ಲಕ್ಷ್ಮೇಶ್ವರ: ಶರಣರು ನುಡಿದಂತೆ ನಡೆದು ಆದರ್ಶದ ಬದುಕು ಸಾಗಿಸಿದರು. ಸಮಾಜದ ಏಳ್ಗೆಗಾಗಿ ಜೀವನ ಮುಡಿಪಾಗಿಟ್ಟಿದ್ದರು. ಶರಣತ್ವ ಎಂದರೆ ಸಮಾಜಕ್ಕೆ ಮಾದರಿಯಾಗುವಂತೆ ಬದುಕುವುದು ಎಂದು ಮಾಜಿ ಸಂಸದ ಐ.ಜಿ. ಸನದಿ ತಿಳಿಸಿದರು.
12ನೇ ಶತಮಾನದ ಶರಣರು ಸಮಾಜಿಕ ಕ್ರಾಂತಿ ಮಾಡುವ ಮೂಲಕ ಸಮಾಜದ ಸುಧಾರಣೆಗೆ ಅಮೂಲ್ಯ ಕಾಣಿಕೆ ನೀಡಿದರು. ಶರಣರು ತಮ್ಮ ಜೀವನದಲ್ಲಿ ಸಮಾಜದ ಮೇಲು- ಕೀಳು ತೊಡೆದು ಹಾಕುವಲ್ಲಿ ಶ್ರಮಿಸಿದರು. ಶರಣರು ನುಡಿದಂತೆ ಬದುಕಿ ತೋರಿದರು. ಶರಣರ ನುಡಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ವಕೀಲ ಬಸವರಾಜ ಬಾಳೇಶ್ವರಮಠ ಮಾತನಾಡಿ, ಶರಣರು ಜೀವನ ನಮಗೆ ದಾರಿದೀಪವಾಗಿವೆ. ಶರಣರ ನುಡಿಗಳು ಸಮಾಜದ ಒಳಿತಿಗೆ ಮಿಡಿಯುತ್ತಿದ್ದವು. ವಚನಗಳು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕಾರ್ಯವನ್ನು 12ನೇ ಶತಮಾನದಲ್ಲಿಯೇ ಮಾಡಿದ್ದವು ಎಂದರು.ನಾಗರಾಜ ಕುಲಕರ್ಣಿ ಮಾತನಾಡಿ 12ನೇ ಶತಮಾನದಲ್ಲಿ ಬೀಸಿದ ಸಾಮಾಜಿಕ ಬದಲಾವಣೆಯ ಗಾಳಿಯು ಇಂದಿಗೂ ತನ್ನ ಪ್ರಭಾವ ಉಳಿಸಿಕೊಂಡಿರುವುದು ಉತ್ತಮ ಸಂಗತಿಯಾಗಿದೆ ಎಂದರು.
ಅಧ್ಯಕ್ಷತೆಯನ್ನು ದೇವಣ್ಣ ಬಳಿಗಾರ ವಹಿಸಿ ಮಾತನಾಡಿದರು. ಪಿ.ಬಿ. ಕರಾಟೆ, ಬಸಣ್ಣ ಬೆಟಗೇರಿ, ಲಲಿತಾ ಕೆರಿಮನಿ, ಗಂಗಾಧರ ಅರಳಿ, ಎಲ್.ಎಸ್. ಅರಳಹಳ್ಳಿ, ಡಿ.ಎಫ್. ಪಾಟೀಲ, ಮಾಲಾದೇವಿ ದಂದರಗಿ, ಗೀತಾ ಮಾನ್ವಿ, ಶೈಲಜಾ ಆದಿ, ಪ್ರತಿಮಾ ಮಹಾಜನಶೆಟ್ಟರ, ಮಹಾನಂದ ಕೊಣ್ಣುರ, ಶಾಂತಾ ಅಬ್ಬಿಗೇರಿ, ಹುಬ್ಬಳ್ಳಿ, ಮಡಿವಾಳರ, ಈಶ್ವರ ಮೆಡ್ಲೇರಿ, ಬಸವರಾಜ ವಡಕಣ್ಣವರ, ಜೆ.ಎಸ್. ರಾಮಶೆಟ್ಟರ, ರೇಖಾ ವಡಕಣ್ಣವರ, ಎಸ್.ಬಿ. ಕೊಣ್ಣೂರ, ಎನ್.ಆರ್. ಸಾತಪೂತೆ ಸೇರಿದಂತೆ ಅನೇಕರು ಇದ್ದರು. ರತ್ನಾ ಕರ್ಕಿ ಕಾರ್ಯಕ್ರಮ ನಿರ್ವಹಿಸಿದರು. ನಿರ್ಮಲಾ ಅರಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಅಧ್ಯಕ್ಷರಾಗಿ ನಿತಿನ್ ನಬೀನ್ ಆಯ್ಕೆ, ಸಂಭ್ರಮಲಕ್ಷ್ಮೇಶ್ವರ: ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬೀನ್ ಆಯ್ಕೆಯಾಗಿರುವ ಹಿನ್ನೆಲೆ ಮಂಗಳವಾರ ಸಂಜೆ ಪಟ್ಟಣದ ಬಿಜೆಪಿ ಕಾರ್ಯಕರ್ತರು ಮಹಾಕವಿ ಪಂಪ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಈ ವೇಳೆ ಶಿರಹಟ್ಟಿ ಮಂಡಲದ ಬಿಜೆಪಿ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಮಾತನಾಡಿ, ಬಿಜೆಪಿ ಪ್ರಪಂಚದಲ್ಲಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷವಾಗಿದೆ. ನಿತಿನ್ ನಬೀನ್ ಅವರು ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕಾರ್ಯಕತರ್ತರಲ್ಲಿ ಹೆಚ್ಚಿನ ಬಲ ಮೂಡಿಸಿದೆ. ಯುವಕರಾದ ನೂತನ ರಾಷ್ಟ್ರೀಯ ಅಧ್ಯಕ್ಷರು ಪಕ್ಷವನ್ನು ಇನ್ನಷ್ಟು ಬಲಪಡಿಸಿ ದೇಶ ಅಭ್ಯುದಯಕ್ಕೆ ತಮ್ಮದೆ ಆದ ಕಾಣಿಕ ನೀಡುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.ಈ ವೇಳೆ ಜಿಪಂ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡರ, ಎಂ.ಆರ್. ಪಾಟೀಲ, ನಿಂಗಪ್ಪ ಬನ್ನಿ, ರಮೇಶ ದನದಮನಿ, ನೀಲಪ್ಪ ಹತ್ತಿ, ಮಹಾದೇವಪ್ಪ ಅಣ್ಣಿಗೇರಿ, ಅನಿಲ ಮುಳಗುಂದ, ನಿಂಬಣ್ಣ ಮಡಿವಾಳರ, ವಿಜಯ ಕುಂಬಾರ, ಶಕ್ತಿ ಕತ್ತಿ, ಫಕ್ಕಿರೇಶ ಕವಲೂರ, ಭೀಮಣ್ಣ ಯಂಗಾಡಿ, ಸಾಸಲವಾಡ, ರಮೇಶ ಹಾಳತೋಟದ, ವಾಸು ಪಾಟೀಲ, ಮೋಮಿನ್, ನೀಲಪ್ಪ ಕರ್ಜಕಣ್ಣವರ, ಸುರೇಶ ವೆರ್ಣೇಕರ, ಬಾಬಣ್ಣ ವರ್ಣೇಕರ್, ಪ್ರಕಾಶ ಶೇಠ್, ವಿ.ಎಸ್. ಪಶುಪತಿಹಾಳ ಸೇರಿದಂತೆ ಅನೇಕರು ಇದ್ದರು.