ಗ್ರಾಮೀಣ ಭಾಗದಲ್ಲಿ ಕಸೂತಿ, ವಸ್ತ್ರವಿನ್ಯಾಸ ಕಾರ್ಯಾಗಾರ

KannadaprabhaNewsNetwork |  
Published : Jun 10, 2025, 05:32 AM IST
ಕ್ಯಾಪ್ಷನ9ಕೆಡಿವಿಜಿ35 ಹರಿಹರ ತಾ. ಬೆಳ್ಳೂಡಿಯಲ್ಲಿ ಜಿಎಂಯು ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದಿಂದ ಕಸೂತಿ, ವಸ್ತ್ರ ವಿನ್ಯಾಸ ಕಾರ್ಯಾಗಾರವನ್ನು ಗ್ರಾಪಂ ಅಧ್ಯಕ್ಷ ಬಿ.ಉಮೇಶ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಗ್ರಾಪಂ ಕೇಂದ್ರದಲ್ಲಿ ದಾವಣಗೆರೆ ಜಿಎಂ ವಿಶ್ವವಿದ್ಯಾಲಯದ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದಿಂದ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸೋಮವಾರ ಗ್ರಾಮೀಣ ಭಾಗದಲ್ಲಿ ಕಸೂತಿ ಮತ್ತು ವಸ್ತ್ರವಿನ್ಯಾಸ ಕಾರ್ಯಾಗಾರ ಆರಂಭಿಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಗ್ರಾಪಂ ಕೇಂದ್ರದಲ್ಲಿ ದಾವಣಗೆರೆ ಜಿಎಂ ವಿಶ್ವವಿದ್ಯಾಲಯದ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದಿಂದ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸೋಮವಾರ ಗ್ರಾಮೀಣ ಭಾಗದಲ್ಲಿ ಕಸೂತಿ ಮತ್ತು ವಸ್ತ್ರವಿನ್ಯಾಸ ಕಾರ್ಯಾಗಾರ ಆರಂಭಿಸಲಾಯಿತು.

ಗ್ರಾಪಂ ಅಧ್ಯಕ್ಷ ಬಿ.ಉಮೇಶ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, 10 ದಿನಗಳ ಈ ಕಾರ್ಯಾಗಾರದಲ್ಲಿ ತರಬೇತಿ ಪಡೆದು, ಕುಶಲತೆ ಸಾಧಿಸಬೇಕು. ಇದು ಸಾಧ್ಯವಾದಲ್ಲಿ ಈ ಕಾರ್ಯಕ್ರಮ ಸಾರ್ಥಕತೆ ಕಾಣಲಿದೆ. ಒಂದು ದಿನವೂ ತಪ್ಪಿಸದೇ ತರಬೇತಿಯಲ್ಲಿ ಪಾಲ್ಗೊಂಡು, ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಜಿಎಂ ವಿಶ್ವವಿದ್ಯಾಲಯದ ವೃತ್ತಿಪರ ತರಬೇತಿ ಶಾಲೆ ನಿರ್ದೇಶಕ ಡಾ. ಬಿ.ಆರ್. ಶ್ರೀಧರ್ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಜಿ.ಮಲ್ಲಿಕಾರ್ಜುನಪ್ಪ ಅವರ ಆಶಯವಾಗಿತ್ತು. ಅದರೊಂದಿಗೆ 2001ರಲ್ಲಿ ಪ್ರಾರಂಭವಾದ ಜಿಎಂ ತಾಂತ್ರಿಕ ಮಹಾವಿದ್ಯಾಲಯ 25 ವರ್ಷಗಳ ಪೂರೈಸಿದೆ. ಇದರ ಭಾಗವಾಗಿ 2023ರಲ್ಲಿ ಶುರುವಾದ ಜಿಎಂ ವಿಶ್ವವಿದ್ಯಾಲಯ ಬೃಹತ್ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದರು.

ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯ ವೃತ್ತಿ ಕೌಶಲ್ಯ ತರಬೇತಿಗೆ ಒತ್ತು ಕೊಡುತ್ತಿದೆ. ಈ ನಿಟ್ಟಿನಲ್ಲಿ ಬಿಓಕ್ ಪದವಿ (ಬ್ಯಾಚುಲರ್ ಆಫ್ ಓಕೇಷನಲ್ ಟ್ರೈನಿಂಗ್ ಕೋರ್ಸ್) ಜೊತೆಗೆ ವಿದ್ಯುತ್ ವಾಹನ ತಂತ್ರಜ್ಞಾನ, ಫ್ಯಾಷನ್ ತಂತ್ರಜ್ಞಾನ, ಉತ್ಪಾದನಾ ತಂತ್ರಜ್ಞಾನ, ಪಾಕಶಾಲೆ ಮತ್ತು ಅಡುಗೆ ತಂತ್ರಜ್ಞಾನ. ಬ್ಯೂಟಿ ಕೇರ್ ಅಂಡ್ ಹೇರ್ ಡ್ರೆಸ್ಸಿಂಗ್, ಡ್ರೆಸ್ ಮೇಕಿಂಗ್ ಅಂಡ್ ಗ್ರಾಫಿಕ್ ಡಿಸೈನ್ ಈ ಹೊಸ ವೃತ್ತಿಪರ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಕಾರ್ಯಾಗಾರ ನಡೆಸಲು ಸಹಕರಿಸಿದ ಬೆಳ್ಳೂಡಿ ಗ್ರಾಮ ಪಂಚಾಯಿತಿಗೆ ಧನ್ಯವಾದ ಎಂದು ಹೇಳಿದರು.

ಜಿಎಂ ವಿವಿ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರದ ಡಾ. ಯು.ಎಂ.ನೇತ್ರಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳ್ಳೂಡಿ ಗ್ರಾಪಂ ಉಪಾಧ್ಯಕ್ಷೆ ನೇತ್ರಮ್ಮ, ಸದಸ್ಯರಾದ ಗೀತಮ್ಮ, ಸುಧಾ, ವೀಣಾ, ರತ್ನಮ್ಮ, ಸುನೀತಾ, ವೀರೇಶ್, ಪರಮೇಶ್ವರಪ್ಪ, ಪಿಡಿಓ ಶಿವಪ್ಪ ಬಿರಾದಾರ್ ಸೇರಿದಂತೆ ತರಬೇತುದಾರರಾದ ಪ್ರೀತಿ, ಸುಮಾ, ಗ್ರಾಮದ ಮಹಿಳೆಯರು ಇದ್ದರು. ಪಾಲಿಟೆಕ್ನಿಕ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಚ್.ಎಸ್. ಅಶೋಕ್, ನಿರೂಪಿಸಿ, ವಂದಿಸಿದರು.

- - -

(** ಈ ಫೋಟೋ-ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಿ)

-9ಕೆಡಿವಿಜಿ35:

ಹರಿಹರ ತಾಲೂಕಿನ ಬೆಳ್ಳೂಡಿಯಲ್ಲಿ ಜಿಎಂಯು ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದಿಂದ ಆರಂಭಿಸಲಾದ ಕಸೂತಿ, ವಸ್ತ್ರವಿನ್ಯಾಸ ಕಾರ್ಯಾಗಾರವನ್ನು ಗ್ರಾಪಂ ಅಧ್ಯಕ್ಷ ಬಿ.ಉಮೇಶ್ ಉದ್ಘಾಟಿಸಿದರು. ಡಾ. ಬಿ.ಆರ್. ಶ್ರೀಧರ್, ಡಾ. ಯು.ಎಂ.ನೇತ್ರಾವತಿ, ನೇತ್ರಮ್ಮ ಮತ್ತಿತರರು ಪಾಲ್ಗೊಂಡಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌