ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಅಖಿಲ ಭಾರತ ಗಾಣಿಗ ಸಮಾಜ, ಚಿತ್ರದುರ್ಗ ತಾಲೂಕು ಗಾಣಿಗ ಸಮಾಜ ಹಾಗೂ ಗಾಣಿಗ ಮಹಿಳಾ ಸಮಾಜ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಾಧಕರ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಲಿಂಗಾಯತ ಸಮಾಜದಲ್ಲಿ ವಿವಿಧ ರೀತಿಯ ಉಪ ಸಮಾಜಗಳಿವೆ. ಇದರಲ್ಲೂ ಬಡವರಿದ್ದು ಅವರ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಶೈಕ್ಷಣಿಕವಾಗಿಯೂ ಹಿಂದುಳಿದಿದ್ದಾರೆ. ಎಲ್ಲರಂತೆ ಮುಖ್ಯವಾಹಿನಿಗೆ ಬರಬೇಕಾದ ಅಗತ್ಯವಿದ್ದು ಮೀಸಲು ಸೌಲಭ್ಯ ನಿರೀಕ್ಷಿಸುತ್ತಿದ್ದಾರೆ. ಚರಿತ್ರೆಯನ್ನು ಬೇರೆಯವರಿಂದ ಬರೆಸಬಹುದು ಆದರೆ ಚಾರಿತ್ರ್ಯವನ್ನು ನಾವೇ ಬರೆಯಬೇಕಿದೆ. ಗಾಣಿಗ ಸಮಾಜಕ್ಕೆ ಚರಿತ್ರೆ ಹಾಗೂ ಚಾರಿತ್ರ್ಯ ಎರಡು ಇದೆ. ನಮ್ಮದು ಕಾಯಕ ಸಮಾಜ. ಅನುಭವ ಮಂಟಪದಲ್ಲಿ ಎಲ್ಲಾ ಶರಣರು ತಮ್ಮ ಪಾಲಿನ ಕಾಯಕ ಮುಗಿಸಿ ತದ ನಂತರ ಆದ ಅನುಭವನ್ನು ಹಂಚಿಕೊಳ್ಳುತ್ತಿದ್ದರು ಎಂದರು.ಹಿಂದಿನ ಕಾಲದಲ್ಲಿ ವೃತ್ತಿಗಳಿದ್ದವು. ಅದರ ಮೂಲಕ ಜನತೆಯನ್ನು ಗುರುತಿಸಲಾಗುತ್ತಿತು. ಆದರೆ ಈಗ ಅದೇ ವೃತ್ತಿಗಳು ಜಾತಿಗಳಾಗಿವೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವುದು ಅನಿವಾರ್ಯವಾಗಿದೆ. ಎಲ್ಲಿಯೂ ನಮ್ಮ ಜಾತಿ ಹೇಳಿಕೊಂಡು ವ್ಯವಹಾರ ಮಾಡಿಲ್ಲ ಸಂಬಂಧ ಬೆಳಸಿಲ್ಲ. ಇದರ ಬದಲಾಗಿ ಗಾಣದ ಎತ್ತಿನಂತೆ ತಿರುಗಾಡಿ ದೇವರ ಮನೆ ದೀಪಕ್ಕೂ ಊಟಕ್ಕೂ ಸಹಾ ಎಣ್ಣೆ ನೀಡಲಾಗುತ್ತಿದೆ. ನಮ್ಮ ಸಮಾಜದವರ ತಾವು ಬೆಳೆಯುವುದಕ್ಕಿಂತ ಬೇರೆಯವರನ್ನು ಹೆಚ್ಚಾಗಿ ಬೆಳೆಸುತ್ತಾರೆ. ಗಾಣಿಗ ಸಮಾಜಕ್ಕೆ ಮೀಸಲಾತಿ ನೀಡಲು ಇರುವ ತಾತ್ವಿಕ ತೊಡಕನ್ನು ಸರ್ಕಾರ ನಿವಾರಣೆ ಮಾಡಬೇಕು. ಈಗ ಜಾತಿ ಸಮೀಕ್ಷೆ ನಡೆದಿದ್ದು ವರದಿ ತರಿಸಿಕೊಂಡು ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆದು ಶ್ರೀಗಳು ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ್ದ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಡಿ.ಎಸ್ ಸುರೇಶಬಾಬು ಮಾತನಾಡಿ, ಹೊಳಲ್ಕೆರೆ ರಸ್ತೆಯಲ್ಲಿ ಸಮಾಜದ ಜಾಗ ಇದ್ದು ಅಲ್ಲಿಯೇ ಸಮುದಾಯಭವನ ನಿರ್ಮಾಣ ಮಾಡಲು ಸಮಾಜದ ಬಾಂಧವರು ಮುಂದಾಗಬೇಕಿದೆ. ಒಗ್ಗಟಾಗಿ ಇದ್ದರೆ ಮಾತ್ರ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಿದೆ. ಶ್ರೀಗಳು ಶಿಕ್ಷಣ ಸಂಸ್ಥೆ ಪ್ರಾರಂಭಿಸುವುದರ ಮೂಲಕ ಜ್ಞಾನ ದಾಸೋಹ ಮಾಡುತ್ತಿದ್ದಾರೆ. ಇದೇ ರೀತಿ ಚಿತ್ರದುರ್ಗದಲ್ಲಿಯೂ ಶಾಲೆಗಳ ಆರಂಭಿಸಬೇಕು ಎಂದು ಮನವಿ ಮಾಡಿದರು.