ಕನ್ನಡ ಪ್ರಭವಾರ್ತೆ ಮುಧೋಳ
ಗುರುವಾರ ಬೆಳಗ್ಗೆ ಸ್ಥಳೀಯ ಪ್ರದೇಶಕ್ಕೆ ವಿದ್ಯುತ್ ಸರಬರಾಜು ಮಾಡುವ ಟ್ರಾನ್ಸ್‌ಫಾರ್ಮರ್‌ನಲ್ಲಿ (ಟಿ.ಸಿ) ಏಕಾಏಕಿ ವಿದ್ಯುತ್ ಏರಿಳಿತವಾಗಿ ಹೆಚ್ಚಿನ ವೋಲ್ಟೇಜ್ ಪ್ರವಹಿಸಿದ್ದರಿಂದ ಬಹುತೇಕ ಅಂಗಡಿಗಳಲ್ಲಿನ ಸಿಸಿ ಕ್ಯಾಮೆರಾ, ಲೈಟ್‌ಗಳು, ರೆಫ್ರಿಜರೇಟರ್ ಗಳು ಮತ್ತು ಇತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳು ಸಂಪೂರ್ಣ ಸುಟ್ಟು ಹೋಗಿವೆ.
ಘಟನೆಗೆ ಹೆಸ್ಕಾಂನ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿನ ವೈಫಲ್ಯ ಅಥವಾ ನಿರ್ವಹಣೆ ದೋಷ ಕಾರಣ ಎಂದು ಅಂಗಡಿಕಾರರು ಆರೋಪಿಸಿದ್ದು, ತನ್ನ ವೈಫಲ್ಯದಿಂದ ಉಂಟಾದ ಹಾನಿಗೆ ಹೆಸ್ಕಾಂ ಹೊಣೆ ಹೊರಬೇಕು. ಹಾನಿಯಾದ ಉಪಕರಣಗಳಿಗೆ ಕೂಡಲೇ ನಷ್ಟ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರಾಘವೇಂದ್ರ ಜೋರಾಪುರ, ಗಣೇಶ ಹಡಪದ, ಮೋಹನಸಿಂಗ ರಾಠೋಡ್, ರಾಹುಲ್ ತೇಲಿ ಇತರರು ಆಗ್ರಹಿಸಿದ್ದಾರೆ.