅತಿಶಯ ಕ್ಷೇತ್ರ ಬಾಬಾನಗರ ಮಂದಿರದ ನೂತನ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿಜಯಪುರ ಜಿಲ್ಲೆಯ ಬಾಬಾನಗರದಲ್ಲಿ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ್ ಮಹಾಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ ಮಹಾರಾಜ ದರಬಾರ ದಿಗಂಬರ ಜೈನ ಮಂದಿರ ಅತಿಶಯ ಕ್ಷೇತ್ರ ಬಾಬಾನಗರ ಮಂದಿರದ ನೂತನ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ವಿಜಯಪುರ ಜಿಲ್ಲೆಯ ಕೆಎಂಎಫ್‌ನ ಮಾಜಿ ಅಧ್ಯಕ್ಷರು, ಆಲಗೂರ ಗ್ರಾಮ ಪಿ.ಟಿ.ಪಾಟೀಲ, ಕಾರ್ಯದರ್ಶಿಯಾಗಿ ಮಹಿಷವಾಡಗಿ ಗ್ರಾಮದ ನಿವೃತ್ತ ಇಂಜಿನೀಯರ್ ಅರುಣ ಯಲಗುದ್ರಿ, ಖಜಾಂಚಿಯಾಗಿ ಬಾಬಾನಗರದ ಮಹಾವೀರ ಕುಸನಾಳೆ ಆಯ್ಕೆಯಾದರು. ಈ ಮಂದಿರದ ಅಧ್ಯಕ್ಷರು ಖಾಯಂ ಆಗಿ ಶ್ರೀಕ್ಷೇತ್ರ ನಾಂದಣಿ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಸ್ವಾಮೀಜಿ ಇರುತ್ತಾರೆ. ಸಭೆಯಲ್ಲಿ ಶ್ರೀಗಳು ಎಲ್ಲ ಆಡಳಿತ ಮಂಡಳಿ ಸದಸ್ಯರು ಒಂದಾಗಿ, ಒಟ್ಟಾಗಿ ಈ ಪುರಾತನ ಶ್ರೀ ಪಾರ್ಶ್ವನಾಥ ಮಂದಿರದ ಕೆಲಸವನ್ನು ಮಾಡಬೇಕು ಎಂದು ಆಶೀರ್ವದಿಸಿ, ಸರ್ಕಾರದ ಸೌಲತ್ತುಗಳನ್ನು ಪಡೆದು ಮಂದಿರದ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಸೂಚಿಸಿದರು. ಸಭೆಯಲ್ಲಿ ಮಂದಿರದ ಜೀರ್ಣೋದ್ಧಾರದ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಬಾಬಾನಗರದ ಹಿರಿಯರಾದ ಪಾರೀಸ ಆಯತವಾಡ, ಆದಿನಾಥ ಬಸ್ತಿ, ಇಂಜಿನೀಯರ್ ಸಂಜಯ ಪಾಟೀಲ, ಕೆಜೆಎ ಆಡಳಿತ ಮಂಡಳಿ ಸದಸ್ಯ ಸುಕುಮಾರ ಪಾಟೀಲ, ಕೆಜೆಎ ಮಾಜಿ ಉಪಾಧ್ಯಕ್ಷ ಎ.ಸಿ.ಪಾಟೀಲ, ವಿಜಯಪುರದ ಭರತೇಶ ಯಲಗುದ್ರಿ, ನಂದಾಗಾಂವದ ಭರಾಮು ಪಾಟೀಲ, ಗುಂಡವಾಡದ ಮಲಗೌಡ ಪಾಟೀಲ, ಝುಂಜರವಾಡದ ಜಿನಗೌಡ ಸವದತ್ತಿ ಹಾಗೂ ಮೋಳವಾಡದ ಸತೀಶ ಗುಂಡವಾಡೆ ಉಪಸ್ಥಿತರಿದ್ದರು. ಣಮೋಕಾರ ಮಹಾಮತ್ರದೊಂದಿಗೆ ಸಭೆ ಮುಕ್ತಾಯವಾಯಿತು.ಪಪೂ ಜಗದ್ಗುರು ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಸ್ವಾಮೀಜಿಯವರು ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಆಶೀರ್ವದಿಸಿದರು.ಆದಿಲಶಾಹಿ ಕಾಲದ ಈ ಪುರಾತನ ಮಂದಿರವನ್ನು ಸಂರಕ್ಷಣೆ ಮಾಡಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಶ್ರೀಗಳ ಅಪ್ಪಣೆ ಮೇರೆಗೆ ಈ ಪುರಾತನ ಪಾರ್ಶ್ವನಾಥ ಮಂದಿರದ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಎಲ್ಲರು ಸೇರಿಕೊಂಡು ಕಾರ್ಯಗತವಾಗಬೇಕಾಗಿದ್ದು, ಸರ್ವರ ಸಹಕಾರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಈ ಮಂದಿರವನ್ನು ಐತಿಹಾಸಿ ಕೇಂದ್ರವನ್ನಾಗಿ ಮಾಡಲು ಶ್ರಮಿಸೋಣ.

-ಅರುಣ ಯಲಗುದ್ರಿ, ಬಾಬಾನಗರ ಮಂದಿರದ ನೂತನ ಕಾರ್ಯದರ್ಶಿಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ