ತಾಲೂಕಿನ ರ‍್ಯಾವಣಕಿ ಗ್ರಾಮದ ಈರಣ್ಣ (ಆಂಜನೇಯ) ದೇವಸ್ಥಾನದ ಸಮುದಾಯ ಭವನದಲ್ಲಿ ಶನಿವಾರ ಗಾಣಿಗ ಸಮಾಜದ ಯಲಬುರ್ಗಾ–ಕುಕನೂರು ತಾಲೂಕಿನ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಯಲಬುರ್ಗಾ
ತಾಲೂಕಿನ ರ‍್ಯಾವಣಕಿ ಗ್ರಾಮದ ಈರಣ್ಣ (ಆಂಜನೇಯ) ದೇವಸ್ಥಾನದ ಸಮುದಾಯ ಭವನದಲ್ಲಿ ಶನಿವಾರ ಗಾಣಿಗ ಸಮಾಜದ ಯಲಬುರ್ಗಾ–ಕುಕನೂರು ತಾಲೂಕಿನ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಶರಣಪ್ಪ ರ‍್ಯಾವಣಕಿ ಹಾಗೂ ವಿಶ್ವನಾಥ ತಮ್ಮಣ್ಣವರ ಮಾತನಾಡಿ, ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ಗಾಣಿಗ ಸಮಾಜದ ಎಲ್ಲ ಹಿರಿಯ, ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜದ ಸಂಘಟನೆಗೆ ಹೆಚ್ಚು ಶ್ರಮಿಸುತ್ತೇವೆ ಎಂದರು.
ಬಳಿಕ ನೂತನ ಪದಾಧಿಕಾರಿಗಳನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಸಮಾಜದ ಮುಖಂಡರಾದ ಅರವಿಂದಗೌಡ ಪಾಟೀಲ, ಉಮೇಶ ಮೆಣಸಗೇರಿ, ಚಂದ್ರು ದೇಸಾಯಿ, ರತನ್ ದೇಸಾಯಿ, ಜಗದೀಶಪ್ಪ ಸಿದ್ದಾಪುರ, ಸುಧಾಕರ ದೇಸಾಯಿ, ಅಯ್ಯನಗೌಡ ಕೆಂಚಮ್ಮನವರ್, ರೇವಣಪ್ಪ ಸಂಗಟಿ, ಎಸ್.ಬಿ. ವದ್ನಾಳ, ವೀರಣ್ಣ ಹಳ್ಳಿ, ಭೀಮನಗೌಡ ಪೂಜಾರ, ಮಲ್ಲನಗೌಡ ಪಾಟೀಲ್, ಮಲ್ಲನಗೌಡ ಕೋನನಗೌಡ್ರ, ಹನುಮಂತರಾವ ಕೆಂಪಳ್ಳಿ, ಬಸವರಾಜ ಬೊಮ್ಮನಾಳ, ದೇವರಾಜ ಮ್ಯಾದ್ನೇರಿ, ಬಾಳೇಶಪ್ಪ ಹುರಳು, ಚಿದಾನಂದಪ್ಪ ಹರಕಂಗಿ, ರಾಚಪ್ಪ ಹುರಳಿ, ಹಿರೇಹನುಮಂತಪ್ಪ ಭಾವಿಕಟ್ಟಿ, ಮಹಾಂತೇಶ ಗಾಣಿಗೇರ, ಶಿವಪ್ಪ ವಾದಿ, ಆದೇಶ ರೊಟ್ಟಿ, ಸೋಮು ಪೂಜಾರ, ಶರಣಪ್ಪ ನಿಲೋಗಲ್, ವಿರೂಪಾಕ್ಷಿ ದೇವಲ್, ಶಂಕರ ಮೂಲಿ, ಕರಿಬೀರಪ್ಪ ಗೌಡ್ರ, ಈಶಪ್ಪ ಮೂಲಿ, ಹನುಮೇಶ ಹೊಸೂರ, ಪ್ರಭುಗೌಡ ಪಾಟೀಲ, ಶಿವಸಂಗಪ್ಪ ಹುಚ್ಚನೂರ, ಬಸವರಾಜ ಬೊಮ್ಮನಾಳ ಸೇರಿದಂತೆ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.