ಇನ್ನು ಹಿಂದುತ್ವದ ಮೇಲೆ, ಹಿಂದುತ್ವಕ್ಕಾಗೇ ಚುನಾವಣೆ: ಯತ್ನಾಳ

KannadaprabhaNewsNetwork |  
Published : Sep 18, 2025, 02:00 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಕರ್ನಾಟಕ ರಾಜ್ಯದಲ್ಲಿ ಇಡೀ ಸನಾತನ ಹಿಂದೂ ಒಂದಾಗಿ, ಧರ್ಮ ಜಾಗೃತಿಯಾಗುತ್ತಿದೆ. ರಾಜ್ಯದಲ್ಲಿ ಇನ್ನು ಜಾತಿ ಆಧಾರದಲ್ಲಿ ರಾಜಕಾರಣವಾಗಲೀ, ಸರ್ಕಾರವಾಗಲೀ ಆಗುವುದಿಲ್ಲ. ಹಿಂದುತ್ವದ ಮೇಲೆ, ಹಿಂದುತ್ವಕ್ಕಾಗಿಯೇ ನಡೆಯುವ ಚುನಾವಣೆಯಾಗಲಿವೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

- ಸನಾತನ ಹಿಂದೂಗಳು ಒಂದಾಗಿ ಧರ್ಮ ಜಾಗೃತಿಯಾಗುತ್ತಿದೆ: ವಿಜಯಪುರ ಶಾಸಕ । ಮರಡಿಯಲ್ಲಿ ಗಣೇಶೋತ್ಸವ, ಭೇಟಿ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕರ್ನಾಟಕ ರಾಜ್ಯದಲ್ಲಿ ಇಡೀ ಸನಾತನ ಹಿಂದೂ ಒಂದಾಗಿ, ಧರ್ಮ ಜಾಗೃತಿಯಾಗುತ್ತಿದೆ. ರಾಜ್ಯದಲ್ಲಿ ಇನ್ನು ಜಾತಿ ಆಧಾರದಲ್ಲಿ ರಾಜಕಾರಣವಾಗಲೀ, ಸರ್ಕಾರವಾಗಲೀ ಆಗುವುದಿಲ್ಲ. ಹಿಂದುತ್ವದ ಮೇಲೆ, ಹಿಂದುತ್ವಕ್ಕಾಗಿಯೇ ನಡೆಯುವ ಚುನಾವಣೆಯಾಗಲಿವೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಜಿಲ್ಲೆಯ ಚನ್ನಗಿರಿ ತಾಲೂಕಿನ ಮರಡಿ ಗ್ರಾಮದಲ್ಲಿ ಶ್ರೀ ಗಣೇಶೋತ್ಸವ ಸಮಾರಂಭಕ್ಕೆ ಬುಧವಾರ ‍ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದ ಮುಸ್ಲಿಮರ ತುಷ್ಟೀಕರಣ, ಮುಸ್ಲಿಮರಿಗೆ ಅತಿಯಾದ ಯೋಜನೆ, ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ, ವಿದೇಶಕ್ಕೆ ಹೋಗಲು ಮುಸ್ಲಿಂರಿಗೆ ಹಣ ನೀಡುವುದು, ವಕ್ಫ್ ಆಸ್ತಿ ರಕ್ಷಣೆಗೆ ಅನುದಾನ, ಸಾವಿರಾರು ಉರ್ದು ಶಾಲೆಗೆ ಅನುದಾನ ಹೀಗೆ ಕಾಂಗ್ರೆಸ್‌ನ ತುಷ್ಟೀಕರಣ ನೀತಿಯಿಂದ ಹಿಂದೂಗಳು ರೋಸಿದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯಿಂದ ಸಮಸ್ತ ಹಿಂದೂ ಸಮಾಜ ಒಂದಾಗುತ್ತಿದೆ. ಇದು ವ್ಯಕ್ತಿ ಆಧಾರಿತ ಪ್ರತಿಕ್ರಿಯೆ ಅಲ್ಲ. ಸಮಸ್ತ ಹಿಂದೂಗಳ ಜಾಗೃತ ಆಗಿರುವುದರ ಸಂಕೇತ ಇದಾಗಿದೆ. ಮದ್ದೂರಿನಲ್ಲಿ 20 ಸಾವಿರ ಜನ ಸೇರಿದ್ದು, ಮಂಡ್ಯದಿಂದಲೇ ಸನಾನಂದ ಹಿಂದೂ ಧರ್ಮ ಒಂದಾಗಿದೆ. ಪ್ರತಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹಿಂದೂಗಳ ಆಕ್ರೋಶ ವ್ಯಕ್ತವಾಗುತ್ತಿದ್ದು, ಮಂಡ್ಯ ಜಿಲ್ಲೆಯಿಂದಲೇ ಹಿಂದೂಗಳಲ್ಲಿ ಬದಲಾವಣೆ ಶುರುವಾಗಿದೆ ಎಂದು ಅವರು ತಿಳಿಸಿದರು.

ನಾವು ಹಿಂದೂ ಮತಗಳ ವಿಭಜನೆಗೆ ಅವಕಾಶ ನೀಡುವುದಿಲ್ಲ. ವಿಭಜಿಸುವ ಕೆಟ್ಟ ಕೆಲಸವನ್ನೂ ಮಾಡುವುದಿಲ್ಲ. ಹಿಂದೂಗಳೆಲ್ಲಾ ಒಂದಾಗಿ ನಿಮ್ಮ ಸರ್ಕಾರ ಕಿತ್ತೊಗೆ ಯುವ ಕೆಲಸ ಮಾಡುತ್ತೇವೆಂಬುದಾಗಿ ಸಿದ್ದರಾಮಯ್ಯ ಅವರಿಗೆ ಹೇಳಿದ್ದೇನೆ. ಹಿಂದುಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರ ಮೇಲೆ ಕೇಸ್ ಹಾಕುವುದೇನೂ ಹೊಸದಲ್ಲ. ಹೀಗೆ ಕೇಸ್ ಹಾಕಿಸಿಕೊಂಡವರ ಬೆನ್ನಿಗೆ ನಮ್ಮ ನಾಯಕರು ನಿಂತಿಲ್ಲವೆಂಬ ಬೇಸರ ತುಂಬಾ ಹಿಂದಿನಿಂದಲೂ ಇದೆ. ನನ್ನ ಮೇಲೂ 70 ಕೇಸ್ ಮಾಡಿದ್ದಾರೆ. ಯಾವ ಯಾವ ಸುದ್ದಿ ವಾಹಿನಿಗಳಲ್ಲಿ ನನ್ನ ಬಗ್ಗೆ ಅಸಹ್ಯಕರವಾಗಿ ತೋರಿಸಿದ್ದಾರೋ ಆ ಎಲ್ಲಾ ಸುದ್ದಿ ವಾಹಿನಿಗಳ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುವೆ. ನನ್ನ ವಿರುದ್ಧ ಸುಳ್ಳು ದೂರು ನೀಡಿದವರ ವಿರುದ್ಧವೂ ಕೇಸ್ ಮಾಡುತ್ತೇನೆ. ಯಾವ ಠಾಣೆಯವರು ಕೇಸ್ ಹಿಡಿದಿದ್ದಾರೋ ಅಲ್ಲಿನ ಅಧಿಕಾರಿ, ಸಿಬ್ಬಂದಿಗೂ ನ್ಯಾಯಾಲಯದಲ್ಲಿ ಪ್ರಶ್ನಿಸುವೆ ಎಂದು ಯತ್ನಾಳ ಎಚ್ಚರಿಸಿದರು.

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಇತರರು ಇದ್ದರು.

- - -

(ಕೋಟ್‌)

ದಾವಣಗೆರೆ ಮಟ್ಟಿಕಲ್ಲು ಪ್ರದೇಶದಲ್ಲಿ ಫ್ಲೆಕ್ಸ್ ವಿಚಾರದಲ್ಲಿ ಹೇಳಿಕೆ ನೀಡಿರುವ ಜಿಲ್ಲಾ ಸಚಿವ ಮಲ್ಲಿಕಾರ್ಜುನರಿಗೆ ನಾಚಿಕೆ ಆಗಬೇಕು. ಹಿಂದೂ ಸಮಾಜ ವಿರುದ್ಧ ಅವರ ಹೇಳಿಕೆ ಗಮನಿಸಿದ್ದೇನೆ. ಮಸೀದಿ ಮುಂದೆಯೇ ಫ್ಲೆಕ್ಸ್ ಹಾಕಬೇಕೆಂದಿದ್ದೆ. ಬರೀ ಮುಸ್ಲಿಮರಷ್ಟೇ ಶಾಮನೂರುಗೆ ಓಟು ಹಾಕಿದ್ದಾರಾ? 2028ರ ಚುನಾವಣೆಯಲ್ಲಿ ಸಾಬರ ಹಟ್ಟಿ ಮಾತ್ರ ಓಟುಗಳನ್ನು ಶಾಮನೂರು ಕಂಪನಿಗೆ ಹಾಕುತ್ತದೆ. ಸಮಸ್ತ ಹಿಂದುಗಳು ತಮ್ಮ ಮತವನ್ನು ಬಿಜೆಪಿಗೆ ಹಾಕುತ್ತಾರೆ. - ಬಸವನಗೌಡ ಪಾಟೀಲ ಯತ್ನಾಳ, ವಿಜಯಪುರ ಶಾಸಕ. - - -

(ಬಾಕ್ಸ್‌)

* ಕೇಂದ್ರಕ್ಕೆ ನಾನಾಗಲೀ, ಈಶ್ವರಪ್ಪ ಆಗಲಿ ಹೋಗಲ್ಲ: ಯತ್ನಾಳ್ - ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಲೇ ಜೆಸಿಬಿಗಳ ಮೆರವಣಿಗೆ

ದಾವಣಗೆರೆ: ನಾನಾಗಲೀ, ಕೆ.ಎಸ್. ಈಶ್ವರಪ್ಪನವರಾಗಲೀ ಕೇಂದ್ರಕ್ಕೆ ಹೋಗುವುದಿಲ್ಲ. ನಮಗೆ ಇಂಗ್ಲಿಷ್ ಪಂಗ್ಲಿಷ್ ಬರೋಲ್ಲ. ಕೇಂದ್ರಕ್ಕೆ ಹೋಗಲು ಯಾರಿಗೆ ಅರ್ಹತೆ ಇದೆಯೋ, ಇಂಗ್ಲಿಷ್ ಪಂಗ್ಲಿಷ್ ಬರೋರೆಲ್ಲಾ ಅಲ್ಲಿಗೆ ಹೋಗುತ್ತಾರೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಕೇಂದ್ರ ರಾಜಕಾರಣದತ್ತ ತಮಗೆ ಒಲವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕನ್ನಡ ಮಾತೆ ಶ್ರೀ ಭುವನೇಶ್ವರಿ ಸೇವೆ ಮಾಡಿಕೊಂಡು, ಇಲ್ಲಿಯೇ ಕರ್ನಾಟಕದಲ್ಲೇ ಇರುತ್ತೇವೆ. ಬಿಜೆಪಿಯನ್ನು ಬಿಟ್ಟು ನಾನು ಯಾವ ಪಕ್ಷಕ್ಕೆ ಹೋಗಬೇಕು? ನಾನು ವಿಧಾನಸೌಧದಲ್ಲೇ ಸ್ಪಷ್ಟವಾಗಿ ಹೇಳಿದ್ದೇನೆ. ನಾನು ಸತ್ತರೂ ಕಾಂಗ್ರೆಸ್‌, ಜೆಡಿಎಸ್‌ಗೆ ಹೋಗುವುದಿಲ್ಲ. ಯಾವುದೇ ಪರಿಸ್ಥಿತಿಯಲ್ಲೂ ನಾನಾಗಲೀ, ಕೆ.ಎಸ್. ಈಶ್ವರಪ್ಪನವರಾಗಲೀ ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಛರಿಸಿದರು.

ನಾವು ಈಗಾಗಲೇ ಕುಳಿತು, ನಿರ್ಣಯಿಸಿದ್ದೇವೆ. ಅದರಂತೆ ಮಾಡುತ್ತೇವೆ. ಶ್ರೀ ಗಣೇಶನ ಮೂರ್ತಿ, ಮೆರವಣಿಗೆ ಮೇಲೆ ಮುಸ್ಲಿಮರು ಕಲ್ಲೊಗೆಯುತ್ತಾರೆ. ಅದೇ ಮುಸ್ಲಿಂ ಮಕ್ಕಳು ಉಗಿಯುತ್ತಾರೋ, ಉದ್ದೇಶ ಪೂರ್ವಕವಾಗಿ ಮಸೀದಿ ಮುಂದೆ ಕುಣಿಯದಂತೆ ಗದ್ದಲ ಮಾಡುತ್ತಾರೆ. ಶೇ.90ರಷ್ಟು ಮಸೀದಿಗಳು ಅಕ್ರಮವಾಗಿವೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಶಾಂತಿ, ಸುವ್ಯವಸ್ಥೆ ಕಾಪಾಡಲು ಯಾವ ರೀತಿ ಜೆಸಿಬಿ ಬಳಸಿದ್ದಾರೋ, ಅದೇ ರೀತಿ ಕರ್ನಾಟಕದಲ್ಲಿ ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲೆಲ್ಲಾ ನಮ್ಮ ಸರ್ಕಾರ ಬಂದ ತಕ್ಷಣ ಜೆಸಿಬಿ ಬಳಸುತ್ತೇವೆ ಎಂದು ಯತ್ನಾಳ ಹೇಳಿದರು.

- - -

(ಟಾಪ್‌ ಕೋಟ್‌) ಇಡೀ ದೇಶಾದ್ಯಂತ ಕಾಂಗ್ರೆಸ್ಸಿನವರು ನಿರುದ್ಯೋಗಿಗಳಾಗಿದ್ದು. ಅದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದು ರಾಷ್ಟ್ರೀಯ ನಿರುದ್ಯೋಗಿಗಳ ದಿನವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ಸಿನ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿಗೆ ಏನೂ ಕೆಲಸವಿಲ್ಲ. ಕಾಂಗ್ರೆಸ್ಸಿನ ನಾಯಕರಿಗೆ ಅಂತಹ ಅವಕಾಶವನ್ನು ನಮ್ಮ ನರೇಂದ್ರ ಮೋದಿಯವರು ಮಾಡಿಕೊಟ್ಟಿದ್ದಾರೆ.

- ಬಸವನಗೌಡ ಪಾಟೀಲ್ ಯತ್ನಾಳ, ವಿಜಯಪುರ ಶಾಸಕ.

- - -

(ಸಾಂದರ್ಭಿಕ ಚಿತ್ರ)

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ