ಕೇವಲ ಐದು ವರ್ಷಕ್ಕೆ ಪ್ರಜ್ವಲ್ ರೇವಣ್ಣ 5 ಬಾರಿ ಕಡೂರು ಕ್ಷೇತ್ರಕ್ಕೆ ಬಂದಿದ್ದೆ ಸಾಧನೆ: ವ್ಯಂಗ್ಯ
ಈ ಭಾರಿ ಲೋಕಸಭಾ ಚುನಾವಣೆ ಬಡವರ ಬದುಕು ಮತ್ತು ಯುವಕರ ಉದ್ಯೋಗ ಸೃಷ್ಟಿ ಎಂಬ ಆಧಾರದ ಮೇಲೆ ನಡೆಯಲಿದೆ ಎಂದು ಕಡೂರು ಕ್ಷೇತ್ರದ ಶಾಸಕ ಕೆ ಎಸ್ ಆನಂದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 2019ರಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಮೈತ್ರಿಯಿಂದ ಗೆಲುವು ಸಾಧಿಸಿದ ಪ್ರಜ್ವಲ್ ರೇವಣ್ಣ ಕನಿಷ್ಠ ಸೌಜನ್ಯಕ್ಕಾದರೂ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಕೃತಜ್ಞತೆ ಹೇಳಲಿಲ್ಲ ಅವರಿಂದ ಯಾವ ಉಪಯೋಗ ಕೂಡ ನಮ್ಮ ಕ್ಷೇತ್ರಕ್ಕೆ ಆಗಲಿಲ್ಲ. ಇದೀಗ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಐದು ವರ್ಷಗಳಲ್ಲಿ ಕೊಡುಗೆ ಕೂಡ ಏನೂ ಇಲ್ಲ. ಕೇವಲ ಐದು ವರ್ಷಕ್ಕೆ 5 ಬಾರಿ ಕಡೂರು ಕ್ಷೇತ್ರಕ್ಕೆ ಬಂದಿದ್ದೆ ಸಾಧನೆ ಆಗಿದೆ ಎಂದು ವ್ಯಂಗ್ಯವಾಡಿದರು. ನಂತರ ಅವರ ಜೆಡಿಎಸ್ ಪಕ್ಷದ ಶಾಸಕ, ಕಾರ್ಯಕರ್ತರ ಫೋನ್ ಕೂಡ ತೆಗೆದುಕೊಳ್ಳಲಿಲ್ಲ ಎಂದರೆ ಅವರ ಗೆಲುವಿಗೆ ಶ್ರಮಿಸಿದ ಕಾಂಗ್ರೆಸ್ ನವರ ಕಥೆ ಹೇಗಿರಬಹುದು. ಇದೀಗ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದು, ಸಂಸತ್ತಿನಲ್ಲಿ ಹಾಸನ ಕ್ಷೇತ್ರದ ಪರವಾಗಿ ದನಿ ಎತ್ತಲಿಲ್ಲ. ಜಲಜೀವ ಮಿಷನ್, ಬಹು ಗ್ರಾಮ ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಶೇ 50 ರ ಪಾಲುದಾರಿಕೆಯಲ್ಲಿ ನಡೆವ ಕಾಮಗಾರಿಯನ್ನು ತಮ್ಮದೆಂದು ಹೇಳಿಕೊಳ್ಳುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ ಎಂದರು.ಅಮಿತ್ ಶಾ ರವರೇ ಅಭ್ಯರ್ಥಿ ಬದಲಾಯಿಸಿಕೊಳ್ಳಿ ಎಂದು ಹೇಳಿದ್ದಾರೆ. ನಮ್ಮ ಶ್ರೇಯಸ್ ಪಟೇಲ್ ಒಳ್ಳೆಯ ಅಭ್ಯರ್ಥಿ ಯಾಗಿದ್ದು ಕೇವಲ 2 ಸಾವಿರ ವೋಟಿನಲ್ಲಿ ಶ್ರೇಯಸ್ ಪಟೇಲ್ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋತಿದ್ದು ಈ ಬಾರಿ ಅನುಕೂಲಕರ ವಾತಾವರಣವಿದ್ದು ಹೆಚ್ಚಿನ ಮತಗಳನ್ನು ಕಡೂರು ಕ್ಷೇತ್ರದಲ್ಲಿ ಕೊಡಿಸುತ್ತೇವೆ ಎಂದರು.
ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಚಿಕ್ಕಮಗಳೂರು ಲೋಕಸಭೆಯಲ್ಲಿದ್ದ ಕಡೂರು ತಾಲೂಕನ್ನು ಹಾಸನಕ್ಕೆ ಸೇರಿಸಿದ್ದು ದೇವೇಗೌಡರ ಸ್ವಾರ್ಥಕ್ಕಾಗಿ. ಬೇರೆ ಕೋಮುಗಳ ಯಾರೂ ನಿಲ್ಲದಂತೆ ಹಾಸನಕ್ಕೆ ಸೇರಿಸಲಾಗಿದೆ. ಪ್ರಜ್ವಲ್ ರವರ ಬಗ್ಗೆ ಹಾಸನ ಜನತೆಗೆ ತಿಳಿದಿದೆ. ಪ್ರಜ್ವಲ್ ಮತ್ತು ನಿಖಿಲ್ ರವರನ್ನು ರಾಜಕೀಯವಾಗಿ ಮೇಲೆ ತರಲು ದೇವೇಗೌಡರು ಕುಟುಂಬ ರಾಜಕಾರಣಕ್ಕಾಗಿ ಜೆಡಿಎಸ್ ನ್ನು ಬಲಿ ಕೊಡುತ್ತಿದ್ದಾರೆ ಎಂದು ಟೀಕಿಸಿದರು.
7ಕೆಕೆಡಿಯು1. ಶಾಸಕ ಕೆ. ಎಸ್. ಆನಂದ್