ಜೀವನದಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ: ನಿಶ್ಚಲಾನಂದನಾಥ ಸ್ವಾಮೀಜಿ

KannadaprabhaNewsNetwork |  
Published : Apr 14, 2026, 02:00 AM IST
13ಕೆಎಂಎನ್ ಡಿ21 | Kannada Prabha

ಸಾರಾಂಶ

ಹಿಂದು ಧರ್ಮ ಸನಾತನ ಧರ್ಮವಾಗಿದೆ. ಧರ್ಮ ಉಳಿಸಲು ಹಿಂದುಗಳು ಯಾವಾಗಲು ಜಾಗೃತರಾಗಿಬೇಕು. ಹಿಂದು ಧರ್ಮದ ಹಾಗೂ ಸಂಸ್ಕೃತಿಕ ಬಗ್ಗೆ ಅಪಾರವಾದ ಗೌರವ ಬೆಳೆಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಪ್ರತಿಯೊಬ್ಬರು ಜೀವನದಲ್ಲಿ ಮಾನವೀಯ ಮೌಲ್ಯ, ಸಂಸ್ಕಾರ, ಆಚಾರ ವಿಚಾರ ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.

ನಗರದ 20ನೇ ವಾರ್ಡ್ ನಲ್ಲಿ ಸುಮಾರು 22 ಲಕ್ಷ ರು. ವೆಚ್ಚದ ಶ್ರೀಮದ್ದೂರಮ್ಮ ದೇವರ ಮೂಲ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸಮಾಜಕ್ಕೆ ನಾವು ದುಡಿದ ಹಣದಲ್ಲಿ ಒಂದಷ್ಟು ಹಣವನ್ನು ನೊಂದವರಿಗೆ ನೀಡುವ ಮೂಲಕ ಅವರ ಬಾಳಿಗೆ ಬೆಳೆಗಾಗಬೇಕು. ಸಮಾಜದ ಸ್ವಸ್ಥ್ಯ ಕಾಪಾಡಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.

ನಗರಸಭಾ ಮಾಜಿ ಉಪಾಧ್ಯಕ್ಷ ತೈಲೂರು ಪ್ರಸನ್ನ, ಭಕ್ತಾದಿಗಳು, ದಾನಿಗಳ ಸಹಕಾರದಿಂದ ಶ್ರೀಮದ್ದೂರಮ್ಮ ದೇವರ ಮೂಲ ಮಂಟಪ ನಿರ್ಮಾಣಕ್ಕೆ ಮುಂದಾಗಿರುವುದು ಅವರಲ್ಲಿರುವ ಧಾರ್ಮಿಕ ಶ್ರದ್ಧೆ ತೋರಿಸುತ್ತದೆ. ಇವರಂತೆ ಪ್ರತಿಯೊಬ್ಬರು ಶ್ರದ್ಧೆ ಮೈಗೂಡಿಸಿಕೊಂಡು ದೇಗುಲಗಳನ್ನು ನಿರ್ಮಿಸಿದರೆ ಜನರ ಮನಸಿನಲ್ಲಿ ಭ್ರಾತೃತ್ವ ಭಾವನೆ ಮೂಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು.

ಹಿಂದು ಧರ್ಮ ಸನಾತನ ಧರ್ಮವಾಗಿದೆ. ಧರ್ಮ ಉಳಿಸಲು ಹಿಂದುಗಳು ಯಾವಾಗಲು ಜಾಗೃತರಾಗಿಬೇಕು. ಹಿಂದು ಧರ್ಮದ ಹಾಗೂ ಸಂಸ್ಕೃತಿಕ ಬಗ್ಗೆ ಅಪಾರವಾದ ಗೌರವ ಬೆಳೆಸಿಕೊಳ್ಳಬೇಕು ಎಂದರು.

ನಗರಸಭಾ ಮಾಜಿ ಉಪಾಧ್ಯಕ್ಷ ತೈಲೂರು ಟಿ.ಆರ್.ಪ್ರಸನ್ನಕುಮಾರ್ ಮಾತನಾಡಿ, ಶ್ರೀಮದ್ದೂರಮ್ಮ ದೇವರ ಮೂಲ ಮಂಟಪ ನಿರ್ಮಾಣಕ್ಕೆ ವೈಯಕ್ತಿವಾಗಿ 5 ಲಕ್ಷ ರುಗಳ ದೇಣಿಗೆ ನೀಡುತ್ತಿದ್ದೇನೆ. ಭಕ್ತರು, ದಾನಿಗಳು ಸಹಾಯದಿಂದ ಹಲವು ವರ್ಷಗಳಿಂದ ಮೂಲ ಮಂಟಪ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು.

ಇದೇ ವೇಳೆ ನಿಶ್ಚಲಾನಂದನಾಥ ಶ್ರೀಗಳು ಟಿ.ಆರ್.ಪ್ರಸನ್ನಕುಮಾರ್ ಜ್ಯೋತಿ ದಂಪತಿಗೆ ಅಭಿನಂದಿಸಿದರು.

ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಮುಖಂಡರಾದ ಕೆ.ಎಂ.ರವಿ, ಎಂ.ಪಿ.ಮೃತ್ಯುಂಜಯ, ರಮೇಶ್, ಮೋಹನ್, ಶಿವಮಾದು, ವೆಂಕಟೇಶ್, ಕರಿಯಪ್ಪ, ಸಂಜಯ್, ಸಂಜು, ಸೋಮು, ಶಶಾಂಕ್, ದೇವರಾಜು, ರಾಮಚಂದ್ರ, ಗುರುಸ್ವಾಮಿ, ರಜನಿರಾಜ್, ವಿ.ಸಿ.ಉಮಾಶಂಕರ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು
ಪಶುವೈದ್ಯೆ ಸಮೀಕ್ಷಾ ಸಾವಿಗೆ ಕಾರಣವಾಗಿದ್ದ ನೀರಾನೆ ಸಾವು