ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಂದುವರಿದ ರಾಷ್ಟ್ರಗಳಿಗೆ ಎಫ್77-ಸ್ಪೋರ್ಟ್ಸ್ ಸ್ತರದ ಇ-ಮೋಟಾರ್ ಸೈಕಲ್ಲುಗಳ ರಫ್ತು ಭಾರತದಿಂದ ಇದೇ ಮೊಟ್ಟಮೊದಲ ವಿಕ್ರಮವಾಗಿದೆ. ಅಲ್ಟ್ರಾವಯೊಲೆಟ್ ತಯಾರಿತ ಮೋಟಾರ್ ಸೈಕಲ್ಲುಗಳನ್ನು ಯೂರೋಪ್ ಖಂಡದ ಜರ್ಮನಿ, ಇಟಲಿ, ಟರ್ಕಿ ಮತ್ತು ಸ್ಪೇನ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಈ ವಾಹನಗಳನ್ನು ಜಿಗಣಿಯಲ್ಲಿರುವ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗಿದೆ.
ಅಲ್ಟ್ರಾವಯೊಲೆಟ್ ಕಂಪನಿಯ ಸಹ ಸಂಸ್ಥಾಪಕ ಮತ್ತು ನಿರ್ದೇಶಕ ನೀರಜ್ ರಾಜಮೋಹನ್, ಸಹಾಯಕ ಉಪಾಧ್ಯಕ್ಷ ಧೀರಜ್ ಶೆಟ್ಟಿ ವೈಶಿಷ್ಟ್ಯಗಳನ್ನು ವಿವರಿಸಿದ್ದಾರೆ. ಈ ಮೋಟಾರ್ ಸೈಕಲ್ಲುಗಳ ಬೆಲೆ ₹2.99 ಲಕ್ಷಗಳಾಗಿದ್ದು, ಈಗಾಗಲೇ ಸ್ಥಳೀಯವಾಗಿಯೂ ಲಭ್ಯವಿದೆ. ಒಂದು ಸಲ ಚಾರ್ಜ್ ಮಾಡಿದರೆ 323 ಕಿ.ಮೀ. ದೂರ ಕ್ರಮಿಸಬಹುದಾಗಿದೆ. ಜತೆಗೆ ಯುಎನ್ 38.3 ದರ್ಜೆಯ ಉತ್ಕೃಷ್ಟ ಬ್ಯಾಟರಿ ಇದರಲ್ಲಿ ಇರಲಿದ್ದು, ಇದು ಎ1 ಕ್ಯಾಟಗರಿಗೆ ಸೇರಿದೆ. ಈ ಮೋಟಾರ್ ಸೈಕಲ್ಲುಗಳ ರಫ್ತು ವಹಿವಾಟಿನಿಂದ ರಾಜ್ಯ ಮತ್ತು ದೇಶದ ಆರ್ಥಿಕತೆಗೆ ಬಲ ಬರಲಿದೆ.