ಮೂಲವೃತ್ತಿಗೆ ಧಕ್ಕೆಯಾಗದಂತೆ ಸಮಾಜ ಎಚ್ಚರವಹಿಸಲಿ

KannadaprabhaNewsNetwork |  
Published : Jul 01, 2026, 03:45 AM IST
ಗಾಣಿಗ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೈಲಹೊಂಗಲ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಮೂಲ ವೃತ್ತಿಗೆ ಧಕ್ಕೆಯಾದಂತೆ ಗಾಣಿಗ ಸಮುದಾಯ ಎಚ್ಚರ ವಹಿಸಿ ಮಾದರಿಯಾಗಬೇಕೆಂದು ಮೂರುಸಾವಿರ ಶಾಖಾ ಮಠದ ಪ್ರಭು ನೀಲಕಂಠ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಮೂಲ ವೃತ್ತಿಗೆ ಧಕ್ಕೆಯಾದಂತೆ ಗಾಣಿಗ ಸಮುದಾಯ ಎಚ್ಚರ ವಹಿಸಿ ಮಾದರಿಯಾಗಬೇಕೆಂದು ಮೂರುಸಾವಿರ ಶಾಖಾ ಮಠದ ಪ್ರಭು ನೀಲಕಂಠ ಸ್ವಾಮೀಜಿ ಹೇಳಿದರು.ನಗರದ ಧಾರವಾಡ ರಸ್ತೆಯ ಶ್ರೀ ಗಾಣದೇವಿ ಮಂದಿರದಲ್ಲಿ ಸೋಮವಾರ ಶ್ರೀಶಿವಶಕ್ತಿ ಗಾಣದೇವಿ ಮಂದಿರ ಟ್ರಸ್ಟ್‌ ಹಾಗೂ ತಾಲೂಕಾ ಗಾಣಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ಶ್ರೀ ಗಾಣದೇವಿಯ ಜಾತ್ರಾ ಮಹೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗಾಣಿಗ ಸಮಾಜವು ತಮ್ಮ ಕಾಯಕದಿಂದ ಕೀರ್ತಿ ಬೆಳೆಸಿಕೊಂಡಿದ್ದು, ಸಂಘಟಿತರಾಗಿ ಸಾಗಿದಾಗ ಮಾತ್ರ ಯಶ ಸಿಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಘಟನೆ ಮೂಲಕ ಹಲವಾರು ವಿಧಾಯಕ ಕಾರ್ಯಗಳನ್ನು ನೆರವೇರಿಸುತ್ತಿರುವದು ಹೆಮ್ಮೆಯ ವಿಷಯವಾಗಿದೆ ಎಂದು ಶ್ಲಾಘಿಸಿದರು.ನಿವೃತ ಶಿಕ್ಷಕ ಸಿ.ವ್ಹಿ.ಕಟ್ಟಿಮನಿ ಉಪನ್ಯಾಸ ನೀಡಿ, ಬಸವಾದಿ ಶರಣರ ಕಾಲದಿಂದಲೂ ಗಾಣಿಗ ಸಮುದಾಯ ಕಾಯಕಕ್ಕೆ ಸಮಾಜದಲ್ಲಿ ಹೆಚ್ಚಿನ ಗೌರವವಿದ್ದು ಆಹಾರ ತಯಾರಿಕೆಯಲ್ಲಿ ಎಣ್ಣೆಯ ಪಾತ್ರ ಅತ್ಯವಶ್ಯವಾಗಿದೆ. ಕೈಯಲ್ಲಿ ಇದ್ದಂತ ವೃತ್ತಿಯನ್ನೇ ಪ್ರಾಮಾಣಿಕ, ಶ್ರದ್ದೆಯಿಂದ ನಿರ್ವಹಿಸಿದರೆ ಸರಕಾರದ ಯಾವ ಸೌಲಭ್ಯಗಳಿಗೂ ಕೈ ಚಾಚುವ ಪರಿಸ್ಥಿತಿ ಎದುರಾಗುವದಿಲ್ಲ. ಪ್ರತಿಭಾವಂತರನ್ನು ಬೆಳೆಸುವ ಕಾರ್ಯ ಪ್ರತಿ ಹಂತದಲ್ಲೂ ಆದಾಗ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣವಾಗಲು ಸಾಧ್ಯವಾಗಲಿದೆ ಎಂದು ಹೇಳಿದರು.ಶ್ರೀ ಭಗಳಾಂಭಾದೇವಿ ದೇವಸ್ಥಾನದ ಧರ್ಮಾಧಿಕಾರಿ ಡಾ.ವೀರಯ್ಯ ಹಿರೇಮಠ, ಧಾರ್ಮಿಕ ದತ್ತಿ ಇಲಾಖೆಯ ರಾಜ್ಯ ನಿರ್ದೇಶಕ ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಸಾನಿಧ್ಯ ವಹಿಸಿದ್ದರು. ತಾಲೂಕಾ ಗಾಣಿಗ ಸಮಾಜದ ಅಧ್ಯಕ್ಷ ಗಂಗಾಧರ ಗಿರಿಜಣ್ಣವರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷರಾದ ರಾಜು ಜನ್ಮಟ್ಟಿ, ಬಾಬು ಕುಡಸೋಮನ್ನವರ, ನಗರಸಭೆ ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಮಹಾಂತೇಶ ಕಳ್ಳಿಬಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಗಾಣಿಗ ನೌಕರರ ಸಂಘದ ರಾಜ್ಯಾಧ್ಯಕ್ಷ ಆರ್.ಜಿ.ಪಾಟೀಲ, ಜಿಲ್ಲಾಧ್ಯಕ್ಷ ರಮೇಶ ಉಟಗಿ, ತಾಲೂಕಾ ವೈದ್ಯಾಧಿಕಾರಿ ಡಾ.ರವಿಂದ್ರ ಜಕನೂರ, ತಾಲೂಕಾ ಪಶು ವೈದ್ಯಾಧಿಕಾರಿ ಡಾ.ಮಲ್ಲಪ್ಪ ಸಜ್ಜನ, ಅರ್ಬನ್ ಬ್ಯಾಂಕ್ ನಿರ್ದೇಶಕ ಬಾಬಣ್ಣ ಪತ್ತೆಣ್ಣವರ, ಗಾಣಿಗ ಸಮಾಜದ ಮಹಿಳಾ ತಾಲೂಕಾಧ್ಯಕ್ಷ್ಯೆ ಗೌರವ್ವ ಗಾಣಿಗೇರ, ಶಂಕರ ಗಾಣಿಗೇರ, ಅಶೋಕ ಗುಲಗಂಜಿ, ಮಲ್ಲಿಕಾರ್ಜುನ ಗಾಣಗಿ, ಪ್ರಕಾಶ ಗಾಣಿಗೇರ, ಮಲ್ಲಿಕಾರ್ಜುನ ಗಾಣಿಗೇರ ಮುಂತಾದವರು ಉಪಸ್ಥಿತರಿದ್ದರು. ತಾಲೂಕಾ ಗಾಣಿಗ ಸಂಘಟನೆಯ ಪದಾಧಿಕಾರಿಗಳು, ಸಮಾಜದ ಬಾಂಧವರು ಜ್ಯೋತಿ ಸ್ವ-ಸಹಾಯ ಸಂಘ, ಶ್ರೀ ಶಿವಶಕ್ತಿ ಗಾಣದೇವಿ ಮಂದಿರ ಟ್ರಸ್ಟ್‌ ಕಮಿಟಿ ಸದಸ್ಯರು ಹಾಗೂ ತಾಲೂಕಾ ಗಾಣಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸೋಮಲಿಂಗ ಮೆಟಗಟ್ಟಿ ಸ್ವಾಗತಿಸಿದರು. ಶಿಕ್ಷಕ ಪ್ರವೀಣ ಗಾಣಿಗೇರ ನಿರೂಪಿಸಿದರು. ಯಲ್ಲಪ್ಪ ಗಾಣಗಿ ವಂದಿಸಿದರು. 2025-26 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಸಮಾಜದ ನಿವೃತ ನೌಕರರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

60368 ಎಸ್‌ಐಆರ್‌ ಗಣತಿ ನಮೂನೆ ವಿತರಣೆ
ವಿದ್ಯುತ್ ಟ್ರಾನ್ಸಫಾರ್ಮರ್ ಶಾರ್ಟ್: ಇಲೇಕ್ಟ್ರಿಕ್‌ ವಸ್ತುಗಳಿಗೆ ಹಾನಿ