ಕನಕಪುರ: ತಾಲೂಕಿನ ಉಯ್ಯಂಬಳ್ಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಏಳಗಳ್ಳಿ ಗ್ರಾಮದ ಮಧು ಹಾಗೂ ಉಪಾಧ್ಯಕ್ಷರಾಗಿ ಚಂದ್ರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆ ಅಧಿಕಾರಿ ಮಂಜುನಾಥ್ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಟ್ಟಸ್ವಾಮಿ ಕಾರ್ಯ ನಿರ್ವಹಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ನಿರ್ದೇಶಕರಾದ, ಕೆಂಪೇಗೌಡ, ಶಿವಮಾದು, ಕೆಂಪೇಗೌಡ, ಶ್ರೀಧರ, ಸಿದ್ಧರಾಮೇಗೌಡ, ಶಿವಮಲ್ಲಯ್ಯ, ರಾಮಾನಾಯಕ್, ಜಯರತ್ನಮ್ಮ, ಗಿರಿಜಮ್ಮ, ವಿಜಯಲಕ್ಷ್ಮಿ ಹಾಜರಿದ್ದು ನೂತನ ಅಧ್ಯಕ್ಷ ಹಾಗು ಉಪಾಧ್ಯಕ್ಷರನ್ನು ಅಭಿನಂದಿಸಿ ಶುಭ ಹಾರೈಸಿದರು.ತಾಪಂ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಏಳಗಳ್ಳಿ ರವಿ, ಮುಖಂಡರಾದ ದೊಡ್ಡಣ್ಣ, ಗ್ರಾಪಂ ಅಧ್ಯಕ್ಷ ಚಂದ್ರು, ಯುವ ಮುಖಂಡರಾದ ಆನಂದ್, ಸಿಬ್ಬಂದಿಗಳಾದ ಕೈಲಾಶ್ ಹಾಗೂ ಕಾವ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮಸ್ಥರು ಅಭಿನಂದಿಸಿದರು.