ರಸ್ತೆಗೆ ಬಾಗಿದ ವಿದ್ಯುತ್ ಕಂಬಗಳಿಂದ ಜೀವಕ್ಕೆ ಅಪಾಯ

KannadaprabhaNewsNetwork |  
Published : Sep 27, 2026, 02:30 AM IST
(26ಎನ್.ಆರ್.ಡಿ4 ನರಗುಂದದಿಂದ ಅರಿಷಿಣಗೋಡಿಗೆ ಹೋಗುವ ರಸ್ತೆಯಲ್ಲಿ ವಿದ್ಯುತ್ ಕಂಬಗಳು ರಸ್ತೆಗೆ ಬಾಗಿರವದು.)                | Kannada Prabha

ಸಾರಾಂಶ

ಈ ರೀತಿ ಅಪಾಯದಲ್ಲಿರುವ ವಿದ್ಯುತ್ ಕಂಬಗಳನ್ನು ದುರಸ್ತಿಗೊಳಿಸಲು ವಿಶೇಷ ಕಾಳಜಿ ವಹಿಸದಿರುವುದು ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯತನ ಎತ್ತಿ ತೋರಿಸುತ್ತದೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ತಾಲೂಕಿನ ಮುಖ್ಯ ರಸ್ತೆಯಲ್ಲಿಯೇ ವಿದ್ಯುತ್‌ ಕಂಬಗಳು ಅಪಾಯದ ಅಂಚಿನಲ್ಲಿವೆ. ಪೂರ್ತಿಯಾಗಿ ಬಾಗಿರುವ ವಿದ್ಯುತ್‌ ಕಂಬಗಳನ್ನು ವಿದ್ಯುತ್‌ ತಂತಿಗಳ ಎಳೆದು ಬೀಳದಂತೆ ನಿಲ್ಲಿಸಿವೆ. ಅಕಸ್ಮಾತ್ ತಂತಿ ಹರಿದರೆ ರಸ್ತೆಯಲ್ಲಿ ಹೋಗುವ ವಾಹನಗಳ ಮತ್ತು ರೈತಾಪಿ ವರ್ಗದ ಜನರ ಜೀವಕ್ಕೆ ಅಪಾಯ ಕಟ್ಟಿಟ್ಡ ಬುತ್ತಿ.

ನರಗುಂದ ಪಟ್ಟಣದಿಂದ ತಾಲೂಕಿನ ಅರಿಷಿಣಗೋಡಿ, ಹಿರೇಕೊಪ್ಪ, ಕುರವಿನ ಗೋವಿನಕೊಪ್ಪ ಗ್ರಾಮಗಳಗೆ ತೆರಳುವ ಮಾರ್ಗ ಮತ್ತು ಇದೇ ಮಾರ್ಗವಾಗಿ ಸುರೇಬಾನ್‌ಗೆ ತೆರಳುವ ಮಾರ್ಗದ ಮಧ್ಯ ನೀರಾವರಿ ಮುಖ್ಯ ಕಾಲುವೆಯಾದ 12ನೇ ಬ್ಲಾಕ್‌ ಹತ್ತಿರ ಮುಖ್ಯ ರಸ್ತೆಯಲ್ಲೇ ವಿದ್ಯುತ್‌ ಕಂಬಗಳು ಪೂರ್ತಿ ಬಾಗಿಕೊಂಡು ಬೀಳುವ ಅಂಚಿನಲ್ಲಿದ್ದರೂ ಹೆಸ್ಕಾಂ ಅಧಿಕಾರಿಗಳು ಗಮನ ಹರಿಸಿಲ್ಲ, ದುರಸ್ತಿ ಮಾಡಿಲ್ಲ.

ಇನ್ನೂ ಹಲವಾರು ಕಡೆ ಇದೇ ಸ್ಥಿತಿ ಇದೆ. ತಾಲೂಕಿನ ಹುಣಿಸಿಕಟ್ಟಿ, ಕುರ್ಲಗೇರಿ, ಬನಹಟ್ಟಿ, ಸುರಕೋಡ, ಸೇರಿದಂತೆ ವಿವಿಧ ಗ್ರಾಮಗಳಗೆ ಹೋಗುವ ರಸ್ತೆ ಪಕ್ಕ ರೈತರ ಜಮೀನಗಳಲ್ಲಿ ವಿದ್ಯುತ್ ಪೂರೈಕೆ ಮಾಡುವ ಕಂಬಗಳು ರಸ್ತೆ ಮತ್ತು ಜಮೀನಗಳಲ್ಲಿ ಭಾಗಿದ್ದರಿಂದ ರೈತರು ಮತ್ತು ಗ್ರಾಮಗಳಗೆ ಓಡಾಟ ಮಾಡುವ ವಾಹನ ಸವಾರರು ಜೀವ ಭಯದಲ್ಲಿ ಹಿಡಿದುಕೊಂಡೇ ಸಂಚರಿಸಬೇಕಾಗಿದೆ.

ಈ ರೀತಿ ಅಪಾಯದಲ್ಲಿರುವ ವಿದ್ಯುತ್ ಕಂಬಗಳನ್ನು ದುರಸ್ತಿಗೊಳಿಸಲು ವಿಶೇಷ ಕಾಳಜಿ ವಹಿಸದಿರುವುದು ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯತನ ಎತ್ತಿ ತೋರಿಸುತ್ತದೆ. ಈ ಮಾರ್ಗದಲ್ಲಿ ದಿನನಿತ್ಯ ಹಗಲು ರಾತ್ರಿ ನೂರಾರು ವಾಹನಗಳು ಸಂಚರಿಸುತ್ತವೆ. ಅವಘಡ ಸಂಭವಿಸುವ ಮೊದಲೇ ವಿದ್ಯುತ್ ಕಂಬಗಳು ಬೇಗ ದುರಸ್ತಿಗೊಳ್ಖಲಿ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ತಾಲೂಕಿನಾಧ್ಯಂತ ಅಪಾಯದ ವಿದ್ಯುತ್ ಕಂಬಗಳು ಸಾಕಷ್ಟಿವೆ. ಹೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ, ಇದೇ ಮಾರ್ಗದಲ್ಲಿ ಓಡಾಡಿದರೂ ದುರಸ್ತಿ ಮಾಡುವ ಗೋಜಿಗೆ ಹೋಗುವುದಿಲ್ಲ. ಅಪಾಯ ಸಂಭವಿಸುವ ಮೊದಲೇ ವಿದ್ಯುತ್ ಕಂಬ ದುರಸ್ತಿಗೊಳಿಸಬೇಕೆಂದು ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಬಸವರಡ್ಡಿ ರಾಯರಡ್ಡಿ ಒತ್ತಾಯಿಸಿದ್ದಾರೆ.

ಇಂತಹ ವಿದ್ಯುತ್‌ ಕಂಬಗಳನ್ನು ಸರಿಪಡಸದಿದ್ದರೆ ಹೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿನೆ ಮಾಡುತ್ತೆಂದು ಜಿಲ್ಲಾ ಜಯ ಕರ್ನಾಟಕ ಸಂಘಟನೆ ಮುಖಂಡ ಬಸವರಾಜ ತಾವರೆ ಎಚ್ಚರಿಕೆ ನೀಡಿದ್ದಾರೆ.

ತಾಲೂಕಿನ ಗ್ರಾಮಗಳಗೆ ವಿದ್ಯುತ ಪೂರೈಕೆ ಮಾಡುವ ಎಲ್ಲಾ ಕಂಬಗಳನ್ನು ಪರಶೀಲನೆ ಮಾಡಿ ಅವುಗಳನ್ನು ಆದಷ್ಟು ಬೇಗ ರಿಪೇರಿ ಮಾಡಿ ರೈತರಿಗೆ ಮತ್ತು ವಾಹನ ಸವಾರರಗೆ ತೊಂದರೆ ಆಗದಾಗೆ ಮಾಡುತ್ತೇವೆಂದು ಹೆಸ್ಕಾಂ ಅಧಿಕಾರಿ ಎಚ್.ಎಂ. ಖುದವಂದ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯ
ಜಾನುವಾರುಗಳಿಗೆ ಮೇವಿನ ಕೊರತೆ ಭೀತಿ!