ಕನ್ನಡಪ್ರಭ ವಾರ್ತೆ ಯಮಕನಮರಡಿ ಭಾರತದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಕ್ರಾಂತಿಕಾರರು ಹೋರಾಡಿ ಪ್ರಾಣತ್ಯಾಗ ಮಾಡಿದ್ದಾರೆ. ಇಂತಹ ಶ್ರೇಷ್ಠವಾದ ಸಂಸ್ಕೃತಿಯುಳ್ಳ ಹಿಂದೂ ಧರ್ಮವನ್ನು ಶಕ್ತಿಶಾಲಿ ಮಾಡಬೇಕಾಗಿದೆ. ಹಿಂದೂ ಎನ್ನುವುದಕ್ಕೆ ನಾಚಿಕೆ ಪಡುವುದಲ್ಲ ಪುಣ್ಯದ ಶಬ್ದವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಳಗಾವಿ ವಿಭಾಗದ ಕಾರ್ಯಕಾರಣಿ ಸದಸ್ಯ ದೇವಿಪ್ರಸಾದ ಕುಲಕರ್ಣಿ ಹೇಳಿದರು
ಕನ್ನಡಪ್ರಭ ವಾರ್ತೆ ಯಮಕನಮರಡಿ
ಭಾರತದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಕ್ರಾಂತಿಕಾರರು ಹೋರಾಡಿ ಪ್ರಾಣತ್ಯಾಗ ಮಾಡಿದ್ದಾರೆ. ಇಂತಹ ಶ್ರೇಷ್ಠವಾದ ಸಂಸ್ಕೃತಿಯುಳ್ಳ ಹಿಂದೂ ಧರ್ಮವನ್ನು ಶಕ್ತಿಶಾಲಿ ಮಾಡಬೇಕಾಗಿದೆ. ಹಿಂದೂ ಎನ್ನುವುದಕ್ಕೆ ನಾಚಿಕೆ ಪಡುವುದಲ್ಲ ಪುಣ್ಯದ ಶಬ್ದವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಳಗಾವಿ ವಿಭಾಗದ ಕಾರ್ಯಕಾರಣಿ ಸದಸ್ಯ ದೇವಿಪ್ರಸಾದ ಕುಲಕರ್ಣಿ ಹೇಳಿದರು.ಯಮಕನಮರಡಿಯಲ್ಲಿ ಗುರುವಾರ ಆಯೋಜಿಸಿದ್ದ ವಿಶಾಲ ಹಿಂದೂ ಸಮ್ಮೇಳನದಲ್ಲಿ ಅವರು ಮಾತನಾಡಿದರು. ನಾವು ಹಿಂದೂಗಳೆಂದು ಹೆಮ್ಮೆಯಿಂದ ಗರ್ವದಿಂದ ಹೇಳಬೇಕು. ವಿಶಾಲವಾದ ಸಂಸ್ಕೃತಿ, ಸಂಸ್ಕಾರಯುತ ಹಿಂದೂ ಧರ್ಮವನ್ನು ಉಳಿಸಲು ಹಿಂದೂ ಧರ್ಮದ ಬಾಂಧವರಲ್ಲಿ ಶಕ್ತಿ ತುಂಬಲು ದೇಶದಲ್ಲೆಡೆ ವಿಶಾಲ ಹಿಂದೂ ಸಮ್ಮೇಳನವನ್ನು ಆಯೋಜನೆ ಮಾಡಲಾಗುತ್ತಿದೆ. ಜಾತಿ, ಭಾಷೆ ಆಧಾರದ ಮೇಲೆ ಒಡಕು ಹುಟ್ಟು ಹಾಕಿ ಧರ್ಮ ಪರಿತವರ್ತನೆ ಮಾಡುವ ದುಸ್ಸಾಹಸವನ್ನು ಕೆಲವರು ಮಾಡಿದ್ದಾರೆ. ಸಾಮರಸ್ಯ, ಸ್ವಧರ್ಮ ಪಾಲನೆ ಸ್ವದೇಶಿ ವಸ್ತುಗಳನ್ನು ಬಳಕೆ ಮಾಡಬೇಕು. ಹಿಂದೂ ಧರ್ಮವು ಸಂಸ್ಕೃತಿಕಯ ಪ್ರತೀಕವಾಗಿದೆ ಎಂದು ಹೇಳಿದರು.ಗದಗದ ಜಗದ್ಗರು ಶ್ರೀಶಿವಾನಂದ ಬೃಹನ್ಮಠದ ಸದಾಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಋಷಿಮುನಿಗಳ ಪುಣ್ಯತಾಣವಾಗಿರುವ ಭಾರತ ದೇಶದಲ್ಲಿ ಹಿಂದೂ ಧರ್ಮ ಹುಟ್ಟಿದೆ. ಜಗತ್ತಿನಲ್ಲಿ ಎಲ್ಲಿಯೂ ಕೂಡಾ ಯಾವ ಧರ್ಮವಿಲ್ಲ. ಅಲ್ಲಿ ಕೇವಲ ಜಾತಿ, ಪಂಥ, ಸಂಪ್ರದಾಯ ಮಾತ್ರ ಇದೆ. ಕೆಲವರು ನಾವು ಹಿಂದೂಗಳು ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದರು.ಹತ್ತರಗಿ-ಯಮಕನಮರಡಿ ಹರಿಮಂದಿರದ ಡಾ.ಆನಂದ ಮಹಾರಾಜ ಗೋಸಾವಿ ಸಾನಿದ್ಯ ವಹಿಸಿದ್ದರು. ವಿಶಾಲ ಹಿಂದೂ ಸಮ್ಮೇಳನದ ಅಧ್ಯಕ್ಷ ಶಿವಾನಂದ ಬಾಗೇವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈರಣ್ಣ ಗುರವ ಸ್ವಾಗತಿಸಿದರು. ಗ್ರಾಮದ ಬನಶಂಕರಿ ದೇವಿ ಮಂದಿರದಿಂದ ವೇದಿಕೆಯವರೆಗೆ ಶೋಭಾಯಾತ್ರೆ ನಡೆಸಲಾಯಿತು.
ವೈಷ್ಣವಿ ನೃತ್ಯಾಲಯ ತಂಡದವರಿಂದ, ಶಾರದಾಂಬಾ ನಾಟ್ಯಾಲಯ ಪಾಶ್ಚಾಪೂರದ ಶಾಯಶ್ರಿ, ಶಾಂತಲಾ ಇವರಿಂದ ಸ್ವಾಗತ ನೃತ್ಯ ನಡೆಯಿತು. ಈ ವೇಳೆಯಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ನಿರ್ದೇಶಕ ಪೃಥ್ವಿ ಕತ್ತಿ, ಕಲಗೌಡ ಪಾಟೀಲ, ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ, ಮಾರುತಿ ಅಷ್ಟಗಿ, ರವೀಂದ್ರ ಬಣಜಿ, ಶ್ರೀಶೈಲ ಮಠಪತಿ, ನಾಗೇಶ ಬಡಿಗೇರ, ಬಸವರಾಜ ಬರಗಾಲಿ, ಸಂತೋಷ ಚಿಕ್ಕೋಡಿ, ವಿಶಾಲ ಅತ್ತಿಮರದ, ನಾರಾಯಣ ಭಂಗಿ ಮತ್ತು ಸಮಸ್ತ ಹಿಂದೂ ಬಾಂಧವರು, ವಿವಿಧ ಸಂಘಟನೆಗಳ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು. ರಾಜು ಕುಂಬಾರ ನಿರೂಪಿಸಿದರು. ವೈಷ್ಣವಿ ಕುಂಬಾರ ವಂದೇ ಮಾತರಂ ಗೀತೆ ಹಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.