ಕನ್ನಡಪ್ರಭ ವಾರ್ತೆ ಯಳಂದೂರುತಾಲೂಕಿನ ಗೌಡಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 2023-24 ನೇ ಸಾಲಿನಲ್ಲಿ ವಿವಿಧ ಆದಾಯಗಳಿಂದ 11.05 ಲಕ್ಷ ರು.ಗಳ ನಿವ್ವಳ ಲಾಭ ಬಂದಿದೆ ಎಂದು ಸಂಘದ ಅಧ್ಯಕ್ಷ ಎಂ. ರವಿ ಮಾಹಿತಿ ನೀಡಿದರು.ಮಂಗಳವಾರ ಗೌಡಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪಡಿತರ ದಿನಸಿಯನ್ನು 2.60 ಲಕ್ಷ ರು.ಸೀಮೇಎಣ್ಣೆ 1.47 ಲಕ್ಷ ರು. ಖಾಲಿ ಚೀಲ 16,500 ರು. ಗೊಬ್ಬರ ಮಾರಾಟದಿಂದ 9.18 ಲಕ್ಷ ರು. ಕೆಸಿಸಿ ಕಾರ್ಡಿನಿಂದ 4750 ರು. ಸರ್ಕಾರಿ ಆದೇಶದಂತೆ ಹಳದಿ, ಅನ್ನ ಅಂತ್ಯೋದಯ ಕಾರ್ಡ್‌ಗಳನ್ನು ಸಮರ್ಪಕವಾಗಿ ಮಾರಾಟ ಮಾಡಿ 2023-24 ನೇ ಸಾಲಿನಲ್ಲಿ ಒಟ್ಟು 2.87ಲಕ್ಷ ರು. ವ್ಯಾಪಾರದಿಂದಲೇ ಲಾಭವನ್ನು ಗಳಿಸಿರುತ್ತದೆ. ವಿವಿಧ ಸಾಲಗಳಿಂದ ಸಂಘಕ್ಕೆ 17.51 ಲಕ್ಷ ರು. ಸಾಲ ಮರುಪಾವತಿಯಾಗಬೇಕಿದೆ ಎಂದರು.ಸದಸ್ಯರು ಹಾಗೂ ರೈತರ ಪರವಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಸಾಲವನ್ನು ನೀಡಿ ಬಡ ರೈತರಿಗೂ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಉಪಾಧ್ಯಕ್ಷೆ ಚಿನ್ನಮ್ಮ ನಿರ್ದೇಶಕರಾದ ಶಂಭುಲಿಂಪ್ಪ, ಎಂ. ಬಸವರಾಜು, ರಾಜಶೇಖರ್, ಎಂ. ಸಿದ್ದರಾಜು, ಶಿವರುದ್ರಪ್ಪ, ನಟರಾಜು, ಮಹದೇವಯ್ಯ, ಪಾಪಣ್ಣೇಗೌಡ, ರಂಗನಾಯಕ, ಜಯಮ್ಮ ಅನಿಲ್‌ಕುಮಾರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ರಂಗಸ್ವಾಮಿ, ಎಸ್. ಮಾದೇಶ್, ಬಿ.ವೈ. ಶಶಿಕಿರಣ್, ಎಂ. ಪ್ರಮೋದ್ ಗ್ರಾಪಂ ಮಾಜಿ ಅಧ್ಯಕ್ಷ ರವಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಸೇರಿದಂತೆ ಅನೇಕರು ಇದ್ದರು.24ಸಿಎಚ್ಎನ್55ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಎಂ.ರವಿ ಮಾತನಾಡಿದರು.