ಕನ್ನಡಪ್ರಭ ವಾರ್ತೆ ಯಾದಗಿರಿ
ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ನೀಲಕಂಠರಾಯ ಎಲ್ಹೇರಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆ ಮತ್ತು ವಿಕಾಸ ಅಕಾಡೆಮಿ ಮುಂದಿನ ಕಾರ್ಯ ಚಟುವಟಿಕೆಗಳ ಕುರಿತು ಹಿತೈಷಿಗಳ ಸಭೆಯಲ್ಲಿ ಅವರು ಮಾತನಾಡಿದರು.
ನೀಲಕಂಠರಾಯ ಎಲ್ಹೇರಿ ಅಕಾಲಿಕ ಸಾವಿಗೀಡಾಗಿದ್ದಾರೆ. ಅವರ ಕುಟುಂಬ ದುಃಖದಲ್ಲಿದ್ದು, ನಾವು ಮಾನವೀಯ ಕಾರ್ಯಗಳನ್ನು ಮಾಡಲು ಮಾತ್ರ ಸಾಧ್ಯ. ನನ್ನ ಸುದೀರ್ಘ ಬದುಕಿನ ಚಟುವಟಿಕೆಗಳ ಪಯಣದಲ್ಲಿ ಕಳೆದುಕೊಂಡ ಪ್ರಮುಖರಲ್ಲಿ ನಮ್ಮೆಲ್ಲರ ಶಕ್ತಿಯಾಗಿದ್ದ ಎಲ್ಹೇರಿಯವರು 3ನೇ ವ್ಯಕ್ತಿಯಾಗಿದ್ದಾರೆ. ಅವರ ಮಕ್ಕಳು ಭವಿಷ್ಯದಲ್ಲಿ ಒಳ್ಳೆಯ ಗೌರವ ನಾಗರಿಕರಾಗಿ ಬಾಳಬೇಕೆಂಬುದೇ ಎಲ್ಲರ ಅಪೇಕ್ಷೆಯಾಗಿದೆ ಎಂದು ತಿಳಿಸಿದರು.ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಅಕಾಡೆಮಿ ಚಟುವಟಿಕೆಗಳನ್ನು ನಡೆಸಿಕೊಂಡು ಬದಲಾವಣೆಗೆ ಪ್ರಯತ್ನಿಸಬೇಕಿದೆ ಎಂದು ಮನವಿ ಮಾಡಿದರು.
ವಿಕಾಸ ಅಕಾಡೆಮಿ ಹಿರಿಯರಾದ ಶಾಂತರಡ್ಡಿ ವನಕೇರಿ, ನರಸರಡ್ಡಿ ಗುರುಮಠಕಲ್, ಯುವ ಮುಖಂಡ ಮಹೇಶ ರಡ್ಡಿ ಮುದ್ನಾಳ ವೇದಿಕೆಯಲ್ಲಿದ್ದರು. ಭೀಮಣ್ಣ ವಡವಟ್ ಸ್ವಾಗತಿಸಿ, ಶೃತಿ ಕಂದಕೂರ ವಂದಿಸಿದರು.