ಕನ್ನಡಪ್ರಭ ವಾರ್ತೆ ಹನೂರುತಾಲೂಕಿನ ವಡೆಕಹಳ್ಳದ ಸಂತೆಖಾನೆ ಸಮೀಪದ ಮಲೆ ಮಹದೇಶ್ವರ ಬೆಟ್ಟ ಮುಖ್ಯರಸ್ತೆಯಲ್ಲಿ ಆನೆಗಳ ಹಿಂಡು ಪ್ರತ್ಯಕ್ಷಗೊಂಡು ವಾಹನ ಸವಾರರಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ.
ಕೆಲ ಸಮಯದ ಬಳಿಕ ಕಾಡಾನೆಗಳು ಕಾಡಿನತ್ತ ಮರಳಿದ ನಂತರ ವಾಹನ ಸವಾರರು ತಮ್ಮ ಪ್ರಯಾಣವನ್ನು ಮುಂದುವರಿಸಿದರು.ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಪಾದಯಾತ್ರಿಗಳು ಹಾಗೂ ವಾಹನ ಸವಾರರು ಈ ಭಾಗದಲ್ಲಿ ಸಂಚರಿಸುವ ವೇಳೆಯಲ್ಲಿ ಎಚ್ಚರಿಕೆಯಿಂದ ಪ್ರಯಾಣಿಸಬೇಕು ಹೀಗಾಗಿ ಕಾಡಾನೆಗಳ ಬಗ್ಗೆ ಎಚ್ಚರಿಕೆಯಿಂದ ತೆರಳಬೇಕು ಎಂದು ಮನವಿ ಮಾಡಿದ್ದಾರೆ.
ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆಯ ಮಾರ್ಗ ಮಧ್ಯ ಸಂತೆ ಖಾನೆ ಬಳಿ ಕಾಡಾನೆಗಳ ಹಿಂಡು ಮರಿಗಳ ಜೊತೆ ರಸ್ತೆ ದಾಟುವುದನ್ನು ಪ್ರಯಾಣಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಮಾದಪ್ಪನ ಭಕ್ತಾದಿಗಳು ಹಾಗೂ ವಿವಿಧ ಗ್ರಾಮಕ್ಕೆ ತೆರಳುವ ಪ್ರಯಾಣಿಕರು ಎಚ್ಚರಿಕೆಯಿಂದ ತೆರಳಬೇಕು ಎಂದು ಮನವಿ ಮಾಡಿದ್ದಾರೆ ..20ಸಿಎಚ್ಎನ್16ಮತ್ತು17ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯ ಸಂತೆ ಖಾನೆ ಬಳಿ ಕಾಡಾನೆಗಳ ಹಿಂಡು.