ಎನ್‌ಐಎಫ್‌ಟಿ ವಿದ್ಯಾರ್ಥಿಗಳಿಂದ ಕಸೂತಿ ಕ್ಷೇತ್ರಾಧ್ಯಯನ

KannadaprabhaNewsNetwork |  
Published : Jul 18, 2025, 12:45 AM IST
ತತತತ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯ ಬಂಜಾರ ಕಸೂತಿ ಸಂಸ್ಥೆಗೆ ಬೆಂಗಳೂರಿನ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ಫ್ಯಾಶನ್‌ ಟೆಕ್ನಾಲಜಿ ಸಂಸ್ಥೆಯ ವಿದ್ಯಾರ್ಥಿಗಳು ಕ್ಷೇತ್ರಾಧ್ಯಯನಕ್ಕಾಗಿ ಆಗಮಿಸಿದ್ದಾರೆ. ಜೊತೆಗೆ ದೇಶದ ನಾನಾ ಭಾಗಗಳು ವಸ್ತ್ರವಿನ್ಯಾಸ ಸಂಸ್ಥೆಗಳು ಕೂಡ ಈ ಬಗ್ಗೆ ಆಸಕ್ತಿ ತೋರಿಸಿ, ಸಂಪರ್ಕಿಸುತ್ತಿವೆ ಎಂದು ಸಂಸ್ಥೆಯ ಸಂಸ್ಥಾಪಕಿ ಆಶಾ.ಎಂ.ಪಾಟೀಲ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ಬಂಜಾರ ಕಸೂತಿ ಸಂಸ್ಥೆಗೆ ಬೆಂಗಳೂರಿನ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ಫ್ಯಾಶನ್‌ ಟೆಕ್ನಾಲಜಿ ಸಂಸ್ಥೆಯ ವಿದ್ಯಾರ್ಥಿಗಳು ಕ್ಷೇತ್ರಾಧ್ಯಯನಕ್ಕಾಗಿ ಆಗಮಿಸಿದ್ದಾರೆ. ಜೊತೆಗೆ ದೇಶದ ನಾನಾ ಭಾಗಗಳು ವಸ್ತ್ರವಿನ್ಯಾಸ ಸಂಸ್ಥೆಗಳು ಕೂಡ ಈ ಬಗ್ಗೆ ಆಸಕ್ತಿ ತೋರಿಸಿ, ಸಂಪರ್ಕಿಸುತ್ತಿವೆ ಎಂದು ಸಂಸ್ಥೆಯ ಸಂಸ್ಥಾಪಕಿ ಆಶಾ.ಎಂ.ಪಾಟೀಲ ತಿಳಿಸಿದ್ದಾರೆ.

ಈ ಬಗ್ಗೆ ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಜಯಪುರ ಜಿಲ್ಲೆಯಲ್ಲಿ ಮೊದಲಿನಿಂದಲೂ ಲಂಬಾಣಿ ಕಲೆ, ಕಸೂತಿ ಇತ್ಯಾದಿಗಳು ಬೇರೂರಿವೆ. ಈ ಸಾಂಪ್ರದಾಯಿಕ ಕೌಶಲ್ಯವನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಬಂಜಾರ ಕಸೂತಿ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ಏಳೆಂಟು ವರ್ಷಗಳಿಂದ ಬಂಜಾರ ತಾಂಡಾಗಳ ಮಹಿಳೆಯರನ್ನು ಸಂಪರ್ಕಿಸಿ, ಕಲೆಗೆ ಸಮಕಾಲೀನ ಸ್ಪರ್ಶ ನೀಡಲಾಗುತ್ತಿದೆ. ಇದಕ್ಕೆ ಮಾರುಕಟ್ಟೆಯನ್ನೂ ಸೃಷ್ಟಿಸಲಾಗಿದ್ದು, ಇಲ್ಲಿ ಸಿದ್ಧಪಡಿಸಲಾಗುವ ಉತ್ಪನ್ನಗಳನ್ನು ದೇಶದ ವಿವಿಧೆಡೆಗಳಲ್ಲಿ ಪ್ರದರ್ಶನ ಮತ್ತು ವಾಣಿಜ್ಯ ಮೇಳಗಳಿಗೂ ತಲುಪಿಸಲಾಗಿದೆ ಎಂದರು.

ಸದ್ಯಕ್ಕೆ ಬೆಂಗಳೂರಿನ ಎನ್.ಐ.ಎಫ್.ಟಿ. ಸಂಸ್ಥೆಯ ನಿಟ್-ವೇರ್‌ ವಿಭಾಗದ ೩೮ ವಿದ್ಯಾರ್ಥಿಗಳು ಕ್ಷೇತ್ರಾಧ್ಯಯನಕ್ಕೆ ಬಂದಿದ್ದು, ಪ್ರತ್ಯಕ್ಷ ಅನುಭವಕ್ಕೆ ತಾಂಡಾಗಳಿಗೆ ಭೇಟಿ ನೀಡುತ್ತಿದ್ದಾರೆ. ಇವರಿಗೆ ಸಂಸ್ಥೆಯ ಸಿಬ್ಬಂದಿ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದು, ಬಂಜಾರ ಜೀವನ ಶೈಲಿ, ಕಸೂತಿಯ ಸೂಕ್ಷ್ಮತೆ ಇವುಗಳ ಚಿತ್ರೀಕರಣ ನಡೆಯುತ್ತಿದೆ ಎಂದು ಹೇಳಿದರು.

ಸಂಸ್ಥೆಯ ಸಹಸಂಸ್ಥಾಪಕಿ ಸೀಮಾ ಕಿಶೋರ್‌, ಕೆಲವರ್ಷಗಳ ಹಿಂದೆ ಜನರಿಗೆ ರಾಜಾಸ್ಥಾನಿ ಮತ್ತು ಗುಜರಾತಿ ಬಂಜಾರ ಕಲೆಗಳ ಬಗ್ಗೆ ಮಾತ್ರ ಗೊತ್ತಿತ್ತು. ಈಗ ಕರ್ನಾಟಕದ ಕಸೂತಿ ಕೂಡ ಜನಪ್ರಿಯವಾಗಿದೆ. ಈವರೆಗೆ ನಾವು ೧೮ ಮೇಳಗಳಲ್ಲಿ ಪಾಲ್ಗೊಂಡಿದ್ದು, ೨೦೨೪ರಲ್ಲಿ ದೆಹಲಿಯಲ್ಲಿ ನಡೆದ ಇಂಡಿಯಾ ಇಂಟರ್‌ನ್ಯಾಷನಲ್‌ ಟ್ರೇಡ್‌ ಫೇರ್‌ನಲ್ಲೂ ಭಾಗವಹಿಸಿದ್ದೆವು. ಇಲ್ಲಿನ ಉತ್ಪನ್ನಗಳನ್ನು ಅಮೆರಿಕ, ಯೂರೋಪ್‌ ದೇಶಗಳಿಗೂ ಕಳಿಸಲು ವ್ಯವಸ್ಥೆ ರೂಪಿಸಲಾಗಿದೆ. ಇದು ಲಾಭರಹಿತ ಸಂಸ್ಥೆಯಾಗಿದೆ. ಈ ಮೂಲಕ ಮಹಿಳೆಯರ ಸಬಲೀಕರಣವಾಗುತ್ತಿದೆ ಎಂದು ತಿಳಿಸಿದರು.

PREV

Latest Stories

ಕೆಸರು ಗದ್ದೆಯಾದ ಮಹದೇವನಗರದ ರಸ್ತೆ, ದುರಸ್ತಿಗೆ ಗ್ರಾಮಸ್ಥರ ಆಗ್ರಹ
ಸದಾಶಿವ ಶೆಟ್ಟಿಗಾರ್‌, ಪಾತಾಳ ವೆಂಕಟ್ರಮಣ ಭಟ್‌ ನಿಧನ: ಡಾ.ತಲ್ಲೂರು ಸಂತಾಪ
ಹಾಲೇಕಲ್ಲು ಪಿಡಿಒ ಭ್ರಷ್ಟಾಚಾರ ತನಿಖೆ ನಡೆಸಿ: ನಾಗರಾಜ್‌