ಹನುಮನ ಶಕ್ತಿ ಮತ್ತು ಶ್ರದ್ಧೆಯನ್ನು ಅಳವಡಿಸಿಕೊಳ್ಳಿ: ವೀರಭದ್ರಶಿವಾಚಾರ್ಯ ಸ್ವಾಮೀಜಿ

KannadaprabhaNewsNetwork | Published : Dec 14, 2024 12:47 AM

ಸಾರಾಂಶ

ಹನುಮಂತನು ಶಕ್ತಿಯ, ಭಕ್ತಿ ಮತ್ತು ಸಮರ್ಪಣೆಯ ಸ್ವರೂಪವಾಗಿದ್ದು, ರಾಮಾಯಣದ ಮೂಲಕ ಸರ್ವರ ಮನಸ್ಸನ್ನು ಗೆದ್ದಿರುವ ದೈವವಾಗಿದ್ದಾನೆ. ದೇಶದಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ ಎಂದು ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಕೊರಟಗೆರೆಯಲ್ಲಿ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಹನುಮಂತನು ಶಕ್ತಿಯ, ಭಕ್ತಿ ಮತ್ತು ಸಮರ್ಪಣೆಯ ಸ್ವರೂಪವಾಗಿದ್ದು, ರಾಮಾಯಣದ ಮೂಲಕ ಸರ್ವರ ಮನಸ್ಸನ್ನು ಗೆದ್ದಿರುವ ದೈವವಾಗಿದ್ದಾನೆ. ದೇಶದಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ ಎಂದು ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಹೊರವಲಯದ ಮಾರುತಿ ನಗರ ಮೂಡ್ಲಪಣ್ಣೆಯ ಶ್ರೀ ಬೈಲಾಂಜನೇಯಸ್ವಾಮಿ ದೇವಾಲಯದಲ್ಲಿ ಏರ್ಪಡಿಸಿದ್ದ ಶ್ರೀ ಹನುಮ ಜಯಂತಿ ಮಹೋತ್ಸವ ಹಾಗೂ ೨೫ ನೇ ವಾರ್ಷಿಕೋತ್ಸವ ಹಾಗೂ ಪಟ್ಟಣದ ಗುಂಡಾಜಂನೇಯಸ್ವಾಮಿ, ಗುಟ್ಟೆ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ನಡೆದ ವಿಶೇಷ ಹನುಮಜಯಂತಿ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.ಹನುಮಂತನು ಕೇವಲ ಒಬ್ಬ ದೇವರಲ್ಲ ಹನುಮನು ಶ್ರದ್ಧೆ, ಧೈರ್ಯ ಮತ್ತು ನಿಸ್ವಾರ್ಥ ಸೇವೆಯನ್ನು ಮನುಷ್ಯ ಜೀವನದಲ್ಲಿ ಹೇಗೆ ಪಾಲಿಸಬೇಕೆಂಬುದಕ್ಕೆ ಆದರ್ಶನಾಗಿದ್ದಾನೆ. ಹನುಮಂತನು ಅಪ್ರಮಿತ ಶಕ್ತಿ ಮತ್ತು ಧೈರ್ಯದಿಂದ ಪ್ರತಿಯೊಬ್ಬರಿಗೂ ಸ್ಪೂರ್ತಿಯ ಮೂಲವಾಗಿದೆ, ಹನುಮಂತನ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಲು ಪ್ರಯತ್ನಿಸುತ್ತಾರೆ. ವಿಶೇಷವಾಗಿ ಯುವಜನತೆ ಹನುಮಂತನ ಶಕ್ತಿಯ ಸಂಕೇತವಾಗಿ ತಮ್ಮಲ್ಲಿ ಆತ್ಮವಿಶ್ವಾಸ ಮತ್ತು ಶೌರ್ಯವನ್ನು ಬೆಳಿಸಿಕೊಳ್ಳುವುದಲ್ಲದೆ ತತ್ವ ಮತ್ತು ಜೀವನಶೈಲಿಯನ್ನು ಅನುಸರಿಸುವ ಮೂಲಕ ಜೀವನದಲ್ಲಿ ಸಾರ್ಥಕತೆ ಸಾಧಿಸಬಹುದಾಗಿದೆ ಎಂದು ತಿಳಿಸಿದರು.ಪಪಂ ಮಾಜಿ ಸದಸ್ಯ ಹಾಗೂ ದೇವಾಲಯದ ಧರ್ಮದರ್ಶಿ ಕೆ.ಎಲ್.ಆನಂದ್ ಮಾತನಾಡಿ ಪ್ರಚಲಿತ ಯುಗದಲ್ಲಿ ಹನುಮ ಜಯಂತಿ ಆಚರಣೆ ಸಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆಯಲ್ಲಿ ಹೊಸ ಅರ್ಥಗಳನ್ನು ಪಡೆದುಕೊಂಡಿದೆ. ಹನುಮಂತನ ಭಕ್ತಿ ಇದ್ದುದು ಶ್ರೀರಾಮನಲ್ಲಿ ರಾಮ ನಾಮ ಬಿಟ್ಟು ಬೇರೇನು ಅರಿಯದ ಹನುಮನಂತ ಇಂದು ಚಿರಂಜೀವಿಯಾಗಿ ಕಲಿಯುಗದಲ್ಲಿಯೂ ಸಹ ನೆಲೆಸಿದ್ದು ಅವನ ಆಶೀರ್ವಾದಿಂದ ಎಲ್ಲವೂ ಸಾಧಿಸುತ್ತದೆ ಎಂದರು. ಪ್ರಧಾನ ಅರ್ಚಕ ಮಾರತಿ ನೇತೃತ್ವದಲ್ಲಿ ನಡೆದ ಹನುಮ ಜಯಂತಿ ವಿಶೇಷ ಕಾರ್ಯಕ್ರಮದಲ್ಲಿ ಕೆ.ಎಲ್.ಆನಂದ್, ನಿವೃತ್ತ ಶಿಕ್ಷಕ ಬಿ.ಹನುಮಂತರೆಡ್ಡಿ, ಸತ್ಯನಾರಾಯಣ ಶ್ರೇಷ್ಠಿ, ಗಿರೀಶ್, ಬೆಂಗಳೂರಿನ ಹನುಮಂತರಾಜು, ಸಂಜೀವಣ್ಣ, ಕೆ.ಎನ್.ಲೋಕೇಶ್, ಕೇಶವಮೂರ್ತಿ, ಕಮಲ, ಡಿ.ನರಸಿಂಹಯ್ಯ, ಗಿರಿಜಾ, ಜಯಲಕ್ಷ್ಮಿಮ್ಮ, ಆರ್.ಲಕ್ಷ್ಮಿ, ಸುಧಾ, ಭರತ್, ಹನು ಮಂತ, ಚಂದ್ರಮ್ಮ, ಆಕಾಶ್, ಗಗನ್ ಸೇರಿದಂತೆ ನೂರಾರು ಭಕ್ತರು ಹನುಮಂತಮ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

Share this article