ಎಲ್ಫಿನ್‌ ಟ್ರೋಫಿ: ಎಚ್‌ಸಿಎ ತಂಡಕ್ಕೆ ಗೆಲುವು

KannadaprabhaNewsNetwork |  
Published : Apr 08, 2024, 01:04 AM IST
ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಜಿಮ್‌ಖಾನಾ ಮೈದಾನದಲ್ಲಿ ನಡೆದ ಎಲ್ಫಿನ್‌ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಎಚ್‌ಸಿಎ ತಂಡದ ಪುನಿತ್ ಬಸವ ಅವರ ಆಕರ್ಷಕ ಬ್ಯಾಟಿಂಗ್‌. | Kannada Prabha

ಸಾರಾಂಶ

ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿಯ ಬೆಳ್ಳಿಹಬ್ಬದ ಪ್ರಯುಕ್ತ ಆಯೋಜಿಸಿರುವ ಎಲ್ಫಿನ್ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಗೆ ನಗರದ ಜಿಮ್‌ಖಾನಾ ಮೈದಾನದಲ್ಲಿ ಭಾನುವಾರ ಚಾಲನೆ ನೀಡಲಾಯಿತು.

ಹುಬ್ಬಳ್ಳಿ:

ಪುನೀತ್ ಬಸವ ಅವರ ಅಜೇಯ ಅರ್ಧಶತಕದೊಂದಿಗೆ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ (ಎಚ್‌ಸಿಎ) ತಂಡವು ಹೆಸ್ಕಾಂ ಕೆಪಿಟಿಸಿಎಲ್ ಸ್ಪೋರ್ಟ್ಸ್ ಅಕಾಡೆಮಿ (ಎಚ್‌ಕೆಎಸ್‌ಎ) ವಿರುದ್ಧ 9 ವಿಕೆಟ್‌ಗಳ ಜಯ ಗಳಿಸಿತು.

ಇಲ್ಲಿನ ದೇಶಪಾಂಡೆ ನಗರದ ಜಿಮ್‌ಖಾನಾ ಮೈದಾನದಲ್ಲಿ ಭಾನುವಾರದಿಂದ ಏ. 14ರ ವರೆಗೆ ನಡೆಯಲಿರುವ ಎಲ್ಫಿನ್‌ ಟ್ರೋಫಿ ಟ್ವೆಂಟಿ20 ಕ್ರಿಕೆಟ್ ಟೂರ್ನಿಯಲ್ಲಿ

ಎಚ್‌ಕೆಎಸ್‌ಎ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 127 ರನ್‌ ಗಳಿಸಿತು. ಅಲ್ಪ ಗುರಿ ಬೆನ್ನಟ್ಟಿದ ಎಚ್‌ಸಿಎ ತಂಡವು 11.4 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿತು.

ಪುನೀತ್‌ ಬಸವ ಮತ್ತು ಪುನೀತ್‌ ದೀಕ್ಷಿತ್‌ (28) ಜೋಡಿ ಮೊದಲ ವಿಕೆಟ್‌ ಜತೆಯಾಟದಲ್ಲಿ 8 ಓವರ್‌ಗಳಲ್ಲಿ 81 ರನ್ ಸೇರಿಸಿ ಉತ್ತಮ ಆರಂಭ ನೀಡಿತು. ಪುನೀತ್ ದೀಕ್ಷಿತ್‌ ಅವರನ್ನು ಸಂತೋಷ ಎಲ್‌ಬಿ ಬಲೆಗೆ ಕೆಡವಿದರು. ಪುನೀತ್ ಬಸವ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಎಚ್‌.ಎನ್‌. ಆದಿತ್ಯ (ಅಜೇಯ 16) ಉತ್ತಮ ಜತೆ ನೀಡಿದರು.

ಇದಕ್ಕೂ ಮುನ್ನ ಟಾಸ್‌ ಸೋತು ಬ್ಯಾಟಿಂಗ್ ಮಾಡಿದ ಎಚ್‌ಕೆಎಸ್‌ಎ ತಂಡ ಆರಂಭಿಕ ಆಘಾತ ಅನುಭವಿಸಿತು. ತಂಡದ ಮೊತ್ತ 45 ರನ್‌ಗಳಾಗುವಷ್ಟರಲ್ಲಿ 7 ವಿಕೆಟ್‌ಗಳು ಪತನವಾದವು. ಈ ಹಂತದಲ್ಲಿ ಸಂತೋಷ್‌ ಅರ್ಧಶತಕ (66) ಗಳಿಸಿ ತಂಡಕ್ಕೆ ಆಸರೆಯಾದರು.

ಎಲ್ಫಿನ್‌ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಚಾಲನೆ:

ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿಯ ಬೆಳ್ಳಿಹಬ್ಬದ ಪ್ರಯುಕ್ತ ಆಯೋಜಿಸಿರುವ ಎಲ್ಫಿನ್ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಗೆ ನಗರದ ಜಿಮ್‌ಖಾನಾ ಮೈದಾನದಲ್ಲಿ ಭಾನುವಾರ ಚಾಲನೆ ನೀಡಲಾಯಿತು. ಅತಿಥಿಗಳಾಗಿ ಆಗಮಿಸಿದ್ದ ಎಲ್ಫಿನ್‌ ಗ್ರೂಪ್‌ನ ಸಾಜಿದ್‌ ಪರಾಶ್, ವೈಭವ ಗ್ರೂಪ್‌ನ ನಂದಕುಮಾರ್, ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ವೀರಣ್ಣ ಸವಡಿ ಅವರು, ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿಯ 25 ವರ್ಷಗಳ ಪಯಣ ಮತ್ತು ಅದರ ಕಾರ್ಯ ಕುರಿತು ಮೆಚ್ಚುಗೆಯ ನುಡಿಗಳನ್ನಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ