ಮೇ ೩೧ರಂದು ತಾಲೂಕು ಮಟ್ಟದ ಬಸವ ಜಯಂತಿ, ಪ್ರತಿಭಾ ಪುರಸ್ಕಾರ ಕನ್ನಡಪ್ರಭ ವಾರ್ತೆ ಸಂಡೂರು
ತಾಲೂಕು ವೀರಶೈವ ಲಿಂಗಾಯತ ಸಂಘದ ನೂತನ ಪದಾಧಿಕಾರಿಗಳನ್ನು ಒಂದು ವರ್ಷದ ಅವಧಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ನೂತನ ಅಧ್ಯಕ್ಷ ಪಿ. ರವಿಕುಮಾರ್ ತಿಳಿಸಿದರು.ಪಟ್ಟಣದಲ್ಲಿನ ಸಂಘದ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸಂಘದ ವತಿಯಿಂದ ಮೇ ೩೧ ರಂದು ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ತಾಲ್ಲೂಕು ಮಟ್ಟದ ಬಸವ ಜಯಂತಿ ಹಾಗೂ ವೀರಶೈವ ಲಿಂಗಾಯತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ ೮೦ಕ್ಕಿಂತ ಹೆಚ್ಚು ಹಾಗೂ ಪಿಯುಸಿಯಲ್ಲಿ ಶೇ ೮೫ಕ್ಕಿಂತ ಹೆಚ್ಚು ಅಂಕಗಳಿಸಿದ ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಪ್ರತಿ, ಆಧಾರ್ ಕಾರ್ಡ್ ಹಾಗೂ ಎರಡು ಫೋಟೊಗಳನ್ನು ಪಟ್ಟಣದ ಅಗ್ನಿಶಾಮಕ ಠಾಣೆಯ ಬಳಿ ಇರುವ ಸಂಘದ ಕಚೇರಿಯಲ್ಲಿ ಸಲ್ಲಿಸಬೇಕು. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ತಾಲ್ಲೂಕಿಗೆ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಹೆಚ್ಚಿನ ವಿವರಗಳಿಗೆ ಮೊ.ನಂ.೯೩೪೧೪೩೨೯೬೨ ಹಾಗೂ ೬೩೬೩೭೬೯೨೩೭ ಗಳಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದರು.ನೂತನ ಪದಾಧಿಕಾರಿಗಳು:
ಪಿ. ರವಿಕುಮಾರ್ (ಅಧ್ಯಕ್ಷ), ಚಿತ್ರಿಕಿ ಸತೀಶ್ ಕುಮಾರ್ (ಗೌರವ ಅಧ್ಯಕ್ಷ), ಬಿ. ರಮೇಶ್, ಎ.ಎಂ. ಮಲ್ಲಿಕಾರ್ಜುನಯ್ಯ ಹಾಗೂ ಗಡಂಬ್ಲಿ ಚನ್ನಬಸಪ್ಪ (ಉಪಾಧ್ಯಕ್ಷರು), ಎಸ್.ವಿ. ಹಿರೇಮಠ್ (ಕಾರ್ಯದರ್ಶಿ), ಬಿ.ಜಿ. ಸಿದ್ದೇಶ್ (ಸಹ ಕಾರ್ಯದರ್ಶಿ), ಭುವನೇಶ್ ಮೇಟಿ (ಖಜಾಂಚಿ), ಬಿ.ಕೆ. ಬಸವರಾಜ (ಸಂಘಟನಾ ಕಾರ್ಯದರ್ಶಿ).ಸಭೆಯಲ್ಲಿ ಮೇಲುಸೀಮೆ ಶಂಕ್ರಪ್ಪ, ಎಸ್.ವಿ. ಹಿರೇಮಠ, ಬಿ.ಜಿ. ಸಿದ್ದೇಶ್, ಗಡಂಬ್ಲಿ ಚನ್ನಬಸಪ್ಪ, ಸುರೇಶ್‌ಗೌಡ, ರುದ್ರಗೌಡ (ಎಸ್‌ಟಿಡಿ), ಕಿನ್ನೂರೇಶ್ವರ, ಬಿ.ಎಂ. ಉಜ್ಜಿನಯ್ಯ, ಬಂಡ್ರಿ ಬಸವರಾಜ, ಎಂ. ಚರಂತಯ್ಯ ಉಪಸ್ಥಿತರಿದ್ದರು.