ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯ ರೈತ ಸಂಘಟನೆಗಳ ಒಕ್ಕೂಟ.ರಾಜ್ಯ ಕಬ್ಬು ಬೆಳೆಗಾರ ಸಂಘ ಆಯೋಜಿಸಿದ ಬರಗಾಲದಲ್ಲಿ ಚುನಾವಣೆ- ರೈತರ ದಿಕ್ಸೂಚಿ ಚಿಂತನ ಮಂಥನ ಅಧ್ಯಕ್ಷತೆ ವಹಿಸಿದ್ದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಪ್ರಾಕೃತಿಕ ಬದಲಾವಣೆಯಿಂದ ಕೃಷಿ ಕ್ಷೇತ್ರ ದುರ್ಬಲವಾಗುತ್ತಿದೆ. ಬರಗಾಲದ ನೀರಿನ ಸಮಸ್ಯೆಯಿಂದ ರೈತರ ಬೆಳೆಗಳು ಒಣಗುತ್ತಿವೆ ಕೊಳವೆ ಬಾವಿಗಳು ಹಿಂಗುತ್ತಿವೆ. ರೈತರು ಈಗಲಾದರೂ ಹಳ್ಳಿಗಳಲ್ಲಿ ಗುಡಿಗೋಪುರ ಕಟ್ಟುವ ಚಿಂತನೆ ಕಡಿಮೆ ಮಾಡಿ ಕೆರೆ ಕಟ್ಟೆ ಹೂಳೆತುವ ಮೂಲಕ ಪುನರ್ಜೀವನ ಹಾಗೂ ಹೊಸದಾಗಿ ನಿರ್ಮಿಸುವ ಕೆಲಸದಲ್ಲಿ ರೈತರು ಶ್ರದ್ದೆ ವಹಿಸಿದ್ದರೆ ಮುಂದಿನ ವರ್ಷಗಳಲ್ಲಿ ಕೊಳವೆ ಬಾವಿಗಳು ಕೃಷಿ ಕ್ಷೇತ್ರ ಸಮೃದ್ಧಿಯಾಗಲು ಸಹಕಾರಿಯಾಗುತ್ತದೆ. ಇಂದಿನ ರಾಜಕಾರಣಿಗಳಿಗೆ ಇದೆಲ್ಲ ಕಾಣುವುದಿಲ ಅವರಿಗೆ ಬೇಕಾಗಿಲ್ಲ ಎಂದರು.
ಕೇಂದ್ರ .ರಾಜ್ಯ ಸರ್ಕಾರಗಳು. ರೈತರ ಪಾಲಿಗೆ ಮರಳುಗಾಡಿನ ಓಯಸಿಸ್ ಇದ್ದಂತೆ ಎಂಬುದನ್ನು ಅರಿತುಕೊಳ್ಳಬೇಕು. ಬರಗಾಲದ ಬವಣೆಯಿಂದ ರೈತರಿಗೆ ಕುಡಿಯುವ ನೀರು ದನಕರುಗಳಿಗೆ ಮೇವು ಸಿಗುತ್ತಿಲ್ಲ ಕೊಳವೆ ಬಾವಿಗಳಲ್ಲಿ ನೀರು ಹಿಂಗಿ ಹೋಗಿ ಕಬ್ಬಿನ ಬೆಳೆ ತೆಂಗಿನ ಮರ ಒಣಗುತ್ತಿದೆ ಇಂಥಹ ರೈತರನ್ನ ಸಂಕಷ್ಟದಿಂದ ಪಾರು ಮಾಡಬೇಕು. ಅಧಿಕಾರಿಗಳು ಚುನಾವಣಾ ಗುಂಗಿನಲ್ಲಿ ತಲ್ಲಿನರಾಗಿದ್ದಾರೆ. ರೈತರ ಸಂಕಷ್ಟ ಅರಿತುಕೊಳ್ಳಲಿ ಎಂದು ಬರಗಾಲದ ಚುನಾವಣೆ ರೈತರ ದಿಕ್ಸೂಚಿ ಕಾರ್ಯಕ್ರಮ ಹಮಿಕೊಂಡಿದ್ದೇವೆ ಎಂದರುಚುನಾವಣಾ ಪ್ರಣಾಳಿಕೆಯಲ್ಲಿ ರಾಜಕೀಯ ಪಕ್ಷಗಳು ಬರನಿವಾರಣೆ. ಕೃಷಿ ಕ್ಷೇತ್ರದ ರಕ್ಷಣೆ. ಕೆರೆಕಟ್ಟೆ ನದಿ ರಕ್ಷಣೆ. ಅರಣ್ಯ ಬೆಳೆಸುವ ಸಂರಕ್ಷಿಸುವ. ಯೋಜನೆಗಳ ಪ್ರಣಾಳಿಕೆಗಳಿಗೆ ಒತ್ತು ನೀಡಲಿ. ಚುನಾವಣಾ ಆಯೋಗ ನೋಟ ಮತದಾನಕ್ಕೆ ಗೌರವ ತರುವಂತಹ ಮಾನದಂಡ ನಿರ್ಮಿಸಲಿ ಎಂದು ಅವರು ಹೇಳಿದರು.
ಭೂ ಸುಧಾರಣೆ ತಿದ್ದುಪಡಿ ಕಾಯ್ದೆ. ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದು ವರ್ಷವಾದರೂ ಜಾರಿಯಾಗಲಿಲ್ಲ. ಈಗಾದರೆ ರೈತರ ಗತಿ ಏನು ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದರು.
ಅರಸಿನ ಬೆಳೆಗಾರರ ಸಂಘದ ನಾಗಾರ್ಜುನ ಮಾತನಾಡಿ ರೈತರು ಬೆಳೆಯುವ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚವನ್ನೇ ಕಡಿಮೆ ತೋರಿಸಿ ರೈತರನ್ನ ಸರ್ಕಾರ ವಂಚಿಸುತ್ತಿದೆ ರೈತರು ಜಾಗೃತಿಯಾಗದಿದ್ದರೆ ನಮ್ಮ ಸಮಾಧಿಯನ್ನು ನಾವೇ ಕಟ್ಟಿಕೊಳ್ಳಬೇಕಾಗುತ್ತದೆ ಎಂದರು
ಕಿರಗಸೂರು ಶಂಕರ್ ಸ್ವಾಗತಿಸಿದರು. ಬರಡನಪುರ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು