ಪೆರ್ನಾಜೆಯಲ್ಲಿ ಕಾಡಾನೆ ದಾಳಿ ಕೃಷಿಗೆ ಹಾನಿ

KannadaprabhaNewsNetwork |  
Published : Feb 14, 2026, 03:15 AM IST
ಫೋಟೋ: ಹಾನಿ ೧, ೨,ಆನೆ ದಾಳಿಯಿಂದ ತೋಟಕ್ಕೆ ಹಾನಿಯಾಗಿರುವುದು | Kannada Prabha

ಸಾರಾಂಶ

ಕಾಡಾನೆ ದಾಳಿ ನಡೆಸಿ ಅಡಿಕೆ ತೋಟಕ್ಕೆ ಹಾನಿ ಮಾಡಿದ ಘಟನೆ ಪುತ್ತೂರು ಸುಳ್ಯ ಗಡಿ ಭಾಗವಾಗಿರುವ ಪೆರ್ನಾಜೆಯಲ್ಲಿ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಪುತ್ತೂರು : ಕಾಡಾನೆ ದಾಳಿ ನಡೆಸಿ ಅಡಿಕೆ ತೋಟಕ್ಕೆ ಹಾನಿ ಮಾಡಿದ ಘಟನೆ ಪುತ್ತೂರು ಸುಳ್ಯ ಗಡಿ ಭಾಗವಾಗಿರುವ ಪೆರ್ನಾಜೆಯಲ್ಲಿ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಪೆರ್ನಾಜೆಯ ಕುಮಾರ್ ಪೆರ್ನಾಜೆ ಮತ್ತು ರಾಘವೇಂದ್ರ ಭಟ್ ಅವರ ತೋಟಕ್ಕೆ ನುಗ್ಗಿದ ಕಾಡಾನೆಯು ಕೃಷಿಗೆ ಹಾನಿ ಮಾಡಿದೆ. ಬುಧವಾರ ತಡರಾತ್ರಿ ವೇಳೆಯಲ್ಲಿ ಕಾಡಾನೆ ತೋಟಕ್ಕೆ ನುಗ್ಗಿರುವುದಾಗಿ ಕಂಡು ಬಂದಿದ್ದು, ತೋಟದಲ್ಲಿದ್ದ ಹಲವಾರು ಅಡಿಕೆ ಮರಗಳನ್ನು ಬುಡಸಹಿತ ಉರುಳಿಸಿದ್ದು, ಬಾಳೆಗಿಡಗಳನ್ನು ತಿಂದು ಹಾಕಿದೆ. ಬೆಳಗ್ಗಿನ ವೇಳೆ ಹಿಂದಿರುಗಿ ಮುಗೇರು ಗುಡ್ಡಡ್ಕ, ಆನೆಗುಂಡಿ ಕಡೆಯಿಂದ ತೆರಳಿರುವುದಾಗಿ ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಕಾಲದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯಾಗಲಿ
ಕಾರ್ಮಿಕ ದ್ರೋಹವನ್ನು ಸಹಿಸಲಾಗದು: ಬಿ.ಎಂ. ಭಟ್‌