ಅಕ್ಕನ ವಚನಗಳಿಂದ ಜೀವನದಲ್ಲಿ ಉನ್ನತಿ

KannadaprabhaNewsNetwork |  
Published : Apr 20, 2024, 01:02 AM IST
ಕಾರ್ಯಕ್ರಮವನ್ನು ಉದ್ದೇಶಿಸಿ ಡಾ.ಸಿದ್ಧರಾಮ ಶ್ರೀಗಳು ಮಾತನಾಡಿದರು.  | Kannada Prabha

ಸಾರಾಂಶ

ಅಕ್ಕನ ವಚನಗಳನ್ನು ಮತ್ತೆ ಮತ್ತೆ ಓದುವುದರ ಜತೆಯಲ್ಲಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೂವುದರಿಂದ ಜೀವನ ಉನ್ನತಿ ಪಡೆಯಬಹುದು

ಗದಗ: 12 ನೇ ಶತಮಾನದಲ್ಲಿ ದೊರೆತ ಸ್ವಾತಂತ್ರ್ಯವನ್ನು ಅನುಭವಿಸಿದ ಮಹಿಳಾ ಶ್ರೇಷ್ಠ ಶಿವಶರಣೆ ಅಂದರೆ ಅಕ್ಕಮಹಾದೇವಿ, ಅಕ್ಕನ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಜೀವನದಲ್ಲಿ ಉನ್ನತಿ ಸಾಧ್ಯ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಕ್ಕನ ಬಳಗದಲ್ಲಿ ಅಕ್ಕನ ಜಯಂತಿ ಉತ್ಸವದ ನಿಮಿತ್ತ ನಡೆಯುತ್ತಿರುವ ಮೊದಲನೆ ದಿನದ ಕಾರ್ಯಕ್ರಮದಲ್ಲಿ ಷಟ್‌ಸ್ಥಲ್‌ ಧ್ವಜಾರೋಹಣ ನೆರವೇರಿಸಿ ಆಶೀರ್ವಚನದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಸಾಧಕರಲ್ಲಿ ಶ್ರೇಷ್ಠ ಸ್ಥಾನ ಪಡೆದ ಮಹಿಳೆ ತನ್ನ ಬದುಕನ್ನು ಮಾತ್ರ ಸಾರ್ಥಕಪಡಿಸಿಕೊಳ್ಳದೇ ಆತ್ಮಕಲ್ಯಾಣದ ಜತೆಗೆ ಸಮಾಜದ ಕಲ್ಯಾಣ ಸಾಧಿಸಿರುವ ಮಹಾಜ್ಞಾನಿ, ಚಿಕ್ಕವಯಸ್ಸಿನಲ್ಲಿಯೇ ಹೆಚ್ಚಿನ ಜ್ಞಾನ ಪಡೆದ ಮಹಿಳೆ ಅದ್ಭುತವಾದ ಕವಿತಾ ಶಕ್ತಿ ಇರುವ, ಭರತ ಭೂಮಿಯ ಮೊಟ್ಟ ಮೊದಲ ಮಹಿಳಾ ಕವಿಯತ್ರಿ, ಅಕ್ಕನ ವಚನಗಳಲ್ಲಿ ಮೌಲ್ಯ ತುಂಬಿರುತ್ತಿತ್ತು.

ಮನುಷ್ಯನ ದುಃಖಕ್ಕೆ ಮನಸ್ಸೇ ಕಾರಣ. ಎಲ್ಲ ಇಂದ್ರಿಯಾಗಳಿಗೂ ಚೇತನ ನೀಡುವುದರ ಮೂಲಕ ಮನಸ್ಸೇ ಇಂದ್ರಿಯಗಳಿಗೆ ಮೂಲವಾಗಿದೆ. ನಮ್ಮಲ್ಲಿರುವ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಬೇಕು. ಭಗವಂತನ ಚಿಂತನೆ ಮಾಡುತ್ತ, ಶರಣಾಗತಿ ಭಾವ ಹೊಂದಿದಾಗ ಮಾತ್ರ ಮೋಕ್ಷ ಸಂಪಾದಿಸಬಹುದು. ಅಕ್ಕನ ವಚನಗಳನ್ನು ಮತ್ತೆ ಮತ್ತೆ ಓದುವುದರ ಜತೆಯಲ್ಲಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೂವುದರಿಂದ ಜೀವನ ಉನ್ನತಿ ಪಡೆಯಬಹುದು ಎಂದರು.

ಶೀವಲೀಲಾ ಹಿರೇಮಠ ಪ್ರಾರ್ಥಿಸಿದರು. ಅಕ್ಕನ ಬಳಗದ ಅಧ್ಯಕ್ಷೆ ಲಲಿತಾ ಬಾಳಿಹಳ್ಳಿಮಠ ಸ್ವಾಗತಸಿದರು. ಹಿಂದೂಸ್ತಾನಿ ಗಾಯಕಿ ಪಾರ್ವತಿ ಮಾಳೆಕೊಪ್ಪಮಠ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅನ್ನಪೂರ್ಣ ಮಾಳೆಕೊಪ್ಪಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪವಿತ್ರಾ ಬಿರಾದಾರ ಭಕ್ತಿ ಸೇವೆ ವಹಿಸಿಕೊಂಡಿದ್ದರು. ಕಾರ್ಯದರ್ಶಿ ರೇಣುಕಾ ಅಮಾತ್ಯ ವಂದಿಸಿದರು. ಜಯಲಕ್ಷ್ಮೀ ಬಳ್ಳಾರಿ ಕಾರ್ಯಕ್ರಮ ಸಂಯೋಜನೆ ಮಾಡಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ