ವಿದ್ಯುತ್ ಟ್ರಾನ್ಸಫಾರ್ಮರ್ ಶಾರ್ಟ್: ಇಲೇಕ್ಟ್ರಿಕ್‌ ವಸ್ತುಗಳಿಗೆ ಹಾನಿ

KannadaprabhaNewsNetwork |  
Published : Jul 01, 2026, 03:45 AM IST
ಹಳಿಂಗಳಿ : ವಿದ್ಯುತ್ ಟ್ರಾನ್ಸಪಾರ್ಮರ್ ಶಾಕ್, ಮನೆಮನೆಗಳಲ್ಲಿ ಇಲೇಕ್ಟಿçಕಲ್ಸ್ ಹಾನಿ. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿತಾಲೂಕಿನ ಹಳಿಂಗಳಿ ಗ್ರಾಮದ ಅಂಬೇಡ್ಕರ್ ಪ್ರದೇಶದ ವಿದ್ಯುತ್ ಟ್ರಾನ್ಸಫಾರ್ಮರ್ ಶಾರ್ಟ್ ಆದ ಘಟನೆ ಇತ್ತೀಚಿಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತಾಲೂಕಿನ ಹಳಿಂಗಳಿ ಗ್ರಾಮದ ಅಂಬೇಡ್ಕರ್ ಪ್ರದೇಶದ ವಿದ್ಯುತ್ ಟ್ರಾನ್ಸಫಾರ್ಮರ್ ಶಾರ್ಟ್ ಆದ ಘಟನೆ ಇತ್ತೀಚಿಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ವಿದ್ಯುತ್ ಶಾಕ್ ನಿಂದಾಗಿ ಈ ಭಾಗದ ಹತ್ತಾರು ಮನೆಗಳಲ್ಲಿರುವ ಫ್ಯಾನ್, ಟಿವಿ ಸೇರಿ ಹಲವು ಇಲೇಕ್ಟ್ರಿಕ್ ಸಾಮಾನುಗಳು ಹಾನಿಗೊಳಗಾಗಿವೆ. ಪ್ರ‍್ರಲ್ಹಾದ ದೊಡಮನಿ ಅವರ ಮನೆಯಲ್ಲಿರುವ ಫ್ಯಾನ್, ಟಿವಿ, ಪ್ರೀಜ್, ಮನೆಯ ಅಡುಗೆ ಸಾಮಾನುಗಳು, ಬಟ್ಟೆ, ಬರೆಗಳೆಲ್ಲವು ಹಾನಿಗೊಳಗಾಗಿದ್ದು, ಕುಟುಂಬ ಕಂಗಾಲಾಗಿದೆ. ಇದೇ ಏರಿಯಾದಲ್ಲಿರುವ ಮನೆಯೊಂದರಲ್ಲಿ ಸ್ವಿಚ್ ಬಂದ ಮಾಡಲು ಹೋದ ಮಹಿಳೆಗೆ ಶಾಕ್ ಹೊಡೆದ ಘಟನೆ ಸಹ ನಡೆದಿದೆ. ವಿದ್ಯುತ್ ಶಾಕ್ ನಿಂದಾಗಿ ಬಾರಿ ಪ್ರಮಾಣದ ಹಾನಿಯಾಗಿದ್ದರು ಸಹ ಸಂಬಂಧಿತ ಇಲಾಖೆಯು ಹಾನಿಯ ಕುರಿತಾಗಿ ಪಟ್ಟಿ ಮಾಡುವ ಕಾರ್ಯ ಮಾತ್ರ ಮಾಡಿದ್ದು, ಹಾಳಾದ ಸಾಮಗ್ರಿಗಳ ಬಗೆಗೆ ಯಾವುದೇ ಖಚಿತ ಭರವಸೆ ನೀಡಿಲ್ಲ. ಹಾಗಾಗಿ ನಮಗೆ ಹಾನಿಗೊಳಗಾದ ವಸ್ತುಗಳನ್ನು ಹೆಸ್ಕಾಂ, ಜಿಲ್ಲಾಡಳಿತ ಅಥವಾ ಸರ್ಕಾರವೇ ಖರೀದಿಸಿ ಕೊಡುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

60368 ಎಸ್‌ಐಆರ್‌ ಗಣತಿ ನಮೂನೆ ವಿತರಣೆ
ರಸ್ತೆ ಅಭಿವೃದ್ಧಿಗೆ ಕಾಮಗಾಗಳಿಗೆ ಶಾಸಕ ಮೇಟಿ ಚಾಲನೆ