ಕೂಸಿನ ಮನೆ ಸೌಲಭ್ಯ ಪಡೆಯಲು: ರಾಹುಲ್ ಸಲಹೆ

KannadaprabhaNewsNetwork |  
Published : Apr 20, 2024, 01:02 AM IST
19ಕೆಪಿಆರ್ಸಿಆರ್03 | Kannada Prabha

ಸಾರಾಂಶ

ರಾಯಚೂರು ತಾಲೂಕಿನ ಚಂದ್ರಬಂಡಾ ಗ್ರಾಪಂ ವ್ಯಾಪ್ತಿಯ ನಲ್ಲೋನಿಕುಂಟ ಕೆರೆಯಲ್ಲಿ ನರೇಗಾ ಯೋಜನೆಯಡಿ ಕೂಲಿಕಾರರೊಂದಿಗೆ ಶುಕ್ರವಾರ ಭೇಟಿ ನೀಡಿದ ಜಿಪಂ ಸಿಇಒ ಪಾಂಡ್ವೆ ರಾಹುಲ್ ತುಕರಾಮ ಕೂಲಿಕಾರರೊಂದಿಗೆ ಚರ್ಚೆ ನಡೆಸಿದರು.

- ಚಂದ್ರಬಂಡಾ ಗ್ರಾಪಂಗೆ ಸಿಇಒ ಭೇಟಿ ಪರಿಶೀಲನೆಕನ್ನಡಪ್ರಭ ವಾರ್ತೆ ರಾಯಚೂರು

ತಾಲೂಕಿನ ವ್ಯಾಪ್ತಿಯ ಚಂದ್ರಬಂಡಾ ಗ್ರಾಪಂಗೆ ಶುಕ್ರವಾರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕಾರಾಮ ಭೇಟಿ ನೀಡಿ ಪರಿಶೀಲನೆ ಮಾಡಿದರು.

ತಾಲೂಕಿನ ಚಂದ್ರಬಂಡಾ ಗ್ರಾಪಂ ವ್ಯಾಪ್ತಿಯ ನಲ್ಲೋನಿಕುಂಟ ಕೆರೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರರು ಕೆಲಸ ನಿರ್ವಹಿಸುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ವೀಕ್ಷಣೆ ಮಾಡಿದರು. ನಂತರ ತಾಪಂ ಇಒ ರವರೊಂದಿಗೆ ಮಾತನಾಡಿ, ಕಾಮಗಾರಿ ಸ್ಥಳದಲ್ಲಿ ಒದಗಿಸಿರುವ ಕುಡಿಯುವ ನೀರು, ನೆರಳಿನ ಸೌಲಭ್ಯಗಳ ಬಗ್ಗೆ ಚರ್ಚೆ ಮಾಡಿದರು.

ಮಹಿಳಾ ಕೂಲಿಕಾರರೊಂದಿಗೆ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿದರು. ಕೂಲಿಕಾರರ ಮಕ್ಕಳ ರಕ್ಷಣೆಗಾಗಿ ಗ್ರಾಪಂ ಹಂತದಲ್ಲಿ ಶಿಶುಪಾಲನಾ ಕೇಂದ್ರ ಕೂಸಿನ ಮನೆ ತೆರೆಯಲಾಗಿದೆ. ಅದರ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು. ನಂತರ ಕೆರೆ ಕಾಮಗಾರಿ ಕಡತದ ದಾಖಲೆ ಪರಿಶೀಲನೆ ನಡೆಸಿದರು.

ಎಲ್ಲ್ಲ ಕೂಲಿಕಾರರಿಗೆ ನಿರಂತರವಾಗಿ ಕೆಲಸ ಒದಗಿಸಬೇಕು ಮತ್ತು ಎನ್‌ಎನ್‌ಆರ್‌ಗಳ ಸೇವ್ ಮಾಡುವಲ್ಲಿ ವಿಳಂಭವಾಗಬಾರದು. ಅದೇ ರೀತಿ ಕೂಲಿಕಾರರ ಹಾಜರಾತಿ ಎನ್ಎಮ್ಎಮ್ಎಸ್ ಆ್ಯಪ್‌ನಲ್ಲಿ ತೆಗೆದುಕೊಂಡು ಶೇ.100ರಷ್ಟು ಪ್ರಗತಿ ಸಾಧಿಸುವಂತೆ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರೊಬೇಷನರಿ ಐಎಎಸ್ ಅಧಿಕಾರಿ ಸಾಹಿತ್ಯ ಆಲದಕಟ್ಟಿ, ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ಸಹಾಯಕ ನಿರ್ದೇಶಕ ಹನುಮಂತ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೈನುದ್ಧೀನ್ , ಜಿಲ್ಲಾ ಐಇಸಿ ಸಂಯೋಜಕರು, ತಾಲೂಕ ಐಇಸಿ ಸಂಯೋಜಕರು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಿಬ್ಬಂದಿಯವರು, ಹಾಗೂ ಗ್ರಾ.ಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!