ಕನ್ನಡಪ್ರಭ ವಾರ್ತೆ ರಾಮನಗರ
ನೂತನ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಕೆ.ಸತೀಶ್, ಎಲ್ಲಾ ಇಲಾಖಾ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ನನ್ನ ನೇತೃತ್ವದ ತಂಡಕ್ಕೆ ಆರ್ಶೀವಾದ ಮಾಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಹಿಂದಿನ ಅವಧಿಯಲ್ಲಿ ನಾವು ಮಾಡಿರುವ ಕೆಲಸವನ್ನು ಸರ್ಕಾರಿ ನೌಕರರು ಗುರುತಿಸಿದ್ದಾರೆ. ಒಟ್ಟು 66 ಸ್ಥಾನಗಳ ಪೈಕಿ 42 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು 24 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಮ್ಮ ಬೆಂಬಲಿಗರು ಹೆಚ್ಚು ಗೆಲುವು ಸಾಧಿಸಿರುವುದು ನನಗೆ ಸಂತಸ ತಂದಿದೆ ಎಂದು ತಿಳಿಸಿದರು.ಗೆಲುವು ಸಾಧಿಸಿರುವ ಎಲ್ಲ ನಿರ್ದೇಶಕರು ಸತತವಾಗಿ ಆಯಾ ಇಲಾಖೆ ನೌಕರರುಗಳ ಸಹಕಾರ ಸಮನ್ವಯ ಸಾಧಿಸಿ ವಿಜಯಿಶಾಲಿಯಾಗಿದ್ದಾರೆ. ನಾವೆಲ್ಲರೂ ಒಟ್ಟಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘವನ್ನು ಮತ್ತಷ್ಟು ಸದೃಡಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಚುನಾವಣೆಯಲ್ಲಿ ಭಾಗವಹಿಸಿ ಆಶೀರ್ವದಿಸಿದ ಎಲ್ಲ ನೌಕರ ಬಂಧುಗಳಿಗೆ ಅಭಿನಂದಿಸುವುದಾಗಿ ತಿಳಿಸಿದರು.
ಇದು ಸಂಘಟನೆಗೆ ಸಿಕ್ಕ ಗೆಲುವಾಗಿದೆ. ಸಂಘಟನೆಯ ಶಿಕ್ಷಕರೇ ನಮ್ಮ ನಾಯಕರು. ಶಿಕ್ಷಕರೇ ನಮಗೆ ಶಕ್ತಿ, ಶಿಕ್ಷಕರೇ ನಮಗೆ ಸ್ಪೂರ್ತಿ. ಸೇವೆಯೆ ನಮ್ಮ ಗುರಿ, ಸಂಘಟನೆಯೇ ನಮಗೆ ಶಕ್ತಿ ಎಂಬುದನ್ನು ನಮೆಲ್ಲ ಶಿಕ್ಷಕ ಬಂಧುಗಳು ಚುನಾವಣೆಯಲ್ಲಿ ನಿರೂಪಿಸಿದ್ದಾರೆ ಎಂದು ಹೇಳಿದರು.
ಎರಡು ಸ್ಥಾನಗಳಿಗೆ ಚುನಾವಣೆ:
ಸ್ಪರ್ಧಿಸಿದ್ದ ಶಿವಸ್ವಾಮಿ (169 ಮತಗಳು) ಮತ್ತು ಸತೀಶ್ (155 ಮತಗಳು) ಅವರು ಭರ್ಜರಿ ಗೆಲುವು ಸಾಧಿಸುವ ಮೂಲಕ ಅವರ ಬೆಂಬಲಿತ ಅಭ್ಯರ್ಥಿಗಳನ್ನು ಹೀನಾಯವಾಗಿ ಸೋಲಿಸುವ ಮೂಲಕ ಅನವಶ್ಯಕವಾಗಿ ತಮಗೆ ಸಂಬಂಧಿಸಿಲ್ಲದ ಸಂಘಟನೆಯ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ಸ್ಪಷ್ಟ ಸಂದೇಶವನ್ನು ಪ್ರಜ್ಙಾವಂತ ಶಿಕ್ಷಕರು ಚುನಾವಣೆ ಮೂಲಕ ಉತ್ತರ ನೀಡಿದ್ದಾರೆ ಎಂಬ ಗುಸುಗುಸು ಮಾತುಗಳು ಶಿಕ್ಷಕ ವಲಯದಲ್ಲಿ ಕೇಳಿ ಬಂದಿದೆ.
2024-29ನೇ ಅವಧಿಯ ಜಿಲ್ಲಾ ಕಾರ್ಯಕಾರಿ ಸಮಿತಿಗೆ ಸರ್ಕಾರಿ ಪ್ರೌಢಶಾಲೆಗಳ 2 ಸ್ಥಾನದಿಂದ ಶಿವಸ್ವಾಮಿ ಮತ್ತು ಸತೀಶ್, ಶಾಲಾ ಶಿಕ್ಷಣ ಇಲಾಖೆ ಆಡಳಿತ ಕಚೇರಿಯಿಂದ ಸಿದ್ದಲಿಂಗಸ್ವಾಮಿ, ಪ್ರಾಥಮಿಕ ಶಾಲೆಯಿಂದ ಶಂಕರಾನಂದ, ಶಿವರುದ್ರಯ್ಯ, ಕಾಂತರಾಜು ಎಂ, ಪ್ರಭು ಆಯ್ಕೆಯಾಗಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಡಳಿತ ಕಚೇರಿಯಿಂದ ಎನ್.ಬಿ.ಜಗದೀಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಸ್ಪತ್ರೆ/ಸಿಬ್ಬಂದಿ ಇಲಾಖೆಯ 3 ಸ್ಥಾನಗಳಿಂದ ಶಿವಕುಮಾರ್.ಬಿ, ಲಿಂಗರಾಜು ಸಿ, ರಾಮಸ್ವಾಮಿ.ಕೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಸ್ಪತ್ರೆ 2 ಸ್ಥಾನಗಳಿಂದ ಗಣೇಶ್.ಸಿ ಮತ್ತು ರವಿ.ಸಿ.ಕೆ, ತೋಟಗಾರಿಕೆ ಇಲಾಖೆಯಿಂದ ಸಿದ್ದರಾಜು, ಗ್ರಂಥಾಲಯ ಇಲಾಖೆಯಿಂದ ಅನಿತಾ.ಎಂ, ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಉಮೇಶ್.ಕೆ, ಭೂ ಮಾಪನ ಕಂದಾಯ ವ್ಯವಸ್ಥೆ ಇಲಾಖೆ ವತಿಯಿಂದ ಸುನಿಲ್‌ಕುಮಾರ್.ಎಸ್, ನ್ಯಾಯಾಂಗ ಇಲಾಖೆ 2 ಸ್ಥಾನಗಳಿಂದ ಚಂದ್ರಶೇಖರ್.ಎಸ್.ಆರ್ ಮತ್ತು ಮೋಹನ್ ಕೆ.ಆರ್, ಅವರುಗಳು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪಿ.ಸೋಮಲಿಂಗಯ್ಯ ತಿಳಿಸಿದರು.