ನೆಲಮಂಗಲ/ದಾಬಸ್‍ಪೇಟೆ: ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಯುವಶಕ್ತಿಯ ಪಾತ್ರ ಮುಖ್ಯವಾದದ್ದು, ಯುವಸಮೂಹ ಮಹನೀಯುರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಧನೆಯ ಹಾದಿಯತ್ತ ಹೆಜ್ಜೆ ಹಾಕಬೇಕು ಎಂದು ಜಾನಪದ ಸಾಹಿತಿ ಡಾ.ಅಪ್ಪಗೆರೆ ತಿಮ್ಮರಾಜು ತಿಳಿಸಿದರು.
ಹುಟ್ಟುವಾಗ ಪ್ರತಿಯೊಬ್ಬರು ಸಾಮಾನ್ಯರೆ. ಕಠಿಣ ಪರಿಶ್ರಮದಿಂದ ಜೀವನದಲ್ಲಿ ಸಾಧಕರಾಗಿ ಬೆಳೆಯುತ್ತಾರೆ. ಯಾರು ಬೆವರಿನಿಂದ ಸ್ನಾನ ಮಾಡುತ್ತಾರೋ ಅಂತಹ ವ್ಯಕ್ತಿಗಳು ಸಾಧಕರಾಗುತ್ತಾರೆ. ಸಾಧನೆಗೆ ಸತತ ಪರಿಶ್ರಮದ ಅಗತ್ಯವಿದ್ದು, ಪ್ರತಿ ವಿದ್ಯಾರ್ಥಿಯೂ ಜೀವನದಲ್ಲಿ ಮಹನೀಯರನ್ನು ಆದರ್ಶವಾಗಿ ಆಯ್ದುಕೊಳ್ಳಬೇಕು ಎಂದರು.
ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಸರಿಯಾದ ಆದರ್ಶ ವ್ಯಕ್ತಿತ್ವಗಳನ್ನು ಮಾದರಿಯಾಗಿ ಇಟ್ಟುಕೊಳ್ಳುವುದು ಮುಖ್ಯ. ಸಾಧಕರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದರೆ ಉನ್ನತ ಸಾಧನೆ ಮಾಡಲು ಪ್ರೇರಣೆ ಸಿಗುತ್ತದೆ. ಕ್ರೋದ, ಮದ-ಮತ್ಸರಗಳನ್ನು ಬಿಟ್ಟು ಸಹಬಾಳ್ವೆ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಯುವನಟ ಮಹೇಶ್ ಸುಭಾಷ್ ನೆಟ್ರೆಕಾರ್, ಸಂಗೊಳ್ಳಿ ರಾಯಣ್ಣ ಟ್ರಸ್ಟ್ ಅಧ್ಯಕ್ಷ, ಉಜ್ಜನಪ್ಪ, ಸಾಹಿತಿ ಶಶಿಕುಮಾರ್, ಹಿರಿಯ ನಾಗರೀಕರಾದ ನಾಗರಾಜು, ಕಸ್ತೂರಿ ಬೆನ್, ಮುಖ್ಯಶಿಕ್ಷಕ ಕೆಂಪಣ್ಣ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನೆಲಮಂಗಲದ ಬಸವೇಶ್ವರ ಆಂಗ್ಲ ಪ್ರೌಢಶಾಲೆಯಲ್ಲಿ ವಿವಿಧ ಕ್ಷೇತ್ರದ ಗಣ್ಯರ ದಿನಾಚರಣೆ ಕಾರ್ಯಕ್ರಮಕ್ಕೆ ಶ್ರೀ ಸಿದ್ದಲಿಂಗ ಸ್ವಾಮೀಜಿ, ಜಾನಪದ ಸಾಹಿತಿ ಡಾ.ಅಪ್ಪಗೆರೆ ತಿಮ್ಮರಾಜು ಚಾಲನೆ ನೀಡಿದರು