ಅಂಬಿಗರ ಚೌಡಯ್ಯ ಆದರ್ಶ ಮೈಗೂಡಿಸಿಕೊಳ್ಳಿ

KannadaprabhaNewsNetwork |  
Published : Jan 22, 2026, 02:45 AM IST
೨೧ ವೈಎಲ್‌ಬಿ ೦೨ಯಲಬುರ್ಗಾದ ತಾಪಂ ಕಚೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಹನ್ನೆರಡನೆಯ ಶತಮಾನದ ಬಸವರಾದಿ ಶರಣರಲ್ಲಿ ಅಂಬಿಗರ ಚೌಡಯ್ಯ ಪ್ರತಿಭಾವಂತ ವಚನಕಾರರಾಗಿದ್ದರು.

ಯಲಬುರ್ಗಾ: ಸಮಾಜದ ಒಳಿತಿಗಾಗಿ ಶ್ರಮಿಸಿದ ಅಂಬಿಗರ ಚೌಡಯ್ಯ ಅವರ ಆದರ್ಶ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಾಪಂ ಇಒ ನೀಲಗಂಗಾ ಬಬಲಾದ ಹೇಳಿದರು.

ಪಟ್ಟಣದ ತಾಪಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹನ್ನೆರಡನೆಯ ಶತಮಾನದ ಬಸವರಾದಿ ಶರಣರಲ್ಲಿ ಅಂಬಿಗರ ಚೌಡಯ್ಯ ಪ್ರತಿಭಾವಂತ ವಚನಕಾರರಾಗಿದ್ದರು. ತಮ್ಮ ವಚನಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದುವ ಕೆಲಸ ಮಾಡಿದ್ದಾರೆ.ಅವರ ವಚನಗಳಲ್ಲಿ ನಿರ್ದಾಕ್ಷಿಣ್ಯ ಮನೋಭಾವ ಮತ್ತು ಸಾಮಾಜಿಕ ಕಳಕಳಿ ಇದೆ. ಮೌಢ್ಯತೆ, ಕಂದಾಚಾರದ ವಿರುದ್ಧ ಕ್ರಾಂತಿ ನಡೆಸಿದ ಮಹಾತ್ಮರ ತತ್ವಾದರ್ಶ ಅಳವಡಿಸಿಕೊಳ್ಳುವ ಜತೆಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು. ಯುವಕರು ಶರಣರ ಚಿಂತನೆ ಬದುಕಿನಲ್ಲಿ ರೂಢಿಸಿಕೊಂಡರೆ, ಜಾತ್ಯಾತೀತ ಸಮಾಜ ಮತ್ತು ಮಾನವೀಯ ಮೌಲ್ಯ ಬಿತ್ತಲು ಸಹಕಾರಿಯಾಗುತ್ತದೆ ಎಂದರು.

ಈ ಸಂದರ್ಭ ತಾಪಂ ನೌಕರರಾದ ಹಜರತ್‌ಅಲಿ, ಬಸವರಾಜ ಹಳ್ಳಿ, ರತ್ನಮ್ಮ, ಶರಣಪ್ಪ ಇಂಡಿ, ಸತೀಶ ಹಟ್ಟಿ, ಪ್ರಶಾಂತ ಬಡಿಗೇರ್, ಶರಣಪ್ಪ ಹಾಳಕೇರಿ, ಉಮೇಶ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ